ಸಿದ್ದರಾಮಯ್ಯ ವರುಣಾ ಬಿಟ್ಟು, ಪಾಕಿಸ್ತಾನ, ಅಪಘಾನಿಸ್ಥಾನಕ್ಕೆ ಹೋಗಿ ಸ್ಪರ್ಧಿಸಲಿ: ಆರ್. ಅಶೋಕ್

ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರವಲ್ಲ ಪಾಕಿಸ್ತಾನ, ಅಫ್ಘಾನಿಸ್ತಾನ,  ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡಬೇಕು. ಬಹುಶಃ ಆ ದೇಶಗಳಲ್ಲಿ ಅವರು ಗೆಲ್ಲಬಹುದು.

Let Siddaramaiah leave Varuna and go to Pakistan or Afghanistan to contest R Ashok sat

ಬಳ್ಳಾರಿ (ಮಾ.18): ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರವಲ್ಲ ಪಾಕಿಸ್ತಾನ, ಅಫ್ಘಾನಿಸ್ತಾನ,  ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡಬೇಕು. ಬಹುಶಃ ಆ ದೇಶಗಳಲ್ಲಿ ಅವರು ಗೆಲ್ಲಬಹುದು. ಯಾಕಂದ್ರೇ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೆತ್ರದಲ್ಲೂ ಗೆಲ್ಲಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್‌ ಟಾಂಗ್‌ ನಿಡಿದ್ದಾರೆ.

ಈ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಸೂಚನೆ ಮೇರೆ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೋಗುತ್ತಾರೆ ಎಂಬುದರ ಬಗ್ಗೆ ಸಚಿವ ಆಶೋಕ ವ್ಯಂಗ್ಯವಾಡಿದ್ದಾರೆ. ರಾಜ್ಯದ 224 ಕ್ಷೆತ್ರೆದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡೋಕೆ ಚಾನ್ಸೇ ಇಲ್ಲ. ಒಂದು ವೇಳೆ ಅವರು ಸ್ಪರ್ಧೆ ಮಾಡಿದರೂ ಅವರು ಗೆಲ್ಲುವುದಿಲ್ಲ. ಯಾಕಂದ್ರೇ ಎಲ್ಲಿಗೆ ಹೋದರೂ ಅವರು ಸೋಲುತ್ತಾರೆ. ಸಿದ್ದರಾಮಯ್ಯ ಈಗಾಗಲೇ ವರುಣಾ, ಚಾಮುಂಡೇಶ್ವರಿ ಸೋತಿದ್ದಾರೆ. ಈಗ ಬಾದಮಿ ಬಿಟ್ಟು ಓಡಿ ಬಂದಿದ್ದಾರೆ ಎಂದು ಹೇಳಿದರು.

Big Breaking: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಕ್ಯಾನ್ಸಲ್‌?

ಡಿ.ಕೆ.ಶಿಯೇ ಸಿದ್ದರಾಯ್ಯನನ್ನು ಸೋಲಿಸುತ್ತಾರೆ: ಈ ಬಾರಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಮದಾಗಿದ್ದರು. ಅದರೆ, ಕೋಲಾರದಲ್ಲೂ ಗೆಲ್ಲುವುದು ಕಷ್ಟವಿದೆ. ಹೀಗಾಗಿ ಇದೀಗ ಮತ್ತೆ ವರುಣಾ ಕಡೆ ಮುಖ ಮಾಡ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶಕ್ಕೆ ನೋಡ್ಕೋಳೋದು ಒಳ್ಳೆಯದು. ಇಲ್ಲಿ ಅವರನ್ನ ಎಲ್ಲಿಯೂ ಸ್ಪರ್ಧೆ ಮಾಡೋಕೆ ಬಿಡಲ್ಲ. ಯಾಕೆಂದರೆ ಅವರ ಪಕ್ಷದವರೆ ಅವರಿಗೆ ವಿಲನ್ ಗಳಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸೋಲುಸ್ತಾರೆ ಎಂದು ಹೇಳಿದರು.

ವಿ. ಸೋಮಣ್ಣ ಪಕ್ಷ ಬಿಡಲ್ಲ: ರಾಜ್ಯದಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರ ಸಿಟ್ಟು ಶೇ.100 ಶಮನ ಆಗಿದೆ. ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ. ಇನ್ನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೊಪಾಲಕೃಷ್ಣ ಕೂಡ ಪಕ್ಷ ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಶತಃಸಿದ್ಧ ಎಂದು ಹೇಳಿದರು. 

ಕಾಂಗ್ರೆಸ್‌ನಲ್ಲಿ ಮೂರನೇ ಲೀಡರ್‌ ಇಲ್ಲ:  ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಜನ ಜಾಗೃತಿ ಮಾಡುತ್ತಿದ್ದೇವೆ. 224 ಕ್ಷೇತ್ರಗಳನ್ನು ರೀಚ್ ಆಗಿರೋದು  ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ.  ಆದರೆ, ಕಾಂಗ್ರೆಸ್‌ಗೆ ಕೇವಲ ಇಬ್ಬರು ಮಾತ್ರ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಿಟ್ಟರೇ ಮೂರನೇ ಲೀಡರ್ ಇಲ್ಲ. ಅವರು 224 ಕ್ಷೇತ್ರಕ್ಕೆ ಹೋಗಿಲ್ಲ, ಟಿಕೆಟ್ ಹಂಚಿಕೆಯಲ್ಲಿ ಬ್ಯೂಸಿ ಇದ್ದಾರೆ. ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕೆಂದು ಕನಸು ಕಾಣ್ತಿದ್ದಾರೆ. 50ವರ್ಷದ ಇವರ ಆಳ್ವಿಕೆ  ನೋಡಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಟೀಕೆ ಮಾಡಿದರು. 

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ: ನವದೆಹಲಿ : ನಿಮಗೆ ಕೋಲಾರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಿಮ್ಮ ಪ್ರತಿ ಒಂದು ನಿಮಿಷವೂ ಪಕ್ಷಕ್ಕೆ ಅಗತ್ಯವಾಗಿದೆ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಅಂತ ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಅಂತ ತಿಳಿದು ಬಂದಿದೆ. ಪಕ್ಷದ ನಾಯಕರ ಜೊತೆಗೆ ಹೋಗಿ ಚರ್ಚೆ ಮಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು ಖಚಿತವಾಗಿದೆ. ರಾಹುಲ್ ಗಾಂಧಿ ಅವರ ಸಲಹೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios