Asianet Suvarna News Asianet Suvarna News

ಲೋಕಸಭೆ ಗೆದ್ದರೂ ಬಿಜೆಪಿಗೆ ಕಹಿ.. ಸೋತರೂ ಕಾಂಗ್ರೆಸ್ಸಿಗೆ ಸಿಹಿ..

ದೇಶದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ 303ರಿಂದ 240ಕ್ಕೆ ಕುಸಿಯುವ ಮೂಲಕ ಕಹಿಯನ್ನು ಅನಿಭವಿಸಿದೆ. ಆದರೆ, ಕಾಂಗ್ರೆಸ್ 52 ಸ್ಥಾನಗಳಿಂದ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಸಿಹಿಯನ್ನು ಅನುಭವಿಸಿದೆ.

Lok Sabha winner BJP get Bitter but defeated Congress get Sweet from elections sat
Author
First Published Jun 6, 2024, 1:25 PM IST

ನವದೆಹಲಿ (ಜೂ.06): ದೇಶದ ಲೋಕಸಭಾ ಚುನಾವಣೆಯ ಜನಾದೇಶದಲ್ಲಿ ಹಿನ್ನಡೆಯಾದರೂ ಕಾಂಗ್ರೆಸ್ ಹೆಜ್ಜೆಗಳು ತಮ್ಮ ಮುಂದಿನ ಹಾದಿಯ ಸ್ಪಷ್ಟತೆಯನ್ನು ತೋರುತ್ತಿವೆ. ಕಳೆದ ಲೋಕಸಭೆಯಲ್ಲಿ 52 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಸೀಟು ಗೆದ್ದಿದೆ. ಜೊತೆಗೆ, ಇಂಡಿಯಾ ಮೈತ್ರಿಕೂಟ ಮಾಡಿಕೊಂಡು 234 ಸೀಟು ಗಳಿಸಿದೆ. ಈ ಗೆಲುವಿನ ಕ್ರೆಡಿಟ್ ಸಾರಥಿಗಳಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಸಲ್ಲುತ್ತದೆ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ 303 ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ 240 ಸೀಟಿಗೆ ಕುಸಿತವಾಗುವ ಮೂಲಕ ಕಹಿಯನ್ನು ಅನುಭವಿಸಿದೆ.

ಹೌದು, ಕರ್ನಾಟಕದಿಂದ ಲೋಕಸಭೆಗೆ ಎಂಟ್ರಿಕೊಟ್ಟ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಬಳಿಕ ಒಂದಲ್ಲ ಒಂದು ಕಡೆ ಕಾಂಗ್ರೆಸ್‌ಗೆ ಗೆಲುವು ಸಿಗುತ್ತಲೇ ಇದೆ. ಈ ಹಿಂದೆ ವಿಧಾನಸಭಾ ಚುನಾವಣೆಗಳಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಖರ್ಗೆಯವರ ವರ್ಚಸ್ಸು ಹೆಚ್ಚಿಸಿತ್ತು. ಈಗ ಲೋಕಸಭೆಯಲ್ಲಿ ಶತಕದತ್ತ ಕಾಂಗ್ರೆಸ್ ಮುನ್ನುಗ್ಗಿದ್ದು ಕಾಂಗ್ರೆಸ್ ಮನೆಯಲ್ಲಿ ಖುಷಿ ಮೂಡಿಸಿದೆ. ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲದಿರಬಹುದು. ಆದರೆ, ಶೇಕಡಾವಾರು ಮತಗಳ ಸಂಖ್ಯೆ ಹೆಚ್ಚಾಗಿದೆ.

ಮೋದಿ ಹೊಸ ಸಂಪುಟದಲ್ಲಿ ರಾಜ್ಯದ ಯಾರಿಗೆ ಸಚಿವಗಿರಿ?: ಎಚ್‌ಡಿಕೆಗೆ ಮಂತ್ರಿ ಸ್ಥಾನ?

