'ಈ ಮೋಕ ನಂದು ಗೆದ್ದುಕೋ ನೋಡೋಣ..' ಶ್ರೀರಾಮುಲು ವಿರುದ್ಧ ಸಿನಿಮಾ ಶೈಲಿಯಲ್ಲಿ ಸೆಡ್ಡು ಹೊಡೆದ ಸಚಿವ ನಾಗೇಂದ್ರ!

ಇಂದು ಬಳ್ಳಾರಿ ತಾಲೂಕಿನ ಮೋಕ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಸಚಿವ ನಾಗೇಂದ್ರ ಆರುಮುಗ(ಕೆಂಪೇಗೌಡ) ಸಿನಿಮಾ ಶೈಲಿಯಲ್ಲಿ, "ಈ ಮೋಕ ನಂದು, ಈ ಮೋಕ ನಂದು ಗೆಲ್ಲು ನೋಡೋಣ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ  ತೊಡೆ ತಟ್ಟಿ ಅಬ್ಬರಿಸಿದ್ದಾರೆ!

Lok sabha election 2024 Congress workers convention at moka village at ballari loksabha constituency rav

ಬಳ್ಳಾರಿ (ಏ.1) : ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಕ್ಷೇತ್ರಗಳಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮಾಡುತ್ತಿದ್ದಾರೆ. ಪ್ರಚಾರ ಸಭೆ, ಭಾಷಣಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಅಭ್ಯರ್ಥಿಗಳು ವೈಯಕ್ತಿಕ ನಿಂದನೆ, ಸವಾಲುಗಳನ್ನೊಡ್ಡುತ್ತಿದ್ದಾರೆ. ಅಂತೆಯೇ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಘೋಷಣೆಯಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ ನಾಯಕರು ಅಕ್ರಮಣಕಾರಿಯಾಗಿ ವಾಗ್ದಾಳಿ ನಡೆಸುತಿದ್ದಾರೆ. 

ಇಂದು ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ಸಚಿವ ನಾಗೇಂದ್ರ ಆರುಮುಗ(ಕೆಂಪೇಗೌಡ) ಸಿನಿಮಾ ಶೈಲಿಯಲ್ಲಿ, "ಈ ಮೋಕ ನಂದು, ಈ ಮೋಕ ನಂದು' ಎದೆ ತಟ್ಟಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸವಾಲು ಹಾಕಿದ್ದಾರೆ.

ಸೋಮಣ್ಣರನ್ನ ತುಮಕೂರು ಅಭ್ಯರ್ಥಿ ಅನ್ನುವ ಬದಲು 'ಪಾರ್ಲಿಮೆಂಟ್ ಮೆಂಬರ್' ಎಂದ ಸಿಎಂ!

ನಾವು ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಐದು ಜನ ಪಂಚ ಪಾಂಡವರಂತೆ ಗೆದ್ದಿದ್ದೇವೆ. ಈ ಬಾರಿ ನಮ್ಮ ಪಾಂಡವರ ಪರವಾಗಿ ಅರ್ಜುನನ್ನ (ತುಕಾರಾಂ) ಕಣಕ್ಕಿಳಿಸಿದ್ದೇವೆ. ಬಿಜೆಪಿಯ ರಾಮುಲು ಅಂಡ್ ಟೀಂ ಕೌರವರು, ಕೌರವರಿಗೆ ಕೊನೆಗೆ ಸೋಲು ಗ್ಯಾರಂಟಿ. ಈ ಮೋಕದಿಂದ ಒಂದೇ ಒಂದು ವೋಟು ಜಾಸ್ತಿ ಅವರಿಗೆ ಬೀಳಲ್ಲ ಎಂದು ಸಚಿವ, ಈ ಮೋಕ ನಂದು, ಈ ಮೋಕ ನಂದು ಗೆಲ್ಲು ನೋಡೋಣ ಎಂದು ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದಾರೆ.

ನನ್ನ ಉಸಿರು ಇರೋತನಕ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರೋದಿಲ್ಲ: ವಿ ಸೋಮಣ್ಣ

ಪ್ರತೀ ಬಾರಿ ನಾನು ಸಿಎಂ ಆಗ್ತಿನಿ, ಉಪ ಮುಖ್ಯಂತ್ರಿ ಆಗ್ತಿನಿ, ಮಂತ್ರಿ ಆಗ್ತಿನಿ ಎಂದು ಬರೀ ಸುಳ್ಳು ಹೇಳಿದ್ರೆ ಯಾರೂ ನಂಬಲ್ಲ. ಈಗ ನಾನು ಗೆದ್ರೆ ಕೇಂದ್ರ  ಮಂತ್ರಿಯಾಗ್ತೇನೆ ಅಂತಾರೆ. ಹಾಲಿಲ್ಲ, ಸೋಲಿಲ್ಲ, ಕೊಡಕು ಪೇರು ಸೋಮಲಿಂಗ ಅಂದಗಾಯ್ತು (ತೆಲುಗು ಡೈಲಾಗ್) ಎಂದು ಸಚಿವ ನಾಗೇಂದ್ರ ಸಿನಿಮಾ ಡೈಲಾಗ್ ಹೊಡೆದಿದ್ದಾರೆ.

Latest Videos
Follow Us:
Download App:
  • android
  • ios