ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ

NCP ಬಂಡಾಯ ನಾಯಕರ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿದೆ. ಶಿಷ್ಯನ ಒಳಸುಳಿ ಅರಿಯದ ಶರದ್ ಪವಾರ್ ಪೇಚಿಗೆ ಸಿಲುಕಿದರಾ ಎಂಬ ಅನುಮಾನ ಮೂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸದ್ಯ ಬಿಜೆಪಿಯು ತಾನು ಶಿವಸೇನೆ, ಕಾಂಗ್ರೆಸ್‌ಗೆ ನೀಡಿರುವ ಏಟಿಗಿಂತ ಬಹುದೊಡ್ಡ ಹೊಡೆತ ತಿನ್ನುತ್ತಾ ಎಂಬ ಅನುಮಾನವೂ ದಟ್ಟವಾಗಿದೆ. ಯಾಕೆ? ಇಲ್ಲಿದೆ ಉತ್ತರ

Maharashtra Politics Next Option Before NCP Party

ಶಿಷ್ಯನ ಒಳಸುಳಿಯನ್ನೇ ಅರಿಯದೇ ಪೇಚಿಗೆ ಬಿದ್ದರಾ ಶರದ್‌ ಪವಾರ್‌: ಮುಂದಿದೆ ಈ ಆಯ್ಕೆಗಳು

1. ಬಿಜೆಪಿ-ಶಿವಸೇನೆ ಅಭ್ಯರ್ಥಿಗಳ ವಿರುದ್ಧ ಎನ್‌ಸಿಪಿ ಹೋರಾಟ ನಡೆಸಿತ್ತು. ಇದೀಗ ಎನ್‌ಸಿಪಿಯಲ್ಲಿನ ಅಜಿತ್‌ ಪವಾರ್‌ ಬಣ ಬಂಡೆದ್ದು ಬಿಜೆಪಿ ಜತೆ ಕೈಜೋಡಿಸಿರುವುದು ಅದಕ್ಕಾದ ದೊಡ್ಡ ಹಿನ್ನಡೆ

2. ಎನ್‌ಸಿಪಿಯ ಪರಮೋಚ್ಚ ನಾಯಕ ಶರದ್‌ ಪವಾರ್‌ ಬಗ್ಗೆ ಅವಕಾಶವಾದಿ ರಾಜಕಾರಣಿ ಎಂಬ ಟೀಕೆ ಇದೆ. ಈ ಮೈತ್ರಿಗೆ ಶರದ್‌ ಅವರ ಪರೋಕ್ಷ ಬೆಂಬಲವಿದೆ ಎಂದು ಅದನ್ನೇ ಬಿಜೆಪಿ ಮತ್ತೆ ಟಾಂ ಟಾಂ ಹೊಡೆಯಬಹುದು

ಸಿಎಂ ಹುದ್ದೆಗಾಗಿ ಎಲ್ಲಾ ಕಳಕೊಂಡ ಶಿವಸೇನೆ ಬಿಗ್ ಲೂಸರ್‌: ಮುಂದಿನ ಆಯ್ಕೆಗಳೇನು?

3. ಶರದ್‌ ಪವಾರ್‌ ಅವರು ಅಜಿತ್‌ ಪವಾರ್‌ ಬಣದ ಶಾಸಕರನ್ನು ಪುನಃ ತಮ್ಮ ತೆಕ್ಕೆಗೆ ಸೆಳೆದು ವಿಶ್ವಾಸಮತಯಾಚನೆ ವೇಳೆ ಬಿಜೆಪಿಗೆ ಆಘಾತ ನೀಡಬಹುದು

4. ಶಿವಸೇನೆ ಜತೆ ಶರದ್‌ ಪವಾರ್‌ ಮೈತ್ರಿ ಮಾಡಿಕೊಂಡಿರುವ ಕಾರಣ ಸೇನೆಯ ಅಬ್ಬರದ ರಾಜಕಾರಣವನ್ನು ಎನ್‌ಸಿಪಿ ಎಷ್ಟುದಿನ ಸಹಿಸಿಕೊಂಡೀತು ಎಂಬುದು ಸದ್ಯದ ಮಟ್ಟಿಗೆ ಕುತೂಹಲ

5. ಹಿಂದೊಮ್ಮೆ ಕಾಂಗ್ರೆಸ್‌ ಒಡೆದು ಮುಖ್ಯಮಂತ್ರಿಯಾಗಿದ್ದರು ಪವಾರ್‌. ಈಗ ಅದೇ ಪವಾರ್‌ಗೆ ತಿರುಗುಬಾಣವಾಗಿದೆ. ಅಜಿತ್‌ ಪವಾರ್‌ ಅವರು ಹಿಂದಿನ ರುಚಿಯನ್ನೇ ಪವಾರ್‌ಗೆ ಉಣಿಸಿದ್ದಾರೆ

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios