: ಕಳೆದ 2 ಲೋಕಸಭಾ ಚುನಾವಣೆಗಳಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದಿ ಭಾಷಿಕ ಪ್ರದೇಶಗಳು ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ತಮ್ಮ ಒಲವು ವ್ಯಕ್ತಪಡಿಸಿವೆ. ಇದು ಬಿಜೆಪಿ ಮತ್ತು ಎನ್‌ಡಿಎ ಕೂಟದ ಒಟ್ಟಾರೆ ಸಂಖ್ಯಾಬಲದ ಮೇಲೆ ಭಾರೀ ಪ್ರಭಾವ ಬೀರಿದೆ.

ನವದೆಹಲಿ: ಕಳೆದ 2 ಲೋಕಸಭಾ ಚುನಾವಣೆಗಳಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದಿ ಭಾಷಿಕ ಪ್ರದೇಶಗಳು ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ತಮ್ಮ ಒಲವು ವ್ಯಕ್ತಪಡಿಸಿವೆ. ಇದು ಬಿಜೆಪಿ ಮತ್ತು ಎನ್‌ಡಿಎ ಕೂಟದ ಒಟ್ಟಾರೆ ಸಂಖ್ಯಾಬಲದ ಮೇಲೆ ಭಾರೀ ಪ್ರಭಾವ ಬೀರಿದೆ.

ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಹರ್ಯಾಣ, ಜಾರ್ಖಂಡ್‌ ದೇಶದ ಪ್ರಮುಖ ಹಿಂದಿ ಭಾಷಿಕ ಪ್ರದೇಶಗಳಾಗಿವೆ. ಇವು ಲೋಕಸಭೆಯಲ್ಲಿ 170ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಇಂಡಿಯಾ ಕೂಟದ ಪಕ್ಷಗಳ ಪಾಲಾಗಿದೆ. ಇದು ಸಹಜವಾಗಿಯೇ ಎನ್‌ಡಿಎ ಮೈತ್ರಿಕೂಟಕ್ಕೆ ಎಚ್ಚರಿಕೆಯ ಗಂಟೆಯಾಗಿ ಮೊಳಗಿದೆ.

ಇತರೆ ಹಿಂದಿ ಭಾಷಿಕ ರಾಜ್ಯಗಳ ಪೈಕಿ ಮಧ್ಯಪ್ರದೇಶ, ಹಿಮಾಚಲ, ದೆಹಲಿ, ಉತ್ತರಾಖಂಡ, ಛತ್ತೀಸ್‌ಗಢದಲ್ಲಿ ಮಾತ್ರ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 

ಲೋಕಸಭಾ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ‘ಇಂಡಿಯಾ’ ಕ್ಲೀನ್‌ಸ್ವೀಪ್‌!

ಉತ್ತರಪ್ರದೇಶದ 80ರ ಪೈಕಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಸ್‌ಪಿ, ಕಾಂಗ್ರೆಸ್‌ ಜಯ ಗಳಿಸಿದೆ. ಕಳೆದ ವರ್ಷ ಇಲ್ಲಿ ಎನ್‌ಡಿಎಯ 62 ಸ್ಥಾನ ಗೆದ್ದಿತ್ತು. ಈ ಬಾರಿ ಅದರ ಬಲ ಅರ್ಧದಷ್ಟು ಕುಸಿದಿದೆ.

ಇನ್ನು ಕಳೆದ ಬಾರಿ ರಾಜಸ್ಥಾನದ 25 ಸ್ಥಾನಗಳಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ್ದ ಬಿಜೆಪಿ ಬಲ ಈ ಬಾರಿ ಶೇ.50ರಷ್ಟು ಕುಸಿತವಾಗಿದೆ. ಬಿಹಾರದಲ್ಲಿ ಕಳೆದ ಬಾರಿ 40ರ ಪೈಕಿ 39 ಸ್ಥಾನ ಗೆದ್ದಿದ್ದ ಎನ್‌ಡಿಎ ಬಲ ಈ ಬಾರಿ 30ಕ್ಕೆ ಸೀಮಿತವಾಗಿದೆ. ಹರ್ಯಾಣದಲ್ಲಿ ಕಳೆದ ಬಾರಿ ಎಲ್ಲಾ 10 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 5ಕ್ಕೆ ಸೀಮಿತಗೊಂಡಿದೆ. ಮತ್ತೊಂದೆಡೆ ಕಳೆದ ವರ್ಷ 14ರ ಪೈಕಿ 12 ಸ್ಥಾನ ಗೆದ್ದಿದ್ದ ಎನ್‌ಡಿಎ ಈ ಬಾರಿ 8ಕ್ಕಿ ಸೀಮಿತವಾಗಿದೆ.