Raichur: ಪ್ರಧಾನಿ ಮೋದಿ ಆಗಮನ: ಕಲ್ಯಾಣ ನಾಡಿನ ಅಭಿವೃದ್ಧಿ ಸಂಕ್ರಮಣ: ಸಂಸದ ರಾಜಾ ಅಮರೇಶ್ವರ ನಾಯಕ
ಕ್ರಾಂತಿಕಾರಿ ಶರಣ ಚಳುವಳಿಯ ನಾಯಕ, ಬಸವಣ್ಣನವರ ಹೋರಾಟದ ವೀರಭೂಮಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ಲಿಗೆ ದೇಶದ ಕಂಡ ಮಹಾನ್ ನೇತಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೊಸ ಸಂಕ್ರಮಣವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು
ಲಿಂಗಸುಗೂರು (ಜ.18) ಕ್ರಾಂತಿಕಾರಿ ಶರಣ ಚಳುವಳಿಯ ನಾಯಕ, ಬಸವಣ್ಣನವರ ಹೋರಾಟದ ವೀರಭೂಮಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ಲಿಗೆ ದೇಶದ ಕಂಡ ಮಹಾನ್ ನೇತಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೊಸ ಸಂಕ್ರಮಣವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ. 19ರಂದು ಬೆಳಗ್ಗೆ 11:30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪ್ರಧಾನಮಂತ್ರಿ ಮೋದಿಯವರು ಕೊಡೇಕಲ್ಲಿಗೆ ಆಗಮಿಸಲಿದ್ದು, ಕೇಂದ್ರ ಪುರಸ್ಕೃತ ಯೋಜನೆಯಡಿ 1325ಕೋಟಿ ರು. ವೆಚ್ಚದಲ್ಲಿ ದಕ್ಷಿಣ ಭಾರತದ ಗಂಗೆ ಕೃಷ್ಣಾ ನದಿಯ ಎಡದಂಡೆಯ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಂದ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿದು ಹೋಗಲು ಬಹಳ ಆಸ್ತೆ ವಹಿಸಿ ಆಧುನಿಕ ತಂತ್ರಜ್ಞಾನದಿಂದ ಅಳವಡಿಸಿರುವ ಸ್ಕಾಡಾ ಗೇಟುಗಳು ಲೋಕಾರ್ಪಣೆ ಮಾಡಲಿದ್ದಾರೆ.
Raichur: ಪ್ರತ್ಯೇಕ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಅಹೋರಾತ್ರಿ ಧರಣಿ
ಜಲಧಾರೆ ಯೋಜನೆಯಡಿ ಯಾದಗಿರಿ ಜಿಲ್ಲೆಯ 2404 ಕೋಟಿ ರು. ವೆಚ್ಚದಲ್ಲಿ 712 ಹಳ್ಳಿಗಳು ಹಾಗೂ 03 ಸ್ಥಳೀಯ ಸಂಸ್ಥೆಗಳ ಒಟ್ಟು 2,32,015 ಮನೆಗಳ 15 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ 4 ಪ್ಯಾಕೇಜ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿ(PM Narendra Modi) ಸಮಾರಂಭದ ಯಶಸ್ವಿಗೆ ಕೊಡೇಕಲ್ಲಿನಲ್ಲಿ ಸುರಪುರದ ಶಾಸಕ ರಾಜುಗೌಡ(Raju gowda)ರ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಕಾರದಿಂದ ಸಿದ್ಧತಾ ಕಾರ್ಯಗಳು ಯುದ್ಧೋಪಾದಿಯಲ್ಲಿ ಸಾಗಿವೆ. 600 ಎಕರೆ ಪ್ರದೇಶದಲ್ಲಿ 3 ಹೆಲಿಪ್ಯಾಡ್ ನಿರ್ಮಿಸಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸೇರಿದಂತೆ ಗಣ್ಯಮಾನ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ ಕುಟುಂಬಗಳಿಗೆ 1 ತಿಂಗಳಲ್ಲಿ ಹಕ್ಕುಪತ್ರ: ಸಚಿವ ಅಶೋಕ್ ಭರವಸೆ
30 ಸಾವಿರ ಜನ: ಕೊಡೇಕಲ್ಲಿಗೆ ಪ್ರಧಾನಿ ಮೋದಿಯವರ ಸಮಾರಂಭಕ್ಕೆ ಲಿಂಗಸುಗೂರು ಕ್ಷೇತ್ರದಿಂದ 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಲಿಂಗಸುಗೂರು ಕ್ಷೇತ್ರದಿಂದ ಪ್ರಧಾನಿಗಳ ಸಮಾರಂಭಕ್ಕೆ ಆಗಮಿಸುವ ಜನರು ಬೆಳಗ್ಗೆ 8 ರಿಂದ 9-15ರ ಒಳಗೆ ವೇದಿಕೆಯಲ್ಲಿ ಹಾಜರಿರಬೇಕು, ಸಮಾರಂಭಕ್ಕೆ ತೆರಳುವ ಜನರಿಗೆ ಬಸ್ಸು, ಕಾರು ಸೇರಿದಂತೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಉಪಹಾರ, ಊಟವು ನೀಡಲಾಗುತ್ತದೆ ಎಂದು ಮಾಜಿ ಶಾಸಕ, ಹಟ್ಟಿಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.