Asianet Suvarna News Asianet Suvarna News

ವಾಲ್ಮೀಕಿ ಸಮಾಜಕ್ಕೆ ಕೈ ಮುಗಿದು ಕೇಳ್ತೀನಿ, ರಾಜಣ್ಣನ ಮಾತನ್ನ ಕೇಳ್ಬೇಡಿ: ಎಚ್‌ಡಿ ದೇವೇಗೌಡ

ನಮ್ಮೆಲ್ಲರ ಅಭ್ಯರ್ಥಿಯಾಗಿ ತುಮಕೂರಿನಿಂದ ಸೋಮಣ್ಣ ನಿಂತಿದ್ದಾರೆ. ಈ ಮೈತ್ರಿ ಚುನಾವಣೆಗೆ ಮಾತ್ರ ಅಲ್ಲ, ಚುನಾವಣೆ ಮುಗಿದ ಮೇಲೇಯೂ ಬಿಜೆಪಿ-ಜೆಡಿಎಸ್  ಸಂಬಂಧ ಮುಂದುವರೆಯುತ್ತೆ. ಸಂಬಂಧ ಕಾಪಾಡುಕೊಂಡು‌ ಹೋಗ್ತಿವಿ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.

Lok sabha election 2024 HD Devegowda outraged against siddaramaiah KN Rajanna at tumakuru rav
Author
First Published Mar 30, 2024, 5:15 PM IST

ತುಮಕೂರು (ಮಾ.30): ನಮ್ಮೆಲ್ಲರ ಅಭ್ಯರ್ಥಿಯಾಗಿ ತುಮಕೂರಿನಿಂದ ಸೋಮಣ್ಣ ನಿಂತಿದ್ದಾರೆ. ಈ ಮೈತ್ರಿ ಚುನಾವಣೆಗೆ ಮಾತ್ರ ಅಲ್ಲ, ಚುನಾವಣೆ ಮುಗಿದ ಮೇಲೇಯೂ ಬಿಜೆಪಿ-ಜೆಡಿಎಸ್  ಸಂಬಂಧ ಮುಂದುವರೆಯುತ್ತೆ. ಸಂಬಂಧ ಕಾಪಾಡುಕೊಂಡು‌ ಹೋಗ್ತಿವಿ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದರು.

ಇಂದು ತುಮಕೂರು ಜಿಲ್ಲಾ ಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ನಡುವಿನ ಬಾಂಧವ್ಯ ತಾತ್ಕಾಲಿಕವಲ್ಲ. ಇದನ್ನು ಮುಂದುವರಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಇಂದು ಯಾಕೆ ಕಾಂಗ್ರೆಸ್ ಈ ಹೀನಾಯ ಸ್ಥಿತಿ ತಲುಪಿದೆ? ದೇಶದಲ್ಲಿ ಎಲ್ಲಿದೆ ಕಾಂಗ್ರೆಸ್? ಇಡೀ ಹಿಂದೂಸ್ತಾನದಲ್ಲಿ ಕಾಂಗ್ರೆಸ್ ಕೇವಲ ನಾಲ್ಕು ಕಡೆ ಇದೆ. ರಾಜಸ್ತಾನ್, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ, ದೇವೇಗೌಡ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ

