ಸಿಎಂ ಹುದ್ದೆಗಾಗಿ ಎಲ್ಲಾ ಕಳಕೊಂಡ ಶಿವಸೇನೆ ಬಿಗ್ ಲೂಸರ್: ಮುಂದಿನ ಆಯ್ಕೆಗಳೇನು?
ಫಲಿತಾಂಶ ಹೊರಬಿದ್ದ ತಿಂಗಳ ಬಳಿಕ ಕೊನೆಗೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯೊಂದು ನಡೆದಿದೆ. ಎನ್‌ಸಿಪಿಯ ಬಂಡಾಯ ಶಾಸಕರ ಜೊತೆಗೂಡಿ ಸರ್ಕಾರ ರಚನೆಯನ್ನು ಬಿಜೆಪಿ ಮಾಡಿದೆ. ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಶಿವಸೇನೆ ಈ ಆಸೆಯಿಂದ ಸದ್ಯ ಎಲ್ಲವನ್ನೂ ಕಳೆದುಕೊಂಡಿದೆ. ಮುಂದೆ ಹೇಗೆ? ಪಕ್ಷದ ಮುಂದಿರುವ ಆಯದ್ಕೆಗಳೇನು? ಇಲ್ಲಿದೆ ವಿವರ
ಸಿಎಂ ಹುದ್ದೆ ಎಲ್ಲವನ್ನೂ ಕಳಕೊಂಡ ಶಿವಸೇನೆ ಅತಿದೊಡ್ಡ ಲೂಸರ್
1. ಈಗಿನ ಬೆಳವಣಿಗೆ ಶಿವಸೇನೆಗೆ ಆದ ದೊಡ್ಡ ನಷ್ಟ. ಶಿವಸೇನೆಗೆ ಇತ್ತ ಮಹಾರಾಷ್ಟ್ರದಲ್ಲಿ ಅಧಿಕಾರವೂ ಇಲ್ಲ, ಸಿಎಂ ಹುದ್ದೆಯೂ ಇಲ್ಲ, ಕೇಂದ್ರದಲ್ಲೂ ಅಧಿಕಾರವಿಲ್ಲ
2. ಅಧಿಕಾರ ಹಿಡಿಯುವುದಕ್ಕಾಗಿ ವಿರೋಧಿ ಸಿದ್ಧಾಂತದ ಪಕ್ಷಗಳಾದ ಕಾಂಗ್ರೆಸ್-ಎನ್‌ಸಿಪಿ ಜತೆ ಕೈಜೋಡಿಸಿದ್ದು ಶಿವಸೇನೆ ಇರುವವರೆಗೂ ಕಳಂಕವಾಗಿ ಕಾಡುವುದು ನಿಶ್ಚಿತ.
3. ಶಿವಸೇನೆಯ ಪ್ರಮುಖ ಮತ ಬ್ಯಾಂಕ್ ಹಾಗೂ ವಿಚಾರಧಾರೆಯೇ ಹಿಂದುತ್ವ. ಹೊಸ ರಾಜಕಾರಣದಿಂದಾಗಿ ಅದರ ಸಾಂಪ್ರದಾಯಿಕ ಮತ ಬ್ಯಾಂಕ್ ಛಿದ್ರವಾಗಬಹುದು
ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ
4. ಶಿವಸೇನೆ ಅಧಿಕಾರದ ಹಪಾಹಪಿ ಹೊಂದಿ ಕಾಂಗ್ರೆಸ್ ಜತೆಗೆ ಮೈತ್ರಿಗೆ ಮುಂದಾಗಿತ್ತು ಎಂದು ಬಿಂಬಿಸಿ ಅದರ ಮತದಾರರನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳಬಹುದು. ಶಿವಸೇನೆಯೊಳಗೆ ಬಂಡಾಯ ಕಿಡಿ ಸೃಷ್ಟಿಸಬಹುದು
5. ಬಿಜೆಪಿಯನ್ನು ಮಹಾರಾಷ್ಟ್ರ ರಾಜಕಾರಣದಲ್ಲಿ ದುರ್ಬಲಗೊಳಿಸಲು ಶಿವಸೇನೆ ಎಲ್ಲ ರೀತಿಯಲ್ಲೂ ಪ್ರಯತ್ನಿಸಬಹುದು. ಮರಾಠಾ ಅಸ್ಮಿತೆಯ ಪ್ರಯೋಗಿಸಬಹುದು
6. ಫಡ್ನವೀಸ್-ಶಾ ಅವರು ಅರ್ಧ ಅವಧಿಗೆ ಸಿಎಂ ಹುದ್ದೆಯನ್ನು ತನಗೆ ನೀಡದೇ ವಚನಭ್ರಷ್ಟರಾಗಿದ್ದಾರೆ ಎಂಬುದನ್ನು ದೊಡ್ಡದು ಮಾಡಬಹುದು
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು