ನನ್ನ ಉಸಿರು ಇರೋತನಕ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರೋದಿಲ್ಲ: ವಿ ಸೋಮಣ್ಣ
ಸೋಮಣ್ಣ ತುಮಕೂರಿಗೆ ಬಂದರೆ ಮಗನನ್ನು ಕರೆತರುತ್ತಾರೆ ಅನ್ನೋರಿಗೆ ಒಂದು ಮಾತು ಹೇಳ್ತೇನೆ, ನನ್ನ ಉಸಿರು ಇರೋವರೆಗೂ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರೋದಿಲ್ಲ. ಇದರ ಮೇಲೆ ನಾವು ಇನ್ನೂ ಏನು ಹೇಳಬಹುದು? ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ತಿರುಗೇಟು ನೀಡಿದರು.
ತುಮಕೂರು (ಏ.1): ಏ.3ನೇ ತಾರೀಕು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಮುಂಜಾನೆ 11.55ಕ್ಕೆ ವಿನಾಯಕ ನಗರದ ಗಣಪತಿ ಮತ್ತು ಅರ್ಧನಾರೀಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಬಳಿಕ ನಾಮಪತ್ರ ಸಲ್ಲಿಸುತ್ತೇನೆ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ತಿಳಿಸಿದರು.
ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು.
ವಾಲ್ಮೀಕಿ ಸಮಾಜಕ್ಕೆ ಕೈ ಮುಗಿದು ಕೇಳ್ತೀನಿ, ರಾಜಣ್ಣನ ಮಾತನ್ನ ಕೇಳ್ಬೇಡಿ: ಎಚ್‌ಡಿ ದೇವೇಗೌಡ
ಏ.4ರಿಂದ 7ರವರೆಗೆ ಎಲ್ಲಾ ತಾಲೂಕು ಕೇಂದ್ರಗಳಿಗೆ ಪ್ರವಾಸ ಮಾಡ್ತೇನೆ. ನಂತರ ಎಲ್ಲ ಹೋಬಳಿಗಳಿಗೆ ಹೋಗಿ ಅಲ್ಲಿನ ಮತದಾರರನ್ನ ಭೇಟಿ ಮಾಡುವ ಕೆಲಸ ಮಾಡ್ತೇನೆ. ಇದು ದೇಶದ ಚುನಾವಣೆ. ಈ ಚುನಾವಣೆಗೂ ಸಿದ್ದರಾಮಯ್ಯನ ಗ್ಯಾರಂಟಿಗೂ ಏನೂ ಸಂಬಂಧ ಇಲ್ಲ. ಇನ್ನು ಮಾಧುಸ್ವಾಮಿ ಭಾರತೀಯ ಜನತಾ ಪಾರ್ಟಿಯ ಒಬ್ಬ ಹಿರಿಯ ನಾಯಕರು. ಅವರು ಪ್ರಜ್ಞಾವಂತರು, ಅವರನ್ನು ಕೂಡ ಆಹ್ವಾನ ಮಾಡುತ್ತೇನೆ ಎಂದರು.
ಸೋಮಣ್ಣನವರೇ ಯಡಿಯೂರಪ್ಪ- ವಿಜಯೇಂದ್ರ ನಿಮ್ ಪರ ತುಮಕೂರಿಗೆ ಪ್ರಚಾರಕ್ಕೆ ಬರ್ತಾರಾ?
ಸೋಮಣ್ಣ ತುಮಕೂರಿಗೆ ಬಂದರೆ ಮಗನನ್ನು ಕರೆತರುತ್ತಾರೆ ಅನ್ನೋರಿಗೆ ಒಂದು ಮಾತು ಹೇಳ್ತೇನೆ, ನನ್ನ ಉಸಿರು ಇರೋವರೆಗೂ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರೋದಿಲ್ಲ. ಇದರ ಮೇಲೆ ನಾವು ಇನ್ನೂ ಏನು ಹೇಳಬಹುದು? ಎಂದು ತಿರುಗೇಟು ನೀಡಿದರು. ನನ್ನ ಮಗ ಒಬ್ಬ ವೈದ್ಯ, ಇನ್ನೊಬ್ಬ ಡಬಲ್ ಗ್ಯಾಜ್ಯುಯೆಟ್. ನನ್ನ ಮಗಳು ಇಂಜಿನಿಯರ್. ನಾನು ಬುದ್ದಿವಂತನಾಗಿ ರಾಜಕೀಯ ಮಾಡಿಕೊಂಡು ಬಂದವನು.ಬೇರೆಯವರ ಹಾಗೇ ನಾನು ಎಲ್ಲೂ ಮೂತಿ ತೂರಿಸುವ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.