ಕಾಂಗ್ರೆಸ್ ತಂಟೆಗೆ ಬಂದ್ರೆ ಬಿಡೊಲ್ಲ: ಶ್ರೀರಾಮುಲು ವಿರುದ್ಧ ಸಚಿವ ನಾಗೇಂದ್ರ ಕಿಡಿ
ನಾನು ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಸಹಕಾರದಿಂದಲೇ ಅವರು(ಶ್ರೀರಾಮುಲು) ಹಿಂದೆ ಮಂತ್ರಿಯಾಗಿದ್ದರು. ಯಾರನ್ನೂ ಯಾರೂ ಬೆಳೆಸೋಕೆ ಆಗೊಲ್ಲ. ಗುಂಪು ಇದ್ದಾಗ ಎಲ್ಲರೂ ಒಟ್ಟಾಗಿದ್ದೆವು, ಈಗ ಮಾತಾಡ್ತೀರಾ? ಎಂದು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು ನೀಡಿದರು.
ಬಳ್ಳಾರಿ (ಏ.7) ನಾನು ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಸಹಕಾರದಿಂದಲೇ ಅವರು(ಶ್ರೀರಾಮುಲು) ಹಿಂದೆ ಮಂತ್ರಿಯಾಗಿದ್ದರು. ಯಾರನ್ನೂ ಯಾರೂ ಬೆಳೆಸೋಕೆ ಆಗೊಲ್ಲ. ಗುಂಪು ಇದ್ದಾಗ ಎಲ್ಲರೂ ಒಟ್ಟಾಗಿದ್ದೆವು, ಈಗ ಮಾತಾಡ್ತೀರಾ? ಎಂದು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸಚಿವ ನಾಗೇಂದ್ರ ತಿರುಗೇಟು ನೀಡಿದರು.
'ಸಚಿವ ನಾಗೇಂದ್ರ ರಾತ್ರೋರಾತ್ರಿ ಹುಟ್ಟಿದ ನಾಯಕ, ಭೂತದ ಬಾಯಲ್ಲಿ ಭಗವದ್ಗೀತೆ' ಎಂದು ಟೀಕೆ ಮಾಡಿದ್ದ ಶ್ರೀರಾಮುಲು. ಶ್ರೀರಾಮುಲು ಹೇಳಿಕೆ ಪ್ರಸ್ತಾಪಿಸಿ ತಿರುಗೇಟು ನೀಡಿದ ಸಚಿವ ನಾಗೇಂದ್ರ, ಶ್ರೀರಾಮುಲು ನನ್ನ ವಿರುದ್ಧ ಸೋತೇ ಅವರು ಮಾಜಿ ಆಗಿದ್ದಾರೆ. ಅವರ ಶಿಷ್ಯನ ವಿರುದ್ಧ ಸೋತಿದ್ದೇವೆ ಎಂದು ಹೀಗೆಲ್ಲ ಮಾತನಾಡುತ್ತಿದ್ದಾರೆ. ನಾನು ರಾತ್ರೋರಾತ್ರಿ ಹುಟ್ಟಿದ ನಾಯಕನಲ್ಲ. ನಾನಿರುವ ಪಕ್ಷದಲ್ಲಿ ಹಗಲು ರಾತ್ರಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಭೂತ ನಾನಲ್ಲ ಅವರು, ಅವರೇ ಭೂತದ ಪಕ್ಷದಲ್ಲಿದ್ದರೆ ಎಂದು ಕಿಡಿಕಾರಿದರು.
'ಈ ಮೋಕ ನಂದು ಗೆದ್ದುಕೋ ನೋಡೋಣ..' ಶ್ರೀರಾಮುಲು ವಿರುದ್ಧ ಸಿನಿಮಾ ಶೈಲಿಯಲ್ಲಿ ಸೆಡ್ಡು ಹೊಡೆದ ಸಚಿವ ನಾಗೇಂದ್ರ!
