Asianet Suvarna News Asianet Suvarna News

Vidhan Parishat Election| ದಿನಾಂಕ ಘೋಷಣೆಯಾಗುತ್ತಿದ್ದಂತೆ ಶುರುವಾಯ್ತು ಲಾಬಿ..!

*  ಟಿಕೆಟ್‌ಗಾಗಿ ಲಿಂಗಾಯತರ ಸಭೆ
*  ಅತ್ತ ಮುಸ್ಲಿಂ ಸಮುದಾಯದಿಂದಲೂ ಒತ್ತಡ
*  ಇತ್ತ ಪರಿಶಿಷ್ಟ ಜಾತಿಯಿಂದ ನಮಗೆ ಟಿಕೆಟ್‌ ಕೊಡಿ ಎಂಬ ದುಂಬಾಲು
 

Lobby for Congress BJP Ticket in Vidhan Parishat Election grg
Author
Bengaluru, First Published Nov 10, 2021, 10:16 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.10):  ಅವಿಭಜಿತ ಧಾರವಾಡ(Dharwad) ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್‌ಗೆ(Vidhan Parishat) ನಡೆಯಲಿರುವ ಚುನಾವಣೆ ಇದೀಗ ಘೋಷಣೆಯಾಗಿದೆ. ಇದರೊಂದಿಗೆ ಟಿಕೆಟ್‌ಗಾಗಿ ಕಾಂಗ್ರೆಸ್‌ ರಾಜಕೀಯ ಚಟುವಟಿಕೆಯೂ ಬಿರುಸುಗೊಂಡಿವೆ. ಜಾತಿ ಮುಂದೆ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಸಮುದಾಯಗಳಿಗೆ ಟಿಕೆಟ್‌ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದು ಪಕ್ಷದ ಮುಖಂಡರಿಗೆ ದೊಡ್ಡ ಸವಾಲಾಗಿದೆ.

"

ಧಾರವಾಡ, ಹಾವೇರಿ(Haveri) ಹಾಗೂ ಗದಗ(Gadag) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳು (ಗ್ರಾಪಂ, ಪುರಸಭೆ, ಪಪಂ, ನಗರಸಭೆ, ಮಹಾನಗರ ಪಾಲಿಕೆ, ಜಿಪಂ, ತಾಪಂ) ಸದಸ್ಯರು ಪರಿಷತ್‌ಗೆ ಆಯ್ಕೆ ಮಾಡುವ ಸ್ಥಾನವಿದು. ದ್ವಿಸದಸ್ಯ ಸ್ಥಾನದ ಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ಈವರೆಗೂ ಕಾಂಗ್ರೆಸ್‌(Congress) ಹಾಗೂ ಬಿಜೆಪಿ(BJP) ತಲಾ ಒಬ್ಬರನ್ನಷ್ಟೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿವೆ.

Karnataka MLC Election : ಸಿಎಂಗೆ ಈಗ ಪರಿಷತ್‌ ಚುನಾವಣೆ ಸವಾಲ್‌!

