ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗುತ್ತಿದ್ದಂತೆಯೇ ಕರ್ನಾಟಕ ಬಿಜೆಪಿಯಿಂದ ಈ ಬಾರಿ ಯಾರಿಗೆ ಸಚಿವ ಸ್ಥಾನ ಎಂಬ ಲೆಕ್ಕಾಚಾರ ಸಿಗಬಹುದು ಆರಂಭವಾಗಿದೆ.

ಬೆಂಗಳೂರು (ಜೂ.06): ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗುತ್ತಿದ್ದಂತೆಯೇ ಕರ್ನಾಟಕ ಬಿಜೆಪಿಯಿಂದ ಈ ಬಾರಿ ಯಾರಿಗೆ ಸಚಿವ ಸ್ಥಾನ ಎಂಬ ಲೆಕ್ಕಾಚಾರ ಸಿಗಬಹುದು ಆರಂಭವಾಗಿದೆ. ಪೂರ್ಣ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರುವುದಾಗಿದ್ದರೆ ರಾಜ್ಯಕ್ಕೆ ಹೆಚ್ಚು ಸ್ಥಾನಗಳನ್ನು ನಿರೀಕ್ಷಿಸಬಹುದಾಗಿತ್ತು. ಆದರೆ, "ಅತಂತ್ರ ಪರಿಸ್ಥಿತಿಯಲ್ಲಿ ಸರ್ಕಾರರಚಿಸುತ್ತಿರುವುದರಿಂದ ಹೆಚ್ಚು ಸ್ಥಾನ ಲಭಿಸುವ ನಿರೀಕ್ಷೆ ಕ್ಷೀಣಿಸಿದೆ. ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಆ ಪಕ್ಷಕ್ಕೆ ಒಂದು ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಅದು ಮಂಡ್ಯ ಸಂಸದರಾಗಿ ಗೆಲುವು ಸಾಧಿಸಿರುವ ಆ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಪಾಲಾಗುವ ಸಾಧ್ಯತೆಯಿದೆ. 

ಹೀಗಾಗಿ, ಒಕ್ಕಲಿಗ ಕೋಟಾದಲ್ಲಿ ಬಿಜೆಪಿಯ ಸಂಸದರಿಗೆ ಸಚಿವ ಸ್ಥಾನ ಸಿಗುವ ಸಂಭವ ಇಲ್ಲ ಎಂದೇ ಹೇಳಬಹುದಾಗಿದೆ. ಇನ್ನು ಲಿಂಗಾಯತ ಸಮುದಾಯದಿಂದ ಈ ಬಾರಿ ಘಟಾನುಘಟಿಗಳು ಆಯ್ಕೆಯಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ (ಬೆಳಗಾವಿ), ಬಸವರಾಜ ಬೊಮ್ಮಾಯಿ (ಹಾವೇರಿ), ಮಾಜಿ ಸಚಿವ ವಿ.ಸೋಮಣ್ಣ (ತುಮಕೂರು), ಹಿರಿಯ ಸಂಸದರಾಗಿರುವ ಬಿ.ವೈ.ರಾಘವೇಂದ್ರ (ಶಿವಮೊಗ್ಗ), ಪಿ.ಸಿ.ಗದ್ದಿಗೌಡರ್ (ಬಾಗಲ ಕೋಟೆ) ಅವರಿದ್ದಾರೆ. ಈ ಪೈಕಿ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಪರಿಗಣಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

