ಕಾನೂನು, ಸುವ್ಯವಸ್ಥೆ ಹದಗೆಡಲು ಯಾವ ಕಾರಣಕ್ಕೂ ಬಿಡಲ್ಲ: ಸಿದ್ದರಾಮಯ್ಯ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ವಿಪಕ್ಷಗಳು ಆರೋಪಿಸಿದಂತೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಿಲ್ಲ. ಎಲ್ಲ ಪ್ರಕರಣಗಳನ್ನೂ ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ, ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

Law and order will not be allowed to deteriorate under any circumstances Says CM Siddaramaiah gvd

ವಿಧಾನಸಭೆ (ಜು.12): ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ವಿಪಕ್ಷಗಳು ಆರೋಪಿಸಿದಂತೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಿಲ್ಲ. ಎಲ್ಲ ಪ್ರಕರಣಗಳನ್ನೂ ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ, ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಶೂನ್ಯ ವೇಳೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಬೆಳಗಾವಿಯ ಹಿರೇಗೋಡಿ ನಂದಿ ಪರ್ವತ ಜೈನ ಮುನಿ ಅವರ ಕೊಲೆ ಅಮಾನುಷ ಕೃತ್ಯ. ಕೊಲೆ ಮಾಡಿದವರಿಗೆ ಶಿಕ್ಷೆ ಕೊಡಿಸುವುದೇ ನಮ್ಮ ಗುರಿ. 

ಪ್ರಕರಣದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಅಪರಾಧ ಕೃತ್ಯಗಳನ್ನು ತಡೆಯಲೆಂದೇ ಪೊಲೀಸರನ್ನು ನೇಮಿಸಲಾಗಿದೆ. ಯಾವುದೇ ಪ್ರಕರಣವಾದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತೇವೆ. ಅಪರಾಧಿಗಳ ರಕ್ಷಣೆಗೆ ಸರ್ಕಾರ ಯಾವತ್ತೂ ನಿಲ್ಲುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆ ನೀಡುವ ಕೆಲಸ ಮಾಡೇ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.

ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ: ಕೊನೆಗೂ ಪ್ರತಿಭಟನೆ ಹಿಂಪಡೆದ ಬಿಜೆಪಿ ಸದಸ್ಯರು

ಅದಕ್ಕೂ ಮುನ್ನ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಳಗಾವಿ ಜೈನ ಮುನಿ ಹತ್ಯೆ, ಟಿ.ನರಸೀಪುರ ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆ, ಕಲಬುರಗಿಯಲ್ಲಿ ಮರಳು ಮಾಫಿಯಾದಿಂದ ಪೊಲೀಸ್‌ ಪೇದೆಯೊಬ್ಬರ ಕೊಲೆ, ಸಕಲೇಶಪುರದಲ್ಲಿ ಎಮ್ಮೆಗೆ ಕಂಟ್ರಿ ರಿವಾಲ್ವರ್‌ನಿಂದ ಹೊಡೆದು ಕೊಲೆ ಮಾಡಿದ್ದರ ವಿಚಾರವಾಗಿ ಗಲಾಟೆ ಹೀಗೆ ಸರಣಿ ಗಲಾಟೆ, ಹತ್ಯೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಆದರೂ, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿಲ್ಲ. ಅನೇಕ ಪ್ರಕರಣಗಳ ತನಿಖೆಯನ್ನು ಅನುಮಾನ ಬರುವಂತೆ ಮಾಡುತ್ತಿದೆ. ರಾಜ್ಯದಲ್ಲಿನ ