Asianet Suvarna News Asianet Suvarna News

ಮದರಸಾ ಶಿಕ್ಷಣ ಸಂಪೂರ್ಣ ಮುಚ್ಚುವ ಸೂಚನೆ ನೀಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ!

ನವ ಭಾರತದಲ್ಲಿ ಮದರಾ ಶಿಕ್ಷಣದ ಅಗತ್ಯತೆ ಇಲ್ಲ. ಎಲ್ಲಾ ಮಕ್ಕಳಿಗೂ ಅತ್ಯುತ್ತಮ ಶಿಕ್ಷಣ ಲಭ್ಯವಾಗಬೇಕು ಎಂದು ಬೆಳಗಾವಿಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ ಮೂಲಕ ಇನ್ನುಳಿದಿರುವ ಮದರಾ ಶಿಕ್ಷಣ ಸಂಪೂರ್ಣ ಬಂದ್ ಮಾಡುವ ಸೂಚನೆ ನೀಡಿದ್ದಾರೆ.
 

Madrasa education not required New India Assam Cm himanta biswa sharma hints close reaming religious school ckm
Author
First Published Mar 18, 2023, 2:57 PM IST

ಬೆಳಗಾವಿ(ಮಾ.18):  ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾಂ ರೀತಿ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಇತ್ತೀಚೆಗೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಇದು ಪರ ವಿರೋಧಕ್ಕೂ ಕಾರಣವಾಗಿತ್ತು. ಇದೀಗ ಬೆಳಗಾವಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮತ್ತೆರೆಡು ಹೆಜ್ಜೆ ಮುಂದೆ ಹೋಗಿದ್ದಾರೆ. ಭಾರತಕ್ಕೆ ಮದರಸಾ ಶಿಕ್ಷಣದ ಅಗತ್ಯವಿಲ್ಲ. ಮದರಾ ಶಿಕ್ಷಣವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂನಲ್ಲಿ ಈಗಾಗಲೇ ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಿ ಸಾರ್ವಜನಿಕ ಶಾಲೆ ತೆರೆಯಲಾಗಿದೆ. ಬಸನ ಗೌಡ ಪಾಟೀಲ್ ಯತ್ನಾಳ್ ಅಸ್ಸಾಂ ಮಾದರಿ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಖುದ್ದು ಅಸ್ಸಾಂ ಸಿಎಂ, ಮದರಸಾ ಶಿಕ್ಷಣ ಬಂದ್ ಮಾಡುವ ಹೇಳಿಕೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಅಸ್ಸಾಂನಲ್ಲಿ ಬೇಕಿರುವುದು ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ವೈದ್ಯಕೀಯ ಶಿಕ್ಷಣಗಳು. ಈ ಮೂಲಕ ವೈದ್ಯರು, ಎಂಜಿನೀಯರ್ ಸೇರಿದಂತೆ ರಾಜ್ಯ ಹಾಗೂ ದೇಶಕ್ಕೆ ಸೇವೆ ಸಲ್ಲಿಸಲು ಮಕ್ಕಳನ್ನು ತಯಾರು ಮಾಡಬೇಕಿದೆ. ಪ್ರತಿಯೊಬ್ಬ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವ ಅಗತ್ಯವಿದೆ. ತಾವು ಏನಾಗಬೇಕು ಎಂಬುದನ್ನು ಪೋಷಕರು ನಿರ್ಧರಿಸುವುದಲ್ಲ. ಮಕ್ಕಳು ನಿರ್ದರಿಸಲಿ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

'ಅಧಿಕಾರಕ್ಕೆ ಬಂದ್ರೆ ಎಲ್ಲಾ ಮದರಸಾಗಳನ್ನ ಮುಚ್ತೇವೆ..' ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ!