32 ರೋಡ್‌ಶೋ, 20ಸಭೆ: ಮೊದಲ ಟಾಸ್ಕಲ್ಲೇ ಗೆದ್ದು ತೋರಿಸಿದ ವಿಜಯೇಂದ್ರ

ಆದರೆ, ಇದುವರೆಗೆ ಸಚಿವರಾ ಗಿದ್ದ ಧಾರವಾಡದ ಪ್ರಹ್ಲಾದ್ ಜೋಶಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡುವ ನಿರ್ಧಾರವಾ ದಲ್ಲಿ ಅಕ್ಕಪಕ್ಕದ ಕ್ಷೇತ್ರಗಳ ಸಂಸದರಾದ ಶೆಟ್ಟ‌ ಹಾಗೂ ಬೊಮ್ಮಾಯಿ ಅವರಿಗೆ ಪ್ರಾದೇಶಿಕ ಕಾರಣದಿಂದನಿರಾಕರಿಸಬಹುದು.ಹಾಗಾದಲ್ಲಿ ರಾಜಧಾನಿ ಬೆಂಗಳೂರನ್ನು ಪರಿಗಣಿಸಿ ರಾಜ್ಯದಲ್ಲಿ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿರುವ ಸೋಮಣ್ಣ ಅವರಿಗೂ ಅದೃಷ್ಟ ಒಲಿದುಬರಬಹುದುಎನ್ನಲಾಗುತ್ತಿದೆ. ಸಂಸದರ ಹಿರಿತನವನ್ನೇ ಪರಿಗಣಿಸುವುದಾದರೆ ರಾಘವೇಂದ್ರ ಅಥವಾ ಗದ್ದಿಗೌಡರ್‌ ಅವರಿಗೂ ಅವಕಾಶ ಕಲ್ಪಿಸಬಹುದು ಎನ್ನಲಾಗಿದೆ. 

ಈ ಬಾರಿ ಪಕ್ಷದ ಗೆಲುವಿನ ಸಂಖ್ಯೆ ಕಡಿಮೆ ಯಾಗಿರುವುದರಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡದೇ ಇರುವುದು ಕೂಡ ಪ್ರಮುಖವಾಗಿರುವುದರಿಂದ ಆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಪೈಕಿ ಇತರ ಹಿಂದುಳಿದ ವರ್ಗಗಳಿಂದ ಉಡುಪಿ-ಚಿಕ್ಕಮಗಳೂರಿನ ಕೋಟ ಶ್ರೀನಿವಾಸ ಪೂಜಾರಿ, ಮೈಸೂರಿನ ಯದುವೀರ್‌ಒಡೆಯರ್, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ಅವರ ಪೈಕಿ ಒಬ್ಬರನ್ನು ಪರಿಶೀಲಿಸಬಹುದು. ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಕರಾವಳಿ ಭಾಗಕ್ಕೆ ಪ್ರಾತಿನಿಧ್ಯವನ್ನೂ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯವೂ ಇದೆ ಎಂದು ಮೂಲಗಳು ತಿಳಿಸಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೆ ಚಾಲನೆ: ಏನಿದರ ವಿಶೇಷತೆ!

ಎಚ್‌ಡಿಕೆಗೆ ಮಂತ್ರಿ ಸ್ಥಾನ?: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆಯಿದೆ. ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಜೆಡಿಎಸ್ ಕರ್ನಾಟಕದಲ್ಲಿ ಬಿಜೆಪಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಎರಡು ಸ್ಥಾನಗಳನ್ನು ಗಳಿಸಿದೆ. ಮೇಲಾಗಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿಗೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಒಂದು ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದ್ದು, ಕುಮಾರಸ್ವಾಮಿ ಅವರಿಗೆ ಒಲಿಯಲಿದೆ ಎಂದು ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚುನಾವಣೆಗಿಂತ ಮೊದಲೇ ಪ್ರಸ್ತಾಪವಾಗಿತ್ತು ಎನ್ನಲಾಗಿದೆ. ಈ ನಡುವೆ ಕುಮಾರಸ್ವಾಮಿ ಅವರು ಕೃಷಿ ಖಾತೆಯ ಬಗ್ಗೆ ಒಲವು ಹೊಂದಿದ್ದು, ಅದನ್ನೇ ಕೇಳುವ ಸಂಭವವಿದೆ ಎಂದು ತಿಳಿದು ಬಂದಿದೆ.