ಬಳ್ಳಾರಿ ಬಿಜೆಪಿ ಸಮಾವೇಶದಲ್ಲಿ ಜನಾರ್ದನ ರೆಡ್ಡಿಯನ್ನ ಹಾಡಿ ಹೊಗಳಿದ ಶ್ರೀರಾಮುಲು
ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಕಾರಣ. ಯಡಿಯೂರಪ್ಪ ಜೊತೆಗೆ ಸೇರಿ ಮೊದಲ ಸರ್ಕಾರ ರಚನೆ ಮಾಡಿದರು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಶಾಸಕ ಜನಾರ್ದನ ರೆಡ್ಡಿಯವರನ್ನ ಹಾಡಿ ಹೊಗಳಿದರು.
ಬಳ್ಳಾರಿ (ಏ.4): ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಕಾರಣ. ಯಡಿಯೂರಪ್ಪ ಜೊತೆಗೆ ಸೇರಿ ಮೊದಲ ಸರ್ಕಾರ ರಚನೆ ಮಾಡಿದರು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಶಾಸಕ ಜನಾರ್ದನ ರೆಡ್ಡಿಯವರನ್ನ ಹಾಡಿ ಹೊಗಳಿದರು.
ಇಂದು ಬಳ್ಳಾರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ರಾಮುಲು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಆನಂದ ಸಿಂಗ್, ನಾನು ಸೇರಿ ಯಡಿಯೂರಪ್ಪ ಜೊತೆಗೆ ಪಂಚ ಪಾಂಡವರಂತೆ ಕೆಲಸ ಮಾಡಿದ್ದೇವೆ. ಜನಾರ್ದನ ರೆಡ್ಡಿ ಜೊತೆಗೆ ಮೂವತ್ತೈದು ವರ್ಷ ರಾಜಕೀಯ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಮತ್ತು ನಾವು ಒಡೆದು ಬೇರೆಯವರಿಗೆ ಲಾಭ ಮಾಡಿಕೊಟ್ಟಿದ್ದೇವೆ. ಲಕ್ಷ್ಮೀ ಅರುಣಾ ಸೋಮಶೇಖರ್ ರೆಡ್ಡಿ ಸ್ಪರ್ಧೆಯಿಂದ ಬಳ್ಳಾರಿ ಕಾಂಗ್ರೆಸ್ ಗೆಲ್ಲುವಂತಾಯ್ತು ಎಂದು ಸೋಲಿನ ಕಹಿ ಘಟನೆ ನೆನಪಿಸಿಕೊಂಡರು.
'ಈ ಮೋಕ ನಂದು ಗೆದ್ದುಕೋ ನೋಡೋಣ..' ಶ್ರೀರಾಮುಲು ವಿರುದ್ಧ ಸಿನಿಮಾ ಶೈಲಿಯಲ್ಲಿ ಸೆಡ್ಡು ಹೊಡೆದ ಸಚಿವ ನಾಗೇಂದ್ರ!
ಕಾಂಗ್ರೆಸ್ ಆಳ್ವಿಕೆಯಲ್ಲಿ ಟೆರರಿಸ್ಟ್ ಗಳು ವಿಧ್ವಂಸಕ ಕೃತ್ಯ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಬಾರಿ ದಾಳಿ ಮಾಡಿದ್ರು. ಅದೇ ಮೋದಿ ಆಳ್ವಿಕೆಯಲ್ಲಿ ಭಾರತಕ್ಕೆ ಟೆರರಿಸ್ಟ್ ಗಳು ಬರಲು ನಡುಗುತ್ತಾರೆ
ಬಂದ್ರೇ ವಾಪಸ್ ಹೋಗುವ ಗ್ಯಾರಂಟಿ ಇಲ್ಲ. ಇಂದು ಮೈಯಲ್ಲಿ ದೇವರು ಬಂದಹಾಗೆ ಯುವಕರು ಮೋದಿ ಮೋದಿ ಎಂದು ಕುಣಿಯುತ್ತಿದ್ದಾರೆ. ಕಾಂಗ್ರೆಸ್ ಸಚಿವರೊಬ್ಬರು ಹೇಳ್ತಾರೆ ಮೋದಿ ಅಂದವರಿಗೆ ಹೊಡೆಯಿರಿ ಅಂತಾ. ಆದರೆ ರಿಸಲ್ಟ್ ಬಂದಾಗ ಜನರೇ ಅವರಿಗೆ ಹೊಡೆಯುತ್ತಾರೆ ಎಂದು ಹೆಸರತ್ತದೇ ಸಚಿವ ಶಿವರಾಜ ತಂಗಡಗಿಗೆ ಮಾತಿನ ಏಟು ಕೊಟ್ಟರು.