Asianet Suvarna News Asianet Suvarna News

Lok Sabha Elections 2024: ರೈತರಿಗೆ ಕಾಂಗ್ರೆಸ್‌ ಸರ್ಕಾರದಿಂದ ದ್ರೋಹ: ಪಿಎಂ ಮೋದಿ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ 4000 ಸಾವಿರ ಕೊಡುವುದನ್ನು ತಕ್ಷಣ ನಿಲ್ಲಿಸಿದೆ. ಇಂತಹ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು.

Lok Sabha Elections 2024 Farmers betrayed by Congress Government Says PM Narendra Modi gvd
Author
First Published Apr 21, 2024, 6:23 AM IST

ಚಿಕ್ಕಬಳ್ಳಾಪುರ (ಏ.21): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ 4000 ಸಾವಿರ ಕೊಡುವುದನ್ನು ತಕ್ಷಣ ನಿಲ್ಲಿಸಿದೆ. ಇಂತಹ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ನಗರದ ಹೊರ ವಲಯದ ಚೊಕ್ಕಹಳ್ಳಿ ಸಮೀಪ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಏರ್ಪಡಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊನೆ ಸಾಲಿನಲ್ಲಿ ಕೂರುತ್ತಿದ್ದವರನ್ನು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮೊದಲ ಸಾಲಿಗೆ ತರುವ ಕೆಲಸ ಮಾಡಲಾಗಿದೆ. ಮೊದಲ ಅವಧಿಯಲ್ಲಿ ದಲಿತ ರಾಷ್ಟ್ರಪತಿಯನ್ನು, ಎರಡನೇ ಬಾರಿ ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿ ಮಾಡಿದ್ದೇವೆ ಎಂದರು.

20,000 ಮನೆ ನೀಡಲಾಗಿದೆ: ಎನ್ಡಿಎ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳೇ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಕಳೆದ 10 ವರ್ಷದಲ್ಲಿ 14 ಸಾವಿರ ಮನೆಗಳನ್ನು ಚಿಕ್ಕಬಳ್ಳಾಪುರದಲ್ಲಿ ಕೋಲಾರದಲ್ಲಿ 20 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ರೀರ್ಪೋಟ್ ಕಾರ್ಡ್‌ ಜನರ ಮುಂದಿಟ್ಟು ಎನ್ಡಿಎ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು. ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿ ಇಂಡಿಯಾ ಒಕ್ಕೂಟದ ವಿರುದ್ದ ವಾಗ್ದಾಳಿ ಮುಂದುವರೆಸಿದ ನರೇಂದ್ರ ಮೋದಿ, ಇಂಡಿಯಾ ಒಕ್ಕೂಟದಲ್ಲಿ ಸಮರ್ಥ ನಾಕತ್ವ ಇಲ್ಲ. 

ಕಾಂಗ್ರೆಸ್‌ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದರು: ಎಚ್‌.ಡಿ.ದೇವೇಗೌಡ

ಅವರಿಗೆ ನಾಯಕರು ಇಲ್ಲ. ಇಂಡಿಯಾ ಒಕ್ಕೂಟದಿಂದ ದೇಶಕ್ಕೆ ಉತ್ತಮ ಭವಷ್ಯವಿಲ್ಲ. ಅವರಿಗೆ ಕೇವಲ ಹಗರಣಗಳು ಮಾಡುವುದು ಮಾತ್ರ ಗೊತ್ತು. ಅವರಿಗೆ ಯಾವುದೇ ಅಭಿವೃದ್ದಿಯ ದೃಷ್ಠಿ ಇಲ್ಲ. ಆದರೆ ನನಗೆ ತಾಯಿಂದಿರ ಅರ್ಶೀವಾರ ಇದೆ. ತಾಯಿ, ಮಕ್ಕಳ ಸುರಕ್ಷತೆಗಾಗಿ ಆದ್ಯತೆ ನೀಡುತ್ತೇನೆ. ನಿಮ್ಮ ವಿಚಾರದಲ್ಲಿ ಏನೆ ಸಮಸ್ಯೆ ಬಂದರು ಎದುರಿಸುತ್ತೇನೆ. ತಾಯಿಂದಿರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಯೋಜನೆ ರೂಪಿಸಲಾಗಿದೆ.

150 ಸರೋವರ ನಿರ್ಮಾಣ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ದೂರ ಮಾಡಲು 150 ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಿದೆ. ಇದರಿಂದ ನೀರಿನ ಸಮಸ್ಯೆ ಕಡಿಮೆ ಆಗಲಿದೆ. ಕೋಲಾರ, ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ಜಲ ಜೀವನ್ ಮಿಷನ್ ಮೂಲಕ 2.70 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸುವ ಕೆಲಸ ಮಾಡಲಾಗಿದೆ ಎಂದರು. 4 ಲಕ್ಷ ಮಂದಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ. ಎನ್ ಡಿಎ ಸರ್ಕಾರ ರೈತರ ಆರ್ಥಿಕ ಸಬಲೀಕರಣಗೊಳಿಸಲು ಕೃಷಿ ಕಿಸಾನ್ ಕ್ರಿಡಿಟ್ ಕಾರ್ಡ್ ಕೊಡಲಿದೆ ಎಂದರು.

ರಾಜ್ಯದಲ್ಲಿ ತಾಲಿಬಾನ್‌ ಆಡಳಿತ ಇದೆಯೇ?: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ್, ಎಂಬಿಟಿ ನಾಗರಾಜ್, ಎನ್ಡಿಎ ಅಭ್ಯರ್ಥಿಗಳಾದ ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್, ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಕೋಲಾರ ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಯಲಹಂಕ ಎಸ್.ಆರ್.ವಿಶ್ವನಾಥ್, ಶಿಡ್ಲಘಟ್ಟದ ರವಿಕುಮಾರ್, ಶ್ರೀನಿವಾಸಪುರ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ, ಕೋಲಾರ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಬಾಗೇಪಲ್ಲಿ ಸಿ.ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.

Follow Us:
Download App:
  • android
  • ios