ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ ಅಂದ್ರಾ ರಾಹುಲ್ ಗಾಂಧಿ? ಹಾಗಾದ್ರೆ INDIA ಕೂಟದ ಮುಂದಿರುವ ಆಯ್ಕೆ ಏನು?
Rahul Gandhi: ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 99 ಸ್ಥಾನ ಬರಲು ರಾಹುಲ್ ಗಾಂಧಿಯೇ ಕಾರಣ ಅನ್ನೋದು ಕಾಂಗ್ರೆಸ್ಸಿಗರ ವಾದ. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಸದನದ ವಿರೋಧ ಪಕ್ಷದ ನಾಯಕರಾಗಿದ್ದರು. 2019ರಲ್ಲಿ ಅಧೀರ್ ರಂಜನ್ ಚೌಧರಿ ಅವರನ್ನು ವಿಪಕ್ಷ ನಾಯಕರಾಗಿದ್ದರು.
ನವದೆಹಲಿ: ಐಎನ್‌ಡಿಐಎ ಕೂಟ ಸರ್ಕಾರ ರಚನೆಯ ಕಸರತ್ತನ್ನು ಕೈ ಬಿಟ್ಟಿದೆ. ಐಎನ್‌ಡಿಐಎ ಕೂಟದಲ್ಲಿ (INDIA Bloc) 99 ಸ್ಥಾನ ಗೆದ್ದಿರುವ ಕಾಂಗ್ರೆಸ್ (Congress) ದೊಡ್ಡ ಪಕ್ಷವಾಗಿದೆ. ಹಾಗಾಗಿಯೇ ಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುವ ಸಾಧ್ಯತೆಯೇ ಹೆಚ್ಚು. ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ದೇಶದ ತುಂಬೆಲ್ಲಾ ಸಂಚರಿಸಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿಯವರೇ ವಿಪಕ್ಷ ನಾಯಕರಾಗಬೇಕು ಅನ್ನೋದು ಕಾಂಗ್ರೆಸ್ಸಿಗರ ಒತ್ತಾಯವಾಗಿದೆ. ಆದ್ರೆ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಲು ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ರಾಹುಲ್ ಗಾಂಧಿ ಒಪ್ಪದಿದ್ರೆ ಕೆಸಿ ವೇಣುಗೋಪಾಲ್ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಸಂಬಂಧ ಐಎನ್‌ಡಿಐಎ ಕೂಟದಿಂದ ಯಾವುದೇ ನಿರ್ಣಯ ಹೊರ ಬಂದಿಲ್ಲ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 99 ಸ್ಥಾನ ಬರಲು ರಾಹುಲ್ ಗಾಂಧಿಯೇ ಕಾರಣ ಅನ್ನೋದು ಕಾಂಗ್ರೆಸ್ಸಿಗರ ವಾದ. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಸದನದ ವಿರೋಧ ಪಕ್ಷದ ನಾಯಕರಾಗಿದ್ದರು. 2019ರಲ್ಲಿ ಅಧೀರ್ ರಂಜನ್ ಚೌಧರಿ ಅವರನ್ನು ವಿಪಕ್ಷ ನಾಯಕರಾಗಿದ್ದರು. ಈ ಬಾರಿ ರಾಹುಲ್ ಗಾಂಧಿ ವಿಪಕ್ಷ ನಾಯಕ ಆದ್ರೆ ಅವರ ಅನುಭವ ಮತ್ತಷ್ಟು ಹೆಚ್ಚಾಗುತ್ತೆ ಅನ್ನೋದು ಹಲವು ಕಾಂ ಗ್ರೆಸ್ ನಾಯಕರ ಒತ್ತಾಸೆಯಾಗಿದೆ ಎನ್ನಲಾಗುತ್ತಿದೆ.
ನರೇಂದ್ರ ಮೋದಿ ಪ್ರಮಾಣವಚನಕ್ಕೆ ಇವರೆಲ್ಲಾ ಬರ್ತಾರೆ; ಇಲ್ಲಿದೆ ನೋಡಿ ಲಿಸ್ಟ್
ರಾಹುಲ್ ಗಾಂಧಿಯೇ ನಮ್ಮ ನಾಯಕ ಎಂದ ಮಾಣಿಕಂ ಠಾಗೋರ್
ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಬಹಿರಂಗವಾಗಿಯೇ ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಲಿ ಎಂದು ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ನನ್ನ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಮತ ಕೇಳಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಬೇಕು ಎಂದು ಬಯಸುತ್ತೇನೆ. ನನ್ನಂತೆಯೇ ಕಾಂಗ್ರೆಸ್ ನಾಯಕರು ಯೋಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಕಾದು ನೋಡೋಣ. ನಮ್ಮ ಪ್ರಜಾಪ್ರಭುತ್ವದ ಪಕ್ಷ ಎಂದು ಮಾಣಿಕಂ ಠಾಗೋರ್ ಬರೆದುಕೊಂಡಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಗೆಲುವು
2019ರಲ್ಲಿ ರಾಹುಲ್ ಗಾಂಧಿ ಅಮೇಥಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ರೆ ವಯನಾಡು ಕ್ಷೇತ್ರದಲ್ಲಿ ಮಾತ್ರ ರಾಹುಲ್ ಗಾಂಧಿ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ್ದರು. ಈ ಬಾರಿಯೂ ರಾಯ್‌ಬರೇಲಿ ಮತ್ತು ವಯನಾಡಿನಿಂದ ಸ್ಪರ್ಧಿಸಿ ಎರಡರಲ್ಲಿಯೂ ಗೆದ್ದಿದ್ದಾರೆ. ಈ ಎರಡರಲ್ಲಿ ರಾಹುಲ್ ಗಾಂಧಿ ಯಾವ ಕ್ಷೇತ್ರ ಉಳಿಸಿಕೊಳ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಸೋನಿಯಾ ಗಾಂಧಿಯವರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆಯಾದ ಹಿನ್ನೆಲೆ ತೆರವಾದ ಕ್ಷೇತ್ರ ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದರು.
ದೆಹಲಿ ಏರ್‌ಪೋರ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಭೇಟಿ ಮಾಡಿದ ಇಂಡಿಯಾ ಕೂಟದ ಸ್ಟಾಲಿನ್
ವಿರೋಧ ಪಕ್ಷವಾಗಿ ನಮ್ಮ ಹೋರಾಟ
ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಬಿಜೆಪಿಯ ದ್ವೇಷ ಮತ್ತು ಭ್ರಷ್ಟಾಚಾರದ ರಾಜಕಾರಣಕ್ಕೆ ದೇಶದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಹಣದುಬ್ಬರ, ನಿರುದ್ಯೋಗ, ಬಂಡವಾಳ ಕ್ರೋಢೀಕರಣ, ಸಂವಿಧಾನ ರಕ್ಷಿಸಲು ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.