5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? ಫುಲ್ ಡಿಟೇಲ್ಸ್
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಹಾಗಾದ್ರೆ ಯಾರು ಎಷ್ಟು ಮತಗಳನ್ನು ಪಡೆದಿದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್.
ಬೆಂಗಳೂರು, (ನ. 06) : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ಇಂದು [ಮಂಗಳವಾರ] ಐದು ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರೆ, ರಾಮನಗರ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಾಲಾಗಿದೆ. ಇನ್ನುಳಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೆತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ ಬಿಜೆಪಿಯ ಬಿ. ವೈ ರಾಘವೇಂದ್ರ ಭರ್ಜರಿ ಜಯಗಳಿಸಿದ್ದಾರೆ.
5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದವರು ಯಾರು?, ಸೋತವರು ಯಾರು?, ಯಾರು ಎಷ್ಟು ಮತ ಪಡೆದರು? ಇಲ್ಲಿದೆ ವಿವರ.
1] ಶಿವಮೊಗ್ಗ ಲೋಕಸಭಾ ಕ್ಷೇತ್ರ
* ಬಿ.ವೈ.ರಾಘವೇಂದ್ರ 543306 ಮತ * ಮಧು ಬಂಗಾರಪ್ಪ 491158 ಮತಗಳು * ಗೆಲುವಿನ ಅಂತರ 52148 [ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿತ್ತು].
2] ಮಂಡ್ಯ ಲೋಕಸಭಾ ಕ್ಷೇತ್ರ
ಪಡೆದ ಮತಗಳು * ಎಲ್.ಆರ್.ಶಿವರಾಮೇಗೌಡ 569347 * ಡಾ.ಸಿದ್ದರಾಮಯ್ಯ 244404 * ಶಿವರಾಮೇಗೌಡ ಗೆಲುವಿನ ಅಂತರ 324943 [ಸಿ.ಎಸ್ ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿತ್ತು]
3] ಬಳ್ಳಾರಿ ಲೋಕಸಭಾ ಕ್ಷೇತ್ರ
ಪಡೆದ ಮತಗಳು * ವಿ.ಎಸ್.ಉಗ್ರಪ್ಪ 628365 * ಜೆ. ಶಾಂತ 385204 * ಉಗ್ರಪ್ಪ ಗೆಲುವಿನ ಅಂತರ 243161 [ಶ್ರೀರಾಮುಲು ಅವರು ರಾಜೀನಾಮೆ ನೀಡಿದ್ದರು.
4] ಜಮಖಂಡಿ ವಿಧಾನಸಭಾ ಕ್ಷೇತ್ರ
ಪಡೆದ ಮತಗಳು * ಆನಂದ್ ನ್ಯಾಮಗೌಡ 97017 * ಶ್ರೀಕಾಂತ್ ಕುಲಕರ್ಣಿ 57537 * ಆನಂದ್ ನ್ಯಾಮಗೌಡ ಗೆಲುವಿನ ಅಂತರ 39480 [ ಸಿದ್ದ ನ್ಯಾಮಗೌಡ ಅಕಾಲಿಕ ಮರಣದಿಂದಾಗಿ ಈ ಕ್ಷೇತ್ರ ತೆರವಾಗಿತ್ತು]
5] ರಾಮನಗರ ವಿಧಾನಸಭಾ ಕ್ಷೇತ್ರ
ಪಡೆದ ಮತಗಳು * ಅನಿತಾ ಕುಮಾರಸ್ವಾಮಿ 125043 * ಎಲ್.ಚಂದ್ರಶೇರ್ 15906 * ಅನಿತಾ ಕುಮಾರಸ್ವಾಮಿ ಗೆಲುವಿನ ಅಂತರ 109137 [ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ನೀಡಿದ್ದರು.]