ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

ಬಿಜೆಪಿ ಈ ಬಾರಿ 305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಮೆರಿಕದ ರಾಜಕೀಯ ತಜ್ಞ ಮತ್ತು ಜಾಗತಿಕ ರಾಜಕೀಯ ಅಪಾಯಗಳ ಸಲಹೆಗಾರ ಇಯಾನ್ ಬ್ರೆಮ್ಮರ್ ಭವಿಷ್ಯ ನುಡಿದಿದ್ದಾರೆ.

BJP Will Win 305 Seats US Political Scientist Ian Bremmer prediction of Lok Sabha Poll rav

ಮುಂಬೈ (ಮೇ.23): ಬಿಜೆಪಿ ಈ ಬಾರಿ 305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಮೆರಿಕದ ರಾಜಕೀಯ ತಜ್ಞ ಮತ್ತು ಜಾಗತಿಕ ರಾಜಕೀಯ ಅಪಾಯಗಳ ಸಲಹೆಗಾರ ಇಯಾನ್ ಬ್ರೆಮ್ಮರ್ ಭವಿಷ್ಯ ನುಡಿದಿದ್ದಾರೆ.

ಎನ್‌ಡಿಟೀವಿಗೆ ಸಂದರ್ಶನ ನೀಡಿದ ಅವರು, 7 ಹಂತಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಬಿಜೆಪಿ 295 ರಿಂದ 315 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಮೋದಿಯವರು ಬಲವಾದ ಆರ್ಥಿಕ ಕಾರ್ಯಕ್ಷಮತೆ, ಸ್ಥಿರ ಸುಧಾರಣೆಯಿಂದ ಮೂರನೇ ಬಾರಿ ಗೆಲ್ಲುವುದು ಬಹುತೇಕ ಖಚಿತ. ಇದು ಭವ್ಯ ಯೋಜನೆಗಳ ಸ್ಥಿರವಾದ ಸಂದೇಶ’ ಎಂದರು.

ದೇಶ ನಡೆಸೋದು ಮಕ್ಕಳಾಟ ಅಲ್ಲ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಭಾರತದ ಚುನಾವಣೆ ಬಗ್ಗೆ ಮೆಚ್ಚುಗೆ:

ಇದೇ ವೇಳೆ ಬ್ರೆಮ್ಮರ್ ಭಾರತದ ಚುನಾವಣಾ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಭಾರತದಲ್ಲಿ ಮುಕ್ತ , ನ್ಯಾಯೋಚಿತ ಮತ್ತು ಪಾರದರ್ಶಕ ಚುನಾವಣೆ ನಡೆಯುತ್ತದೆ’ ಎಂದರು.

‘ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ ರೀತಿಯಲ್ಲಿಯೇ ಜಗತ್ತಿನ ಇತರ ದೇಶಗಳಲ್ಲಿ ಚುನಾವಣೆ ನಡೆಯಬೇಕು. ಇಲ್ಲಿ ಸರಾಗವಾಗಿ ಯಾವುದೇ ಅನಿಶ್ಚಿತತೆ ಇಲ್ಲದೆ ಚುನಾವಣೆ ನಡೆಯುತ್ತದೆ. ರಾಜಕೀಯ ದೃಷ್ಟಿಕೋನದಿಂದ ನೋಡಿದರೆ , ಭಾರತದ ಸಾರ್ವತ್ರಿಕ ಚುನಾವಣೆಯು ಸ್ಥಿರವಾಗಿ ಕಾಣುತ್ತಿದೆ, ಉಳಿದೆಡೆ ಇದು ಸಮಸ್ಯೆಗಳಿಂದ ಕೂಡಿದೆ’ ಎಂದರು.

 

ಯಾರು ಏನೇ ಹೇಳಲಿ, ದೇಶದಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೆ: ಬೊಮ್ಮಾಯಿ

Latest Videos
Follow Us:
Download App:
  • android
  • ios