ಇದೀಗ ಬಿಜೆಪಿಯ ಪ್ರದೀಪ ಶೆಟ್ಟರ್‌(Pradeep Shettar) ಹಾಗೂ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ(Srinivas Mane) ಇಬ್ಬರು ಪ್ರತಿನಿಧಿಸುತ್ತಿದ್ದರು. ಇದೀಗ ಮಾನೆ ವಿಧಾನಸಭೆಗೆ(Vidhanasabhe) ಪ್ರವೇಶಿಸಿರುವುದರಿಂದ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಲಿಂಗಾಯತ(Lingayat), ಪರಿಶಿಷ್ಟ ಜಾತಿ, ಮುಸ್ಲಿಂ(Muslim) ಹೀಗೆ ಎಲ್ಲ ಸಮುದಾಯಗಳು ತಮ್ಮ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಪೈಪೋಟಿಗೆ ಇಳಿದಿದ್ದಾರೆ.
ಮೂರು ಜಿಲ್ಲೆಗಳ ಲಿಂಗಾಯತ ಸಮುದಾಯದ ಮುಖಂಡರಾದ ಶ್ರೀಶೈಲಪ್ಪ ಬಿದರೂರು, ಆನಂದ ಗಡ್ಡದೇವರ ಮಠ, ಶರಣಪ್ಪ ಕೊಟಗಿ, ಐ.ಎಸ್‌.ಪಾಟೀಲ, ಬ್ಯಾಡಗಿಯ ಎಸ್‌.ಆರ್‌.ಪಾಟೀಲ, ಪ್ರಕಾಶಗೌಡ ಪಾಟೀಲ ಹೀಗೆ ಏಳೆಂಟು ಜನರು ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್‌(Ticket) ಕೊಟ್ಟರೂ ತಮ್ಮ ಅಭ್ಯಂತರವಿಲ್ಲ. ಈ ಸಲ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ನೀಡಿ ಎಂಬ ಬೇಡಿಕೆಯನ್ನುಂಟು ಮುಂದಿಟ್ಟಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಈ ಸಲ ಲಿಂಗಾಯತ ಸಮುದಾಯದವರು ಜಾಸ್ತಿ ಇದ್ದಾರೆ. ಈ ಕಾರಣದಿಂದ ಈ ಸಲ ತಮಗೆ ಟಿಕೆಟ್‌ ನೀಡಬೇಕೆಂಬ ಒತ್ತಾಸೆ ಇವರದ್ದು. ಈ ನಿಟ್ಟಿನಲ್ಲಿ ಈಗಾಗಲೇ ಮೂರು ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಮುಖಂಡರೂ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar), ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಎಐಸಿಸಿ(AICC) ವರಿಷ್ಠರಿಗೂ ಮನವಿ ಸಲ್ಲಿಸುವ ಮೂಲಕ ಲಾಬಿ ನಡೆಸಲು ಮುಂದಾಗಿದ್ದಾರೆ.

ಮುಸ್ಲಿಂ ಸಮುದಾಯದ ಒತ್ತಾಯ:

ಮುಸ್ಲಿಂ ಸಮುದಾಯದವರು ಕೂಡ ಈ ಕ್ಷೇತ್ರದಲ್ಲಿ ಈ ಹಿಂದೆ ನಮ್ಮ ಸಮುದಾಯದವರೇ ಚುನಾಯಿತರಾಗಿದ್ದುಂಟು. ಹೀಗಾಗಿ ತಮಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇಟ್ಟು ಪ್ರಯತ್ನಿಸುತ್ತಿದ್ದಾರೆ. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ವಿಧಾನಪರಿಷತ್‌ ಮಾಜಿ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಲೋಕಸಭೆ ಟಿಕೆಟ್‌ ವಂಚಿತ, ಮಾಜಿ ಸಂಸದ ಐ.ಜಿ.ಸನದಿ ಅವರ ಪುತ್ರ ಶಾಕೀರ ಸನದಿ, ಅಲ್ತಾಫ್‌ ಹಳ್ಳೂರು, ಸುಬಾನಿ ಚುಡಿಗಾರ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಇತ್ತೀಚಿಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಅಲ್ಪಸಂಖ್ಯಾತರಲ್ಲಿದೆ. ಅದನ್ನು ಹೋಗಲಾಡಿಸಬೇಕೆಂದರೆ ಪರಿಷತ್‌ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ದಲಿತರಿಗೇಕಿಲ್ಲ?:

ಈ ಕ್ಷೇತ್ರದಲ್ಲಿ ಈವರೆಗೂ ಒಬ್ಬೇ ಒಬ್ಬ ದಲಿತರು ಪ್ರತಿನಿಧಿಸಿಲ್ಲ. ರಾಜ್ಯದಲ್ಲಿ(Karnataka) ನಡೆಯುವ 25 ಸ್ಥಾನಗಳ ಪೈಕಿ 3 ಕಡೆಯಾದರೂ ದಲಿತರಿಗೆ ಅವಕಾಶ ಮಾಡಿಕೊಡಬೇಕು. ಮೈಸೂರು(Mysuru) ಭಾಗದಲ್ಲಿ ಈಗಾಗಲೇ ಕೊಡಲಾಗುತ್ತಿದೆ. ಅದರಂತೆ ಉತರ ಕರ್ನಾಟಕ(North Karnataka) ಭಾಗದ ಅವಿಭಜಿತ ಜಿಲ್ಲೆಗೆ ದಲಿತರಿಗೆ ಟಿಕೆಟ್‌ ನೀಡಬೇಕು ಎಂದು ಬೇಡಿಕೆ ಇಟ್ಟು ಪರಿಶಿಷ್ಟ ಜಾತಿಗೆ ಸೇರಿರುವ ಎಫ್‌.ಎಚ್‌.ಜಕ್ಕಪ್ಪನವರ, ಮೋಹನ ಹಿರೇಮನಿ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಇವರು ಕೂಡ ದೆಹಲಿ ಮಟ್ಟದಲ್ಲೂ ಲಾಬಿ ನಡೆಸಲು ಮುಂದಾಗಿದ್ದಾರೆ.

Vidhan Parishat Election: ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು

ಹೀಗೆ ಆಯಾ ಸಮುದಾಯದವರು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿರುವುದು ಕೆಪಿಸಿಸಿಗೆ ದೊಡ್ಡ ತಲೆನೋವಾದಂತಾಗಿದೆ. ಯಾರಿಗೆ ಟಿಕೆಟ್‌ ಕೊಟ್ಟು ಹೇಗೆ ಸಮಾಧಾನ ಪಡಿಸಬೇಕು ಎಂಬುದು ತಿಳಿಯದೇ ಕಂಗಾಲಾಗಿರುವುದಂತೂ ಸತ್ಯ. ಈ ಪೈಪೋಟಿಯಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಬಿಜೆಪಿ ಪರಿಸ್ಥಿತಿ ಏನು?

ಇನ್ನೂ ಬಿಜೆಪಿಯಲ್ಲಿ ಹಾಲಿ ಸದಸ್ಯ ಪ್ರದೀಪ ಶೆಟ್ಟರ್‌ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಟಿಕೆಟ್‌ಗೆ ಅರ್ಜಿಯನ್ನೂ ಹಾಕಿದ್ದು, ಇವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಹೈಕಮಾಂಡ್‌ ನಿರ್ಧಾರ ಹೇಳೋಕೆ ಬರಲ್ಲ. ಕುಟುಂಬ ರಾಜಕಾರಣದ(Politics) ಕೊಂಡಿ ಕತ್ತರಿಸಲು ಇವರ ಬದಲಿಗೆ ಮತ್ತೆ ಯಾರಾದರೂ ಹೊಸಮುಖಗಳಿಗೆ ಮಣೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಇನ್ನೂ ಬಿಜೆಪಿ ಎರಡನೆಯ ಸ್ಥಾನಕ್ಕೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ಮಾತು ಕೇಳಿ ಬರುತ್ತಿರುವುದರಿಂದ ಎರಡನೆಯ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪಾಲಾಕ್ಷಗೌಡ ಪಾಟೀಲ, ಲಿಂಗರಾಜ ಪಾಟೀಲ ಹೆಸರು ಮುಂಚೂಣಿಯಲ್ಲಿದೆ. ಆದರೆ ಬಿಜೆಪಿ ಇಬ್ಬರನ್ನು ಕಣಕ್ಕಿಳಿಸುತ್ತದೆಯೋ ಅಥವಾ ಮೊದಲಿನಂತೆ ಒಬ್ಬರನ್ನೇ ಕಣಕ್ಕಿಳಿಸುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ. ಒಟ್ಟಿನಲ್ಲಿ  ಹಾನಗಲ್‌ ಚುನಾವಣೆ(Hanagal Byelection) ಮುಗಿತು ಅನ್ನುವಷ್ಟರಲ್ಲೇ ಪರಿಷತ್‌ ಚುನಾವಣೆ ಘೋಷಣೆಯಾಗಿ ಮತ್ತೆ ರಾಜಕೀಯ ಚಟುವಟಿಕೆಗಳೂ ಗರಿಗೆದರಿವೆ.
 

Follow Us:
Download App:
  • android
  • ios