ದೇಶದ ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ತೊರೆದು ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರದಾಡುತ್ತಿದೆ. ಬುಧವಾರ ಲಿಯಾಂಡರ್ ಕೋಲ್ಕತಾ ಹೋಟೆಲ್‌ವೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿದ್ದರು.
ಕೋಲ್ಕತಾ: ದೇಶದ ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ತೊರೆದು ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರದಾಡುತ್ತಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ
ಬುಧವಾರ ಲಿಯಾಂಡರ್ ಕೋಲ್ಕತಾ ಹೋಟೆಲ್‌ವೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಬಂಗಾಳ ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಉಪಸ್ಥಿತರಿದ್ದರು. ಈ ಬೆನ್ನಲ್ಲೇ ಲಿಯಾಂಡರ್ ಬಿಜೆಪಿ ಸೇರಲಿದ್ದು, ಬಂಗಾಳ ಚುನಾವಣೆಯಲ್ಲಿ ಸಕ್ರಿಯರಾಗಬಹುದು ಅಂತಲೂ ವರದಿಯಾಗುತ್ತಿದೆ.
ಪೇಸ್‌ಗೆ ರಾಜಕೀಯ ಹೊಸತೇನಲ್ಲ
ಪೇಸ್‌ಗೆ ರಾಜಕೀಯ ಹೊಸತೇನಲ್ಲ. ಅವರು 2021ರ ಅಕ್ಟೋಬರ್‌ನಲ್ಲಿ ಗೋವಾದಲ್ಲಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಟಿಎಂಸಿ ಸೇರಿದ್ದರು.ಆಗ ದೀದಿ ಲಿಯಾಂಡರ್‌ರನ್ನು ಕಿರಿಯ ಸಹೋದರ ಎಂದು ಕರೆದಿದ್ದರು. ಹೀಗಿದ್ದರೂ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿತ್ತು ಎಂಬ ಮಾತು ಕೇಳಿ ಬಂದಿತ್ತು.


