Loksabha election 2024: ಹೈಕಮಾಂಡ್ ನನಗೆ ಮತ್ತೊಮ್ಮೆ ಅವಕಾಶ ಕೊಡುತ್ತೆ: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ

ಕಲ್ಯಾಣ ಕರ್ನಾಟಕದಲ್ಲಿ ಗೆದ್ದ ಬಿಜೆಪಿ ಸಂಸದರಲ್ಲಿ ನಾನೂ ಒಬ್ಬ. ಈ ಬಾರಿ ರಾಯಚೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಹೈಕಮಾಂಡ್ ನಾಯಕರು ಮತ್ತೊಮ್ಮೆ ಅವಕಾಶ ಕೊಡುತ್ತಾರೆ ಎಂದು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಭರವಸೆ ವ್ಯಕ್ತಪಡಿಸಿದರು.

Loksabha election 2024 high command will give me another chance says raichur MP Raja amreshwar nayak rav

ರಾಯಚೂರು (ಮಾ.11): ಕಲ್ಯಾಣ ಕರ್ನಾಟಕದಲ್ಲಿ ಗೆದ್ದ ಬಿಜೆಪಿ ಸಂಸದರಲ್ಲಿ ನಾನೂ ಒಬ್ಬ. ಈ ಬಾರಿ ರಾಯಚೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಹೈಕಮಾಂಡ್ ನಾಯಕರು ಮತ್ತೊಮ್ಮೆ ಅವಕಾಶ ಕೊಡುತ್ತಾರೆ ಎಂದು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಭರವಸೆ ವ್ಯಕ್ತಪಡಿಸಿದರು.

ಈ ಬಾರಿ ರಾಯಚೂರು ಲೋಕಸಭಾ ಟಿಕೆಟ್ ಕೈತಪ್ಪುವ ವಿಚಾರ ಕುರಿತು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು. ಹೈಕಮಾಂಡ್ ಹೊರಡಿಸಿರುವ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮತಗಳು ಪಡೆದಿದ್ದೇನೆ. ನಾನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಕೇಂದ್ರದಿಂದ 30 ಸಾವಿರ ಕೋಟಿವರೆಗೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಆಧಾರದ ಮೇಲೆ ಮತ್ತೊಮ್ಮೆ ಹೈಕಮಾಂಡ್ ಮತ್ತೊಮ್ಮೆ ಅವಕಾಶ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ರಾಜಾ ಅಮರೇಶ್ವರ ಜನಪರವಾದ ರಾಜಕಾರಣಿ: ಸಚಿವ ಬೋಸರಾಜು ಬಣ್ಣನೆ

ಈ ಬಾರಿ ಹೊಸಬರಿಗೆ ಅವಕಾಶ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ, ಇಲ್ಲಿ ಹೊಸಬರು ಅಂತ ಯಾರೂ ಇಲ್ಲ. ಐದರಿಂದ ಆರು ಜನರು ತಾವೇ ಚುನಾವಣೆಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳುವರು ಹಿಂದೆ ಚುನಾವಣೆ ‌ನಿಂತೂ ಸೋತವರೇ ಇದ್ದಾರೆ. ಹೀಗಾಗಿ ಈ ಬಾರಿ ನನಗೆ ಮತ್ತೊಮ್ಮ ಅವಕಾಶ ಸಿಗುತ್ತದೆ ಎಂದರು.

 

Raichur: ಪ್ರಧಾನಿ ಮೋದಿ ಆಗಮನ: ಕಲ್ಯಾಣ ನಾಡಿನ ಅಭಿವೃದ್ಧಿ ಸಂಕ್ರಮಣ: ಸಂಸದ ರಾಜಾ ಅಮರೇಶ್ವರ ನಾಯಕ

Latest Videos
Follow Us:
Download App:
  • android
  • ios