ಇದ್ದದ್ದು ಇದ್ದಂಗೆ ಹೇಳಿದ್ರೇ.. ಅನ್ನೋ ಗಾದೆ ಮಾತಿನಂತಾಗಿದೆ ಶ್ರೀರಾಮುಲು ಪರಿಸ್ಥಿತಿ. ಜಗಳ ತಂದಿಡೋರನ್ನು, ಸುಳ್ಳು ಹೇಳೋರನ್ನ ಜನರು ನಂಬೊಲ್ಲ. ಬಿಜೆಪಿ ಕಾರ್ಯಕರ್ತರಿಗೆ ಹಾರ ಹಾಕಿ ಕಾಂಗ್ರೆಸ್‌ನವರು ಬಿಜೆಪಿ ಸೇರಿದ್ದಾರೆಂದು ಸುಳ್ಳುತ್ತಿದ್ದಾರೆ. ಸೋಲಿನ ಅವಮಾನದಿಂದ ಹೀಗೆಲ್ಲ ಮಾತನಾಡ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಸಹ ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದರು.
ಬ್ರೋ ಬಿಡಲ್ಲ..(ಶ್ರೀರಾಮುಲು) ಕಾಂಗ್ರೆಸ್ ಕಾರ್ಯಕರ್ತರ ತಂಟೆಗೆ ಬಂದ್ರೇ ಬಿಡೋ ಪ್ರಶ್ನೆಯಿಲ್ಲ. ಯಾರೇ ತೊಂದರೆ ಕೊಟ್ರೂ ಬಿಡೋದಿಲ್ಲ. ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರಿಕಿರಿ ಮಾಡ್ತಿದ್ದಾರೆ.ತಂಟೆಗೆ ಬಂದ್ರೇ ಬಿಡೋದಿಲ್ಲ. ಊರು ಬಿಡಬೇಕೆಂದು ಬೆದರಿಕೆ ಹಾಕ್ತಿದ್ದಾರೆ. ನಮ್ಮ ಕಾರ್ಯಕರ್ತರ ತಂಟೆಗೆ ಬಂದ್ರೆ ನಾವು ಸುಮ್ಮನೆ ಬಿಡೊಲ್ಲ ಎಂದು ಎಚ್ಚರಿಸಿದರು.
ಲೋಕಸಭಾ ಚುನಾವಣೆ 2024: ಮೋದಿ ಅಭಿವೃದ್ಧಿ-ಕಾಂಗ್ರೆಸ್ ದುರಾಡಳಿತದ ಮಧ್ಯೆ ಯುದ್ಧ, ಶ್ರೀರಾಮುಲು
ಇನ್ನು ಬಿಜೆಪಿ ಸೇರ್ಪಡೆಗೊಂಡ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿಚಾರ ಪ್ರಸ್ತಾಪಿಸಿದ ಸಚಿವ ನಾಗೇಂದ್ರ, ಅವರಿಗೆ ಒಳ್ಳೆಯದಾಗಲಿ. ಅವರ ಸಿದ್ಧಾಂತ ಬೇರೆ, ನಮ್ಮದು ಬೇರೆ. ಲಕ್ಷ್ಮೀ ಅರುಣಾ ಬಗ್ಗೆ ನಾನು ಮಾತನಾಡೊಲ್ಲ. ಅವರು ಏನೇ ಹೇಳಲಿ ಒಪ್ಪುವೆ. ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಾಗ ಅವರ ತಂತ್ರಗಾರಿಕೆ ಬೇರೆ ನಮ್ಮದು ಬೇರೆ. ಒಂದೇ ಪಕ್ಷದಲ್ಲಿ ಇದ್ದಾಗ ಜನಾರ್ದನ ರೆಡ್ಡಿ ನನ್ನ ರಾಜಕೀಯ ಗುರುಗಳು. ಆದರೆ ಈಗ ಅವರೇ ಬೇರೆ, ನಾವೇ ಬೇರೆ ಪಕ್ಷದಲ್ಲಿದ್ದೇವೆ. ಮೋದಿ ಹತ್ತು ವರ್ಷದಲ್ಲಿ ಕೋಟಿ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಇಂದಲ್ಲ ನಾಳೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಭರವಸೆ ವ್ಯಕ್ತಪಡಿಸಿದರು.