Asianet Suvarna News Asianet Suvarna News
breaking news image

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ಒಂದು ವರ್ಷ ಕಳೆದಿಲ್ಲ ಆಗಲೇ ಹಿಂದೂಗಳ ಮೇಲೆ ಹಲ್ಲೆ, ಕೊಲೆಗಳಾಗ್ತಿವೆ. ಇನ್ನು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಗೆ ಹೊಕ್ಕು ಹೊಡೆಯುತ್ತಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಮನೆಗೆ ಹೊಕ್ಕು ಹೊಡೆಯುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು.

Lok sabha election 2024 in Karnataka MLA Basanagowda patil yatnal outraged against congress at bidar constituency rav
Author
First Published Apr 28, 2024, 6:15 PM IST

ಬೀದರ್ (ಏ.28): ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ಒಂದು ವರ್ಷ ಕಳೆದಿಲ್ಲ ಆಗಲೇ ಹಿಂದೂಗಳ ಮೇಲೆ ಹಲ್ಲೆ, ಕೊಲೆಗಳಾಗ್ತಿವೆ. ಇನ್ನು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಗೆ ಹೊಕ್ಕು ಹೊಡೆಯುತ್ತಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಮನೆಗೆ ಹೊಕ್ಕು ಹೊಡೆಯುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು.

ಬೀದರ್‌ನಲ್ಲಿ ನಡೆದ ಮಾತಯಾಚನೆ ವೇಳೆ ಮಾತನಾಡಿದ ಯತ್ನಾಳ್, ಕಲಬುರಗಿಯಲ್ಲಿ ಜೈ ಶ್ರೀರಾಮ್ (Jai shree Ram Slogan) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆ ಹೆಣ್ಣು ಮಕ್ಕಳನ್ನೂ ಹೊತ್ತುಕೊಂಡು ಹೋಗುತ್ತಾರೆ. ಕಲಬುರಗಿಯಲ್ಲಿ ಹಿಂದೂ ಹುಡುಗಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಆ ಪ್ರಕರಣವನ್ನ ಪ್ರಿಯಾಂಕ್ ಖರ್ಗೆ(Priyank kharge) ಮುಚ್ಚಿ ಹಾಕೋಕೆ ನೋಡ್ತಿದ್ದಾರೆ. ಸಾಬರದ್ದೇ ಕಾಂಗ್ರೆಸ್, ರಾಜ್ಯದಲ್ಲಿ ಪಾಕಿಸ್ತಾನ ಸರ್ಕಾರ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್

ರಾಜ್ಯ, ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಕೈ ನಾಯಕರು ಚೊಂಬು ಹಿಡಿದುಕೊಂಡು ಮನೆಗೆ ಹೋಗ್ತಾರೆ ಎಂದು ವ್ಯಂಗ್ಯ ಮಾಡಿದರು. ಇನ್ನು ಇದೇ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ಸುರ್ಜೇವಾಲಾ ಹಾಫ್ ಮ್ಯಾಡ್, ಕಲೆಕ್ಷನ್ ಮಾಸ್ಟರ್ ಎಂದು ಕರೆದ ಯತ್ನಾಳ್. ಸುರ್ಜೇವಾಲಾ ಒಬ್ಬ ವಸೂಲಿ ದಲ್ಲಾಳಿ ಇದ್ದಾನೆ. ರಾಜ್ಯಕ್ಕೆ ಬಂದು ಸೂಟ್‌ಕೇಸ್ ತುಂಬಿಕೊಂಡು ಹೋಗ್ತಾನೆ. ಬೀದರ್‌ನಿಂದ ಸಕ್ಕರೆ ಒಯ್ಯಲು ಬಂದಿದ್ದಾನೆ ಎಂದು ಸುರ್ಜೇವಾಲಾ, ಕಾಂಗ್ರೆಸ್ ನಾಯಕರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

Latest Videos
Follow Us:
Download App:
  • android
  • ios