ಬೆಂಗಳೂರು[ನ.07]: ನಾವು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸೋತಿರಬಹುದು, ಆದರೆ ಯಡಿಯೂರಪ್ಪ ಮೇಲೆ ಮೇಲೆ ಗೆದ್ದಿದ್ದೇವೆ. ಮೈತ್ರಿಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಒಳ್ಳೆಯ ಹೋರಾಟ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

ಇದನ್ನು ಓದಿ: ಅಪ್ಪ-ಮಗ, ಅಪ್ಪ-ಮಗ, ಗಂಡ-ಹೆಂಡತಿ...ಸದ್ಯದ ಸ್ಥಿತಿ!

ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ವಿದೇಶದಲ್ಲಿ ಇದ್ದ ಮಧು ಬಂಗಾರಪ್ಪ ತರಾತುರಿಯಲ್ಲಿ ಬಂದು ನಾಮ ಪತ್ರ ಸಲ್ಲಿಸಿದ್ರು. ಮೂರೂವರೆ ಲಕ್ಷ ಅಂತರ ಇದ್ದ ಯಡಿಯೂರಪ್ಪ ಅವರನ್ನು ಐವತ್ತು ಸಾವಿರಕ್ಕೆ ಇಳಿಸಿದ್ದಾರೆ. ಇದೇನು ಕಡಿಮೆ ಸಾಧನೆಯಲ್ಲ. ಯಡಿಯೂರಪ್ಪ ಅವರು ತಮ್ಮ ಮಗನನ್ನು ಗೆಲ್ಲಿಸುವ ಸಲುವಾಗಿಯೇ ಶಿವಮೊಗ್ಗ ಬಿಟ್ಟು ಬೇರೆಲ್ಲೂ ಹೋಗಲಿಲ್ಲ. ತಂದೆ ಅಂತೆಯೇ ಮಧು ಹೋರಾಟ ಮನೋಭಾವ ತೋರಿದ್ದಾರೆ. ಮುಂದೆ ಕೂಡಾ ಮಧು ಅವರೇ ಸ್ಪರ್ಧಿಸುತ್ತಾರೆ ಎಂದು ವಿಶ್ವನಾಥ್ ಖಚಿತಪಡಿಸಿದ್ದಾರೆ.

ಇದನ್ನು ಓದಿ: 5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? ಫುಲ್ ಡಿಟೇಲ್ಸ್

ಇನ್ನು ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡುವ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಸಧ್ಯಕ್ಕೆ ಮಧು ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಹಿಂಬಾಗಿಲ ಮೂಲಕ ಮಂತ್ರಿ ಮಾಡುವ ಉದ್ದೇಶವಿಲ್ಲ. ಮುಂದೆ ಕೂಡಾ ಮಧು ಅವರೇ ಸ್ಪರ್ಧಿಸುತ್ತಾರೆ. ಬಳ್ಳಾರಿ, ಮಂಡ್ಯ, ಶಿವಮೊಗ್ಗ ಎಲ್ಲಾ ಕಡೆ ಈಗ ಯಾರು ಸ್ಪರ್ಧಿಸಿದ್ರೋ ಅವರೇ ಮತ್ತೆ ನಿಲ್ತಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.