ಲೋಕಸಭಾ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ‘ಇಂಡಿಯಾ’ ಕ್ಲೀನ್‌ಸ್ವೀಪ್!
2019ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 39 ಸ್ಥಾನಗಳ ಪೈಕಿ 38 ಸೀಟು ಗೆದ್ದಿದ್ದ ಡಿಎಂಕೆ ನೇತೃತ್ವದ ಮೈತ್ರಿಕೂಟ, ಈ ಬಾರಿ ಇಂಡಿಯಾ ಹೆಸರಿನಲ್ಲಿ ಎಲ್ಲ 39 ಸ್ಥಾನಗಳನ್ನೂ ಬಾಚಿಕೊಂಡಿದೆ.
ಚೆನ್ನೈ (ಜೂ.5): 2019ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 39 ಸ್ಥಾನಗಳ ಪೈಕಿ 38 ಸೀಟು ಗೆದ್ದಿದ್ದ ಡಿಎಂಕೆ ನೇತೃತ್ವದ ಮೈತ್ರಿಕೂಟ, ಈ ಬಾರಿ ಇಂಡಿಯಾ ಹೆಸರಿನಲ್ಲಿ ಎಲ್ಲ 39 ಸ್ಥಾನಗಳನ್ನೂ ಬಾಚಿಕೊಂಡಿದೆ.
ಉತ್ತರ ಭಾರತದಲ್ಲಿ ಆಗಬಹುದಾದ ನಷ್ಟ ತುಂಬಿಕೊಳ್ಳಲು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮೇಲೆ ಬಿಜೆಪಿ ಮುಖ್ಯವಾಗಿ ಗಮನಹರಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ಹೋರಾಟ ಸಂಘಟಿಸಿತ್ತು. ಹಲವಾರು ತಂತ್ರಗಾರಿಕೆಗಳನ್ನು ಮಾಡಿತ್ತು. ಆದರೆ ಡಿಎಂಕೆ ನೇತೃತ್ವದ ಇಂಡಿಯಾ ಕೂಟ ಬಿಜೆಪಿ ನೇತೃತ್ವದ ಎನ್‌ಡಿಎ ತಲೆ ಎತ್ತದಂತೆ ನೋಡಿಕೊಳ್ಳುವಲ್ಲಿ ಸಫಲವಾಗಿದೆ.
ಲೋಕಸಭಾ ಚುನಾವಣೆ: ಗೆದ್ದರೂ ಬಿಜೆಪಿಗೆ ಸಂಭ್ರಮವಿಲ್ಲ, ಸೋತರೂ ಕಾಂಗ್ರೆಸಿಗಿಲ್ಲ ದುಃಖ!
ತಮಿಳುನಾಡಿನಲ್ಲಿ ಬಿಜೆಪಿಯ ಕಮಲ ಎಂದಿಗೂ ಅರಳುವುದೇ ಇಲ್ಲ ಎಂಬ ಡಿಎಂಕೆ ವಾದವನ್ನು ಸುಳ್ಳಾಗಿಸಲು ಬಿಜೆಪಿ ಹಲವಾರು ಪ್ರಯೋಗಗಳನ್ನು ಮಾಡಿತ್ತು. ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಕೊಯಮತ್ತೂರಿನಲ್ಲಿ, ಕೇಂದ್ರದ ಸಚಿವ ಎಲ್. ಮುರುಗನ್ ಅವರನ್ನು ನೀಲಗಿರಿಯಲ್ಲಿ, ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ಕನ್ಯಾಕುಮಾರಿಯಲ್ಲಿ, ತೆಲಂಗಾಣ ರಾಜ್ಯಪಾಲೆಯಾಗಿದ್ದ ತಮಿಳಿಸಾಯಿ ಸೌಂದರರಾಜನ್‌ರಿಂದ ರಾಜೀನಾಮೆ ಕೊಡಿಸಿ ಚೆನ್ನೈ ದಕ್ಷಿಣ ಕ್ಷೇತ್ರದಲ್ಲಿ ಅವರನ್ನು ಕಣಕ್ಕೆ ಇಳಿಸಿತ್ತು. ತನ್ಮೂಲಕ ಬಾರಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಈ ಎಲ್ಲ ಅಭ್ಯರ್ಥಿಗಳೂ ಮಕಾಡೆ ಮಲಗಿದ್ದಾರೆ.
ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಗಲಿಕೆಯ ಬಳಿಕ ಮಂಕಾಗಿರುವ ಹಾಗೂ ಎರಡು ಹೋಳಾಗಿರುವ ಅಣ್ಣಾಡಿಎಂಕೆ ಕಳೆದ ಬಾರಿ ಗೆದ್ದಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿದೆ. ಡಿಎಂಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪೈಪೋಟಿ ನೀಡಿದ್ದರೂ ಹಲವು ಕ್ಷೇತ್ರಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆ ಎಚ್‌ಡಿಕೆ ಧೂಳೀಪಟ..!
ಕೇಂದ್ರ ಸರ್ಕಾರ ದ್ರಾವಿಡ ರಾಜ್ಯವಾಗಿರುವ ತಮಿಳುನಾಡಿಗೆ ಅನ್ಯಾಯ ಮಾಡುತ್ತಿದೆ ಎಂಬ ಸ್ಟಾಲಿನ್ ಆರೋಪವನ್ನು ಜನ ನಂಬಿರುವಂತಿದೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ಸರ್ಕಾರ ಪ್ರವಾಹ ಪರಿಹಾರವನ್ನು ವಿಳಂಬವಾಗಿ ಬಿಡುಗಡೆ ಮಾಡಿದ್ದು, ಸಂವಿಧಾನ ಬದಲಾವಣೆ ಕುರಿತ ವಿಚಾರಗಳು ಬಿಜೆಪಿಗೆ ಮುಳುವಾಗಿವೆ ಎಂದು ಹೇಳಲಾಗುತ್ತಿದೆ.
ಗೆದ್ದ ಪ್ರಮುಖರು
ಟಿ.ಆರ್. ಬಾಲು, ಎ. ರಾಜಾ, ಕನಿಮೋಳಿ, ಕಾರ್ತಿ ಚಿದಂಬರಂ, ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್,