ಈ ಕರ್ನಾಟಕ ಸಮನ್ವಯ ಸಮಿತಿಯಲ್ಲಿ ನಾನು ಒಂದು ಶಬ್ದ ಬಳಕೆ ಮಾಡಿದೆ. ನಾನು ಯಾವತ್ತೂ ಕಟುವಾದ ಶಬ್ದ ಬಳಕೆ ಮಾಡಿಲ್ಲ. ಮೈಸೂರಿನಲ್ಲಿ ಗೌರವಾನ್ವಿತ ಮುಖ್ಯಮಂತ್ರಿ, 'ಜೆಡಿಎಸ್ ಎಲ್ಲಿದೆ?' ಅಂತಾ ಪ್ರಶ್ನೆ ಮಾಡ್ತಾರೆ. ಕುಮಾರಸ್ವಾಮಿಗೆ ಅವರ ಮಗನನ್ನ ಗೆಲ್ಲಿಸೋಕೆ ಆಗಲಿಲ್ಲ, ಕುಮಾರಸ್ವಾಮಿ ತಂದೆ ತುಮಕೂರಿನಲ್ಲಿ ನಿಂತಾಗ ಗೆಲ್ಲಿಸೋಕೆ ಆಗಿಲ್ಲ.' ಅಂತಾ ಆದರೆ 2019ರ ಸೋಲಿಗೆ ಕಾರಣ ಯಾರು? ನಾನು ತುಮಕೂರಿನಲ್ಲಿ ನಿಂತಾಗ ಏನೇನು ಆಟ ಆಡಿದ್ರು. ನಾನು ತುಮಕೂರಿನಲ್ಲಿ ಅರ್ಜಿ ಹಾಕ್ಬೇಕು ಅಂತಿದ್ದಿಲ್ಲ. ನಾನು ಮುಂದೆ ಪಾರ್ಲಿಮೆಂಟ್‌ಗೆ ನಿಲ್ಲೋದಿಲ್ಲ ಅಂತಾ ಖಂಡಾತುಂಡವಾಗಿ ಹೇಳಿದ್ದೆ. ಆಗ ನನಗೆ ವಿಪರೀತ ಮಂಡಿನೋವು ಇತ್ತು.
ರಾಹುಲ್ ಗಾಂಧಿ, ಸೋನಿಯಾಗಾಂಧಿ, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ್ ಖರ್ಗೆ ಇದ್ದರು. ಅವರೆಲ್ಲಾರ ಮುಂದೆ ಇನ್ಮುಂದೆ ಪಾರ್ಲಿಮೆಂಟ್ ನಲ್ಲಿ ನಿಲ್ಲಲ್ಲ ಅಂತಾ ಹೇಳಿದ್ದೆ. ನನ್ನನ್ನ ನಿಲ್ಲಿಸೋದಕ್ಕೆ ಏನೇನು ಆಟ ಆಡಿದ್ರು, ನಾನೇನು ಸೀಟು ಕೇಳಿದ್ನಾ? ಎಂದು ಕಿಡಿಕಾರಿದರು.

ರಾಜಣ್ಣ ಅವ್ರು ಹೇಳ್ತಾರೆ, ರೀ ದೇವೇಗೌಡರೇ ನೀವು ತುಮಕೂರಿಗೆ ಬಂದ ಕಾರಣವೇನು? ನಾನು ತುಮಕೂರಿಗೆ ಬರಬೇಕು ಅಂತಾ ಹೇಳೇ ಇಲ್ಲಾ. ರಾಜಕೀಯ ಚದುರಂಗದ ಆಟ. ನೀವು ಮುದ್ದಹನುಮೇಗೌಡರಿಗೆ ಅನ್ಯಾಯ ಮಾಡಿದ್ದೀರಿ. ಅವನಿಗೆ ನೀವು ಸ್ಥಾನ ಕಲ್ಪಿಸಿಕೊಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಇದರಿಂದ ನನಗೆ ಏನು ಮಾತನಾಡಬೇಕು ಗೊತ್ತಾಗಲಿಲ್ಲ. ನನಗೆ ಮನಸಿಗೆ ಬಹಳ ನೋವಾಯ್ತು. ಸಿದ್ದರಾಮಯ್ಯ ಅವರಿಗೆ ಅವರ ಸಮಾಜದ ಸಭೆಯಿತ್ತು. ಅಲ್ಲಿಗೆ ನಾನು ಸುರೇಶ್ ಬಾಬು ಹೋದ್ವಿ. ಹೋದ ತಕ್ಷಣ ಸಭೆ ನಿಲ್ಲಿಸಿ ಬಿಟ್ರು. ನನಗೆ ಬೇಜಾರ್ ಆಯ್ತು ವಾಪಸ್ ಬಂದೆ. ಇನ್ನು ಪಾಪ ಪರಮೇಶ್ವರ್ ಅವರ ಗೆಸ್ಟ್ ಹೌಸ್ ಕೊಟ್ಟಿದ್ರು. ಅಲ್ಲಿ ರಾತ್ರಿ ಒಂದು ಗಂಟೆವರೆಗೂ ಚರ್ಚೆ ಆಯ್ತು. ದೇವೇಗೌಡನನ್ನ ತೆಗೆಯೋದು ಹೇಗೆ ಅಂತಾ ಸಿದ್ರಾಮಣ್ಣ, ರಾಜಣ್ಣ, ಅವತ್ತು ಏನ್ ಮಾಡಿದ್ರಿ ನೀವು?

 ನಾನು ರಾಜಕೀಯದಿಂದ ನಿವೃತ್ತಿ ಆಗೋ ಹೊತ್ತಿಗೆ ವಾಲ್ಮೀಕಿ ಸಮಾಜಕ್ಕೆ ಕಿಂಚಿತ್ತೂ ಆದರೂ ಸೇವೆ ಮಾಡಿದ್ದೀನಿ. ಆ ಮಹಾನುಭಾವರು ರಾಮಾಯಣ ಬರೆದಿದ್ದಾರೆ. ವಾಲ್ಮೀಕಿ ಬ್ರಹ್ಮ ಬೇಡ ಬೇಟೆ ಮಾಡಿ ಊಟ ಮಾಡೋರು. ಅದನ್ನೆಲ್ಲ ಹೇಳೋಕೆ ಹೋಗಲ್ಲ. ವಾಲ್ಮೀಕಿ ರಾಮಾಯಣಕ್ಕೆ ಸಮಾನವಾದ ಮತ್ತೊಂದು ಗ್ರಂಥವಿಲ್ಲ. ಇಂದಿನ ಪ್ರಧಾನ ಮಂತ್ರಿ ಅಯೋಧ್ಯೆಯಲ್ಲಿ ಆ ಶ್ರೀರಾಮನ ಮೂರ್ತಿಯನ್ನ ನಿಲ್ಲಿಸ್ತಾರೆ. ನಾನು ರಾಜಣ್ಣರನ್ನ ಗೆಲ್ಲಿಸೋದಕ್ಕೆ ಜ್ವರ ಬಂದು ಮನೆಯಲ್ಲಿ ಮಲಗಿದ್ದರೂ ಕೊನೆಯ ಹತ್ತು ನಿಮಿಷದಲ್ಲಿ ಅಲ್ಲಿಗೆ ಹೋಗಿ ಮಾತನಾಡಿ ಬಂದಿದ್ದೆ. ಒಂದು ಮಾತನ್ನ ಹೇಳ್ತಿನಿ, ಪವಿತ್ರ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ನೀವು ವಾಲ್ಮೀಕಿ ಸಮಾಜಕ್ಕೆ ಕೈಮುಗಿದು ಕೇಳ್ತಿನಿ ರಾಜಣ್ಣನ ಮಾತನ್ನು ನೀವು ಕೇಳಬೇಡಿ. ಇದೊಂದು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಸೋಮಣ್ಣನವರಿಗೇ ಬೆಂಬಲ ನೀಡಿ. ನಾನು ಕೈಮುಗಿದು ನಿಮ್ಮಲ್ಲಿ ಕೇಳ್ತೀನಿ ಎಂದು ಮನವಿ ಮಾಡಿಕೊಂಡರು.

Lok Sabha Election 2024: ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವ: ವಿ.ಸೋಮಣ್ಣ

ಕಾಂಗ್ರೆಸ್ ನಲ್ಲಿ ನಿಲ್ಲೋದಕ್ಕೆ ಅಭ್ಯರ್ಥಿಗಳೇ ಇಲ್ಲ. ಯಾರೂ ನಿಲ್ಲೋಕ್ಕೆ ತಯಾರಿಲ್ಲ. ಅವತ್ತು ನನ್ನನ್ನ ಸೋಲಿಸೋದಕ್ಕೆ ಕಾರಣನಾದ ವ್ಯಕ್ತಿಯನ್ನ ಕಾಂಗ್ರೆಸ್ ಗೆ ಸೇರಿಸಿಕೊಂಡು ಅವನಿಗೆ ಟಿಕೆಟ್ ಕೊಟ್ಟು ನನಗೆ ಮುಖಭಂಗ ಮಾಡಿದ್ರು. ಆದರ ಈ ಚುನಾವಣೆಯಲ್ಲಿ ನನ್ನ ವಾಲ್ಮೀಕಿ ಸಮಾಜದವರು ನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ. ನಿಮಗೆ ಮೀಸಲಾತಿ ಕೊಟ್ಟೆ ನಾನು, ಒಕ್ಕಲಿಗರಿಗೆ ಕೊಡಲಿಲ್ಲ. ನಾನೊಬ್ಬ ಹಳ್ಳಿಯ ರೈತನ ಮಗಾ. ಕಾಂಗ್ರೆಸ್ ರಾಜ್ಯದಲ್ಲಿ 3-4 ಸೀಟ್ ಗೆ ಬಂದು ನಿಂತಿದೆ ಅಂದ್ರೆ. ನಾನು ಮಲಗೋದಿಲ್ಲ, ಮೇ.2ನೇ ತಾರೀಖಿನ ವರೆಗೂ ಇಡೀ ರಾಜ್ಯದಲ್ಲಿ ಒಡಾಡುತ್ತೇನೆ ಎಂದರು.

Follow Us:
Download App:
  • android
  • ios