Asianet Suvarna News Asianet Suvarna News

Vijayapura: ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮಹೇಂದ್ರ ನಾಯಕ್!

ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಜನಮನ್ನಣೆ ಗಳಿಸಿದ್ದ ಮಹೇಂದ್ರ ನಾಯಕ್ ತಮ್ಮ ಸಿಪಿಐ ಹುದ್ದೆಗೆ ಕೊಟ್ಟಿದ್ದು ವಿಜಯಪುರದ ನಾಗಠಾಣ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಖಾಡ ರೆಡಿ ಮಾಡಿಕೊಂಡಿದ್ದಾರೆ. 

mahendra nayak resigned for police inspector job to enter politics in vijayapura gvd
Author
First Published Feb 2, 2023, 8:46 AM IST

ವಿಜಯಪುರ (ಫೆ.02): ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಜನಮನ್ನಣೆ ಗಳಿಸಿದ್ದ ಮಹೇಂದ್ರ ನಾಯಕ್ ತಮ್ಮ ಸಿಪಿಐ ಹುದ್ದೆಗೆ ಕೊಟ್ಟಿದ್ದು ವಿಜಯಪುರದ ನಾಗಠಾಣ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಖಾಡ ರೆಡಿ ಮಾಡಿಕೊಂಡಿದ್ದಾರೆ. ಬಿಜೆಪಿ ಸೇರ್ಪಡೆಯಾಗುವ ಉದ್ದೇಶದಿಂದ ಪೊಲೀಸ್ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ ನೀಡಿದ್ದು, ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ನಾಗಠಾಣ ಮತಕ್ಷೇತ್ರ ಮತ್ತಷ್ಟು ರಂಗೇರುತ್ತಿದ್ದು, ಮಹೇಂದ್ರ ನಾಯಕ್ ರಾಜೀನಾಮೆ ಸಲ್ಲಿಕೆ ಕುತೂಹಲ ಮೂಡಿಸಿದೆ. 

ಸದ್ಯ ಬಾಗಲಕೋಟಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಮಹಿಂದ್ರ ನಾಯಕ್ ಕೆಲಸ ಮಾಡುತ್ತಿದ್ದರು. ಸಚಿವ ಗೋವಿಂದ್ ಕಾರಜೋಳ ಪುತ್ರ ಗೋಪಾಲ ಕಾರಜೋಳ ನಾಗಠಾಣ ಕ್ಷೇತ್ರ ಆಕಾಂಕ್ಷಿಯಾಗಿದ್ದು, ಸದ್ಯ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ. ನಾಗಠಾಣ ಕ್ಷೇತ್ರದ ಪ್ರಬಲ ಲಂಬಾಣಿ ಸಮುದಾಯಕ್ಕೆ ಸೇರಿರುವ ಮಹೇಂದ್ರ ನಾಯಕ್ ಅವರ ಈ ನಿರ್ಧಾರದಿಂದ ಹಾಲಿ ಜೆಡಿಎಸ್ ಶಾಸಕ ದೇವಾನಂದ ಚೌಹಾನ್‌ಗೆ ಶಾಕ್ ಆಗಿದ್ದು, ಬಿಜೆಪಿ ಟಿಕೆಟ್ ಸಿಗದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಹಿನ್ನಡೆಯಾಗೋದು ಮಾತ್ರ ಜೆಡಿಎಸ್‌ನ ದೇವಾನಂದ್ ಚೌಹಾನ್‌ಗೆ ಎಂದು ತಿಳಿದು ಬಂದಿದೆ.

ತಮ್ಮನಿಗಾಗಿ ಜೈಲು ಸೇರಿದ್ದರೂ ನನ್ನ ವಿರುದ್ಧ ಪತ್ನಿ ಕಣಕ್ಕಿಳಿಸಿದ: ಸೋಮಶೇಖರ ರೆಡ್ಡಿ

ಜೆಡಿಎಸ್‌ಗೆ ಸಿ.ಎಂ. ಹಿರೇಮಠ ರಾಜೀನಾಮೆ: ರಾಜ್ಯಮಟ್ಟದ ನಾಯಕರು ಹಾಗೂ ಕ್ಷೇತ್ರ ನಿಯೋಜಿತ ಅಭ್ಯರ್ಥಿ ತುಕಾರಾಂ ಸರ್ವೇ ಅವರು ಕಡೆಗಣಿಸಿದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ. ಹಿರೇಮಠ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು 16 ವರ್ಷಗಳಿಂದ ನಿಷ್ಠೆಯಿಂದ ಜೆಡಿಎಸ್‌ಗೆ ದುಡಿದಿದ್ದೇನೆ. ಪಕ್ಷವನ್ನು ಸಂಘಟನೆ ಮಾಡಿ ಕಟ್ಟಿಬೆಳೆಸಿದೆ. 

ಆದರೆ ಪಕ್ಷದ ನಿಯೋಜಿತ ಅಭ್ಯರ್ಥಿ ತುಕಾರಾಂ ಸುರ್ವೆ ಅವರು ಯಾರದೋ ಮಾತು ಕೇಳಿ ನನ್ನನ್ನು ಹಾಗೂ ಮುಖಂಡರನ್ನು ಕಡೆಗಣಿಸಿದ್ದಾರೆ.  ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಡೀ ರಾಜ್ಯದ ಜನತೆಗೆ ನೀಡಿರುವ ಕೊಡುಗೆಗಳು, ರೈತರಿಗಾಗಿ ನೀಡಿರುವ ಯೋಜನೆಗಳನ್ನು ಮೆಚ್ಚಿ ಜೆಡಿಎಸ್‌ ಸೇರಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಆಕಾಂಕ್ಷಿ ಆಗಿದ್ದೆ. ಟಿಕೆಟ್‌ ನೀಡಲಿಲ್ಲ. ಆದರೂ ನಾನು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ ಎಂದರು.

ಅಪ್ಪಣ್ಣ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಕ್ರಮ: ಸಿಎಂ ಬೊಮ್ಮಾಯಿ

ರೆಡ್ಡಿ ಪಕ್ಷ ಸೇರ್ಪಡೆ: ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಫೆ. 3ರಂದು ಸೇರ್ಪಡೆಗೊಳ್ಳಲಿದ್ದೇವೆ. ಕುಷ್ಟಗಿಯಲ್ಲಿ ಶೀಘ್ರ ಬೃಹತ್‌ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ರೆಡ್ಡಿಯವರ ಪಕ್ಷ ಸೇರ್ಪಡೆಯಾಗುವ ಯಾವ ಯೋಚನೆಯೂ ಇರಲಿಲ್ಲ. ಇಲ್ಲಿನ ರಾಜಕೀಯ ಕೆಲ ಚಟುವಟಿಕೆಗಳಿಂದ ಬೇಸತ್ತು ಜೆಡಿಎಸ್‌ ರಾಜೀನಾಮೆ ಪತ್ರ ರವಾನಿಸಲಾಗಿದೆ ಎಂದರು.

Follow Us:
Download App:
  • android
  • ios