ಕಾಂಗ್ರೆಸ್ 20 ಕ್ಷೇತ್ರ ಅಲ್ಲ, ಗೆಲ್ಲುವ 4 ಕ್ಷೇತ್ರದ ಹೆಸರು ಹೇಳಲಿ ನೋಡೋಣ; ಸಿಎಂಗೆ ಬಿಎಸ್‌ವೈ ಟಾಂಗ್
ಶಿವಮೊಗ್ಗದಲ್ಲಿ ರಾಘಣ್ಣ ಜನತೆ ಅಪೇಕ್ಷೆ ಪಟ್ಟ ನೂರಕ್ಕೆ 95 ರಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ರಾಘವೇಂದ್ರ ಹೆಚ್ಚಿನ ಮತಗಳ ಅಂತರದಿಂದದ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ (ಏ.22): ಶಿವಮೊಗ್ಗದಲ್ಲಿ ರಾಘಣ್ಣ ಜನತೆ ಅಪೇಕ್ಷೆ ಪಟ್ಟ ನೂರಕ್ಕೆ 95 ರಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ರಾಘವೇಂದ್ರ ಹೆಚ್ಚಿನ ಮತಗಳ ಅಂತರದಿಂದದ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಶಿವಮೊಗ್ಗದಲ್ಲಿ ಪುತ್ರನ ಪರವಾಗಿ ಭರ್ಜರಿ ಮತ ಬೇಟೆ ನಡೆಸಿದರು. ಗಂಗಾ ಮತಸ್ಥ, ಸಾಧುಶೆಟ್ಟಿ ಜನಾಂಗ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರ ಜೊತೆ ಸಭೆ ನಡೆಸಿ ರಾಘವೇಂದ್ರರಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.
ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪಗೆ ಪ್ರತ್ಯೇಕ ಚಿಹ್ನೆ ನೀಡಿದ ಚುನಾವಣಾ ಆಯೋಗ!
ಪ್ರಧಾನಿ ಮೋದಿ ಅಲೆ ದೇಶಾದ್ಯಂತ ಹರಡಿದೆ. ರಾಜ್ಯದಲ್ಲೂ ಮೋದಿ ಪರವಾದ ಅಲೆ ಎದ್ದಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಅವರು ಸೋಲುತ್ತೇವೆ ಎಂದು ಹೇಳಲು ಬರುತ್ತದೆಯೇ? ಹೀಗಾಗಿ ಗೆಲ್ಲುತ್ತೇವೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಗೆಲ್ಲುವ ನಾಲ್ಕು ಕ್ಷೇತ್ರಗಳ ಹೆಸರು ಹೇಳಲಿ ನೋಡೋಣ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲುವುದಿರಲಿ, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರೆಂದೇ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಸ್ಪಷ್ಟತೆ ಅವರಲ್ಲಿ ಇಲ್ಲ ಎಂದು ತಿರುಗೇಟು ನೀಡಿದರು. ಇದೇ ವೇಳೆ ಚೊಂಬು ಗ್ಯಾರಂಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಬಿಎಸ್ ವೈ ಇದಕ್ಕೆಲ್ಲ ಏನೂ ಅರ್ಥ ಇಲ್ಲ ಎಂದರು.
ಈಶ್ವರಪ್ಪ ದುಃಖ ನಾನು ಅರ್ಥ ಮಾಡಿಕೊಳ್ಳಬಲ್ಲೆ: ರಾಧಾಮೋಹನದಾಸ್ ಅಗರವಾಲ್
ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ ನಾಮಪತ್ರ ಹಿಂಪಡೆಯುವ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ನಾನ್ಯಾಕಪ್ಪ ಅದರ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಮೋದಿ ವಿರುದ್ಧ ಟೀಕೆ ಮಾಡಿದ ವಿಚಾರಕ್ಕೆ, 'ಹಗುರವಾಗಿ ಮಾತನಾಡುವವರಿಗೆ ನಾನೇನು ಮಾತನಾಡಲು ಆಗುತ್ತೆ. ರಸ್ತೆಯಲ್ಲಿ ಹೋಗುವವರೆಲ್ಲ ಮಾತನಾಡಿದರೆ ಮೋದಿಯವರ ಗೌರವ ಕಡಿಮೆಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.