ನಾನು ಅಸ್ಸಾಂನಿಂದ ಬಂದಿದ್ದೇನೆ. ಅಸ್ಸಾಂ ರಾಜ್ಯ ಪ್ರತಿದಿನ ಬಾಂಗ್ಲಾದೇಶದ ನುಸುಳುಕೋರರ ಸಮಸ್ಯೆ ಎದುರಿಸುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ, ಪದ್ಧತಿ ಹಾಗೂ ಪರಂಪರೆಗೆ ಹೊಡೆತ ಬೀಳುತ್ತಿದೆ. ನಮ್ಮ ಶಿಕ್ಷಣ ಪದ್ಧತಿಯನ್ನು ಬದಲಿಸಬೇಕು. ನಮ್ಮ ಇತಿಹಾಸವನ್ನು ಪುನರ್ ರಚಿಸಬೇಕು. ನಮ್ಮ ಮೇಲೆ ನಡೆದ ದಾಳಿಗಳ ಕುರಿತು ಸ್ಪಷ್ಟ ಚಿತ್ರಣ ಹಾಗೂ ಸತ್ಯ ಮಾಹಿತಿ ಸಿಗಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದರು. ಕಾಂಗ್ರೆಸ್ ಆಧುನಿಕ ಭಾರತದ ಮೊಘಲ್ ಎಂದಿದ್ದಾರೆ. ಮೊಘಲರು ಭಾರತದ ಮೇಲೆ ದಾಳಿ ಮಾಡಿದ್ದರು. ಭಾರತವನ್ನು ದುರ್ಬಲಗೊಳಿಸಿ, ಇಲ್ಲಿನ ಮಂದಿರಗಳನ್ನು ಕಡೆವಿ ತಮ್ಮ ಸ್ರಾಮಜ್ಯ ನಿರ್ಮಿಸಿದ್ದರು. ಇದೀಗ ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಭಾರತವನ್ನು ದುರ್ಬಲಗೊಳಿಸವು ಪ್ರಯತ್ನಕ್ಕೆ ಕೈಹಾಕಿದೆ ಎಂದು ಶರ್ಮಾ ಹೇಳಿದ್ದಾರೆ. ಕಾಂಗ್ರೆಸ್ ಬಾಬ್ರಿ ಮಸೀದಿ ಪರವಾಗಿ ಹೇಳಿಕೆ ನೀಡುತ್ತದೆ. ಆದರೆ ರಾಮ ಮಂದಿರ ವಿರುದ್ಧ ಮಾತನಾಡುತ್ತದೆ ಎಂದಿದ್ದಾರೆ.

ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು: ತನಿಖೆಗೆ ಆದೇಶ

ಪ್ರಧಾನಿ ನರೇಂದ್ರ ಮೋದಿ ಹೊಸ ಭಾರತ ನಿರ್ಮಿಸುತ್ತಿದ್ದಾರೆ. ನಮ್ಮ ಮಂದಿರಗಳು ಜೀರ್ಣೋದ್ಧಾರಗೊಂಡಿದೆ. ಹಲವು ಮಂದಿರಗಳು ಹಳೇ ಗತವೈಭವವನ್ನು ಮರಳಿ ಪಡೆದಿದೆ. ನಮ್ಮ ಸಂಸ್ಕೃತಿ ಮರಳುತ್ತಿದೆ ಎಂದು ಶರ್ಮಾ ಹೇಳಿದ್ದಾರೆ. 

ಕಳೆದ ವರ್ಷ ಸರ್ಕಾರದ ಅನುದಾನದಲ್ಲಿದ್ದ ಅಸ್ಸಾಂನ 600ಕ್ಕೂ ಹೆಚ್ಚು ಮದರಸಾಗಳನ್ನು ಒಡೆದು ಹಾಕಲಾಗಿತ್ತು. ಈ ನಿರ್ಧಾರವನ್ನು ಗುವ್ಹಾಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಗುವ್ಹಾಟಿ ಹೈಕೋರ್ಟ್ ಸರ್ಕಾರದ ಪರ ತೀರ್ಪು ನೀಡಿತ್ತು. 

Follow Us:
Download App:
  • android
  • ios