ಜಾತಿ ಆಧಾರಿತ ಮೀಸಲು: ಕಾಂಗ್ರೆಸ್‌ಗೆ ಮೋದಿ ಹಾಕಿದ ಸವಾಲು ಏನು?

: ಸತತವಾಗಿ ಒಂದು ವಾರದಿಂದ ಜಾತಿ ಮೀಸಲು ವಿಚಾರವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಸ್ಲಿಮರಿಗೆ ಜಾತಿ ಆಧಾರಿತ ಮೀಸಲು ನೀಡುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡುವಂತೆ ಕಾಂಗ್ರೆಸ್‌ಗೆ ಸವಾಲೆಸೆದಿದ್ದಾರೆ.

Lok sabha election 2024 PM Modi hurls challenge to INDIA alliance on religion-based reservation rav

ಬನಸ್ಕಾಂತ (ಮೇ.2): ಸತತವಾಗಿ ಒಂದು ವಾರದಿಂದ ಜಾತಿ ಮೀಸಲು ವಿಚಾರವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಸ್ಲಿಮರಿಗೆ ಜಾತಿ ಆಧಾರಿತ ಮೀಸಲು ನೀಡುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡುವಂತೆ ಕಾಂಗ್ರೆಸ್‌ಗೆ ಸವಾಲೆಸೆದಿದ್ದಾರೆ.

ಗುಜರಾತ್‌ನ ದೀಸಾ ಪಟ್ಟಣದಲ್ಲಿ ಬುಧವಾರ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಾಂಗ್ರೆಸ್‌ನ ಶೆಹಜಾದಾ ರಾಹುಲ್‌ ಗಾಂಧಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಜಾತಿ ಆಧಾರದಲ್ಲಿ ಮೀಸಲಾತಿಯ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಸಂವಿಧಾನದಲ್ಲಿ ಈ ಕುರಿತು ತಿದ್ದುಪಡಿ ತರುವುದಿಲ್ಲ ಮತ್ತು ಜಾತಿ ಆಧಾರಿತವಾಗಿ ಮೀಸಲು ನೀಡುವುದಿಲ್ಲ ಎಂದು ಘೋಷಿಸಬೇಕು. 

Interview: ನನ್ನ ಮಾವ ಖರ್ಗೆ ಸಾಧನೆಯೇ ನನಗೆ ಶ್ರೀರಕ್ಷೆ - ರಾಧಾಕೃಷ್ಣ ದೊಡ್ಮನಿ

ಅಲ್ಲದೆ ಈ ಕುರಿತು ಲಿಖಿತ ಹೇಳಿಕೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ‘ನಾನು ಬದುಕಿ ಇರುವವರೆಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇರುವ ಮೀಸಲಾತಿಯನ್ನು ಕಸಿಯಲು ಅವಕಾಶ ನೀಡುವುದಿಲ್ಲ’ ಎಂದು ಪುನರುಚ್ಚರಿಸಿದರು.

Latest Videos
Follow Us:
Download App:
  • android
  • ios