Asianet Suvarna News Asianet Suvarna News

ಇನ್ನು ಕಾಲ ಮಿಂಚಿಲ್ಲ ಈಶ್ವರಪ್ಪ ಅವರೇ ನಮ್ಮ ಜೊತೆ ಬನ್ನಿ: ಬಿ.ವೈ.ವಿಜಯೇಂದ್ರ

ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ. ಅವರು ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ. ನಮ್ಮ ಜೊತೆ ಕೈ ಜೋಡಿಸಿ ಎಂದು ವಿನಂತಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Lok Sabha Election 2024 KS Eshwarappa himself come with us Says BY Vijayendra gvd
Author
First Published Apr 8, 2024, 11:53 AM IST

ಶಿವಮೊಗ್ಗ (ಏ.08): ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ. ಅವರು ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ. ನಮ್ಮ ಜೊತೆ ಕೈ ಜೋಡಿಸಿ ಎಂದು ವಿನಂತಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಹಿರಿಯರು, ಪಕ್ಷ ಕಟ್ಟಲು ನಿಮ್ದು‌ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ ಸಂದರ್ಭ ಈ ಸನ್ನಿವೇಶಕ್ಕೆ ತಮ್ಮನ್ನು ದೂಡಿದೆ. ಮೋದಿ ಪ್ರಧಾನಮಂತ್ರಿ ಆಗಲು ಪಕ್ಷದ ಹಿತದೃಷ್ಟಿಯಿಂದ ತಾವು ಕೈಜೋಡಿಸಬೇಕು. ನಿಮ್ಮ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡುತ್ತೇವೆ. 

ನಾವಂತು ನಿಮ್ಮ ಜೊತೆ‌ ಇರುತ್ತೇವೆ ಎಂದು ಭರವಸೆ ನೀಡಿದರು. ಪ್ರೀತಂಗೌಡ ಜೊತೆ ಮಾತನಾಡಿದ್ದೇನೆ. ಮೈಸೂರು ಚಾಮರಾಜನಗರ ‌ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣುತ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಕಾಂಗ್ರೆಸ್ ‌ಪಕ್ಷವನ್ನು ನಿದ್ದೆಗೆಡಿಸಿದೆ. ಮೋದಿ ಐದು ಕೆಜಿ ಅಕ್ಕಿ ಕೊಡ್ತಿದ್ದಾರೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಕೊಡುತ್ತಿದೆ. 

ತಂತ್ರಜ್ಞಾನ, ಕಲೆ ಸಮ್ಮಿಳಿತ ಮೋಟೊರೋಲಾ ಎಡ್ಸ್ 50 ಪ್ರೊ: ನಾಳೆಯಿಂದ ಎಲ್ಲೆಡೆ ಲಭ್ಯ

ಮನೆ ಮನೆಯಲ್ಲಿ ‌ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಅಂತಾ ಹರಸುತ್ತಿದ್ದಾರೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ‌ಇಲ್ಲ ಎಂದರು. ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗಿದೆ. ರಾಜ್ಯದಲ್ಲಿ ಯಾವುದೇ ಸ್ಥಾನ ಗೆಲ್ಲಲ್ಲ. ಜನರು ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯಾರು ನೋಡುತ್ತಿಲ್ಲ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸಿದರೆ‌ ನಾವು ಬಿಡಲ್ಲ. 

ಗ್ಯಾರಂಟಿ ಯೋಜನೆ ಮೇಲೆ ಅಧಿಕಾರಕ್ಕೆ ಬಂದಿದ್ದೀರಾ ಅದನ್ನು ‌ಮುಂದುವರಿಸಿ, ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಏನು ಮಾಡಿದೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಸಾಕಷ್ಟು ಅನುದಾನ ಕೊಟ್ಟಿತ್ತು. ನಿಮಗೆ ಏನು ದಾಡಿ ಆಗಿದೆ. ರೈತರಿಗೆ ಮೊದಲು‌ ಪರಿಹಾರ ಕೊಡಿ, ಕಳೆದ ಬಾರಿಗಿಂತ ರೈತರ ಆತ್ಮಹತ್ಯೆ ‌ಕಡಿಮೆ ಆಗಿದೆ ಅಂತಾರೆ ಹಾಗಾದರೆ ಅದೇ ನಿಮ್ಮ ಸಾಧನೆನಾ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಯೋಜನೆ ರಾಜ್ಯದ ಜನರಿಗೆ ಸಿಗಬಾರದು ಅಂತಾ ರಾಜ್ಯ ಸರಕಾರ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಬಾಕ್ಸ್‌...

Lok Sabha Election 2024: ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ: ಕೆ.ಎಸ್‌.ಈಶ್ವರಪ್ಪ

ರಾಜ್ಯಕ್ಕೆ ಮೋದಿ, ಅಮಿತ್ ಶಾ, ಆದಿತ್ಯನಾಥ್‌: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಇನ್ನು ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ರಾಜ್ಯಕ್ಕೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios