Asianet Suvarna News Asianet Suvarna News

ಲೋಕಸಭಾ ಕಣದಲ್ಲಿ 121 ಅನಕ್ಷರಸ್ಥ, 80 ವರ್ಷಕ್ಕೂ ಮೇಲ್ಪಟ್ಟ 11 ಅಭ್ಯರ್ಥಿಗಳು ಸ್ಪರ್ಧೆ!

ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳ ಪೈಕಿ ಇನ್ನೂ 2 ಹಂತದ ಚುನಾವಣೆಗಳು ಮಾತ್ರ ಬಾಕಿಯಿದೆ. ಈ ನಡುವೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಅಂಕಿ ಅಂಶ ಹೊರ ಬಿದ್ದಿದ್ದು, ಈ ಬಾರಿ 121 ಅನಕ್ಷರಸ್ಥ ಅಭ್ಯರ್ಥಿಗಳು ಜನರನ್ನು ಪ್ರತಿನಿಧಿಸಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

Lok sabha election 2024 phase 6 121 uneducated candidate contest from various constituency rav
Author
First Published May 24, 2024, 6:21 AM IST

1502 ಪದವೀಧರ, 198 ವೈದ್ಯರ ಸ್ಪರ್ಧೆ

ನವದೆಹಲಿ (ಮೇ.24): ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳ ಪೈಕಿ ಇನ್ನೂ 2 ಹಂತದ ಚುನಾವಣೆಗಳು ಮಾತ್ರ ಬಾಕಿಯಿದೆ. ಈ ನಡುವೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಅಂಕಿ ಅಂಶ ಹೊರ ಬಿದ್ದಿದ್ದು, ಈ ಬಾರಿ 121 ಅನಕ್ಷರಸ್ಥ ಅಭ್ಯರ್ಥಿಗಳು ಜನರನ್ನು ಪ್ರತಿನಿಧಿಸಲು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ (ಎಡಿಆರ್) ಸಂಸ್ಥೆಯು ಒಟ್ಟು 543 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ, 8360 ಅಭ್ಯರ್ಥಿಗಳ ಪೈಕಿ 8337 ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಪ್ರಕಟಿಸಿದೆ. ಅದರಲ್ಲಿ 121 ಮಂದಿ ಅಭ್ಯರ್ಥಿಗಳು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಉಳಿದಂತೆ 359 ಜನರು 5ನೇ ತರಗತಿ, 647 ಮಂದಿ 8 ನೇ ಕ್ಲಾಸ್ ,1303 ಅಭ್ಯರ್ಥಿಗಳು 12ನೇ ತರಗತಿ, 1502 ನಾಯಕರು ಪದವಿ ಹಾಗೂ 198 ಜನ ವೈದ್ಯಕೀಯ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ.

 

ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

80 ವರ್ಷಕ್ಕೂ ಮೇಲ್ಪಟ್ಟವರು 11 ಅಭ್ಯರ್ಥಿಗಳು ಸ್ಪರ್ಧೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ 5 ಹಂತಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಈ ಚುನಾವಣೆಯಲ್ಲಿ ಪ್ರಮುಖವಾಗಿ 80 ವರ್ಷ ವಯೋಮಿತಿ ದಾಟಿದವರು 11 ಅಭ್ಯರ್ಥಿಗಳು ಸ್ಫರ್ಧೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ ಚುನಾವಣೆಗೆ ಸ್ಪರ್ಧಿಸಿರುವ 8,360 ಅಭ್ಯರ್ಥಿಗಳ ಪೈಕಿ 8,337 ಅಭ್ಯರ್ಥಿಗಳ ಡೇಟಾವನ್ನು ವಿಶ್ಲೇಷಣೆ ನೋಡಿದಾಗ ಇದರಲ್ಲಿ 25-30 ವಯೋಮಿತಿ ಇರುವ ಅಭ್ಯರ್ಥಿಗಳು 537 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಶೇ. 6.44 ರಷ್ಟು ಮಾತ್ರ ಇದೆ ಎಂದು ವರದಿ ಉಲ್ಲೇಖಿಸಿದೆ.

Latest Videos
Follow Us:
Download App:
  • android
  • ios