ಈ ಹಿಂದೆ ಒಂದೇ ಒಂದು ಸ್ಥಾನಗಳೂ ಇಲ್ಲದ ನರೇಂದ್ರ ಗುಜರಾತ್, ರಾಜಸ್ಥಾನ ಕಾಂಗ್ರೆಸ್ ಖಾತೆ ತೆಗೆದಿದ್ದು, ರಾಜಸ್ಥಾನದ ಸಂಖ್ಯೆ ಹೆಚ್ಚಾಗಿದ್ದು, ಮಹಾರಾಷ್ಟ್ರ, ಹರಿಯಾಣ ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕನಸಿಗೆ ಶಕ್ತಿ ತುಂಬಿದ್ದು ಖರ್ಗೆಯವರ ಅಧ್ಯಕ್ಷತೆಗೆ ಮತ್ತಷ್ಟು ಹಿರಿಮೆ ಲಭಿಸಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿ ಜೊತೆ ಸೇರಿ ಕಾಂಗ್ರೆಸ್ 6 ಸ್ಥಾನ ಗೆದ್ದಿದೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಎರಡು ಸ್ಥಾನ ಗಳಿಸಿದ್ದು ಕಾಂಗ್ರೆಸ್ ಮನೆಯಲ್ಲಿ ಸಂಭ್ರಮ ಹೆಚ್ಚಿಸಿವೆ. ಕರ್ನಾಟಕದಲ್ಲಿ ಖರ್ಗೆ ಕೋಟೆಯ ಹೈದರಾಬಾದ್ ಕರ್ನಾಟಕ ಭಾಗದಲ್ಲಿ 5ಕ್ಕೆ ಐದು ಸ್ಥಾನಗಳು ಮತ್ತು ಉತ್ತರ ಕರ್ನಾಟಕದ ಲಿಂಗಾಯಿತ ಪ್ರಾಭಲ್ಯ ಪ್ರದೇಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ.

ಇದಕ್ಕೆ ಖರ್ಗೆಯವರ ಅಧ್ಯಕ್ಷತೆ ಕಾರಣ ಅನ್ನೋದು ಚರ್ಚಿಸುವ ವಿಷಯವಾಗಿದೆ. ಸೋನಿಯಾ, ರಾಹುಲ್ ಗಾಂಧಿ ಹಾದಿಯಾಗಿಯೂ ಮಲ್ಲಿಕಾರ್ಜುನ ಖರ್ಗೆ ಯವರ ಕೆಲಸಕ್ಕೆ ಶಹಬಾಸ್ ಗಿರಿ ನೀಡಿದ್ದಾರೆ. ನಿನ್ನೆಯ ಇಂಡಿಯಾ ಸಭೆಯಲ್ಲೂ ಖರ್ಗೆಯವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡಲು ಇಂಡಿಯಾ ಸಂಚಾಲಕರಾಗಿ ಖರ್ಗೆಯವರಿಗೆ ಪಟ್ಟ ಕಟ್ಟಲಾಗಿದೆ. 

ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ ಅಂದ್ರಾ ರಾಹುಲ್ ಗಾಂಧಿ? ಹಾಗಾದ್ರೆ INDIA ಕೂಟದ ಮುಂದಿರುವ ಆಯ್ಕೆ ಏನು? 

ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ 240 ಸ್ಥಾನಗಳನ್ನು ಗಳಿಸಿದ್ದು, ಕಳೆದ ಬಾರಿ ಬಂದಿದ್ದ 63 ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ, ಈಗ ಎನ್‌ಡಿಎ ಮೈತ್ರಿ ಕೂಟದಲ್ಲಿ ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನೇತೃತ್ವದ ಟಿಡಿಪಿ 16 ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 12 ಸ್ಥಾನಗಳು ಬಿಜೆಪಿಗೆ ಬೆಂಬಲಿಸಿವೆ. ಜೊತೆಗೆ ಆರ್‌ಜೆಡಿ, ಜನಸೇನಾ, ಜೆಡಿಎಸ್ ಸೇರಿ ಹಲವು ಪಕ್ಷಗಳ ಒಂದೆರಡು ಸೀಟು ಗಳಿಸಿದವರೂ ಎನ್‌ಡಿಎ ಮೈತ್ರಿಕೂಟದಲ್ಲಿ ಸೇರಿಕೊಂಡು 292ಕ್ಕೆ ಬಲವನ್ನು ಹೆಚ್ಚಿಸಿಕೊಂಡಿದ್ದವು. ಆದರೆ, ಈಗ ದೇಶದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಲವು ನಾಯಕರು ಸೇರಿಕೊಂಡು ತಾವು ಅಧಿಕಾರ ಹಿರಿಯುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಎನ್‌ಡಿಎ ಮೈತ್ರಿಕೂಟದ ಬಲ 303ಕ್ಕೆ ಹೆಚ್ಚಳವಾಗಿದೆ.

Latest Videos
Follow Us:
Download App:
  • android
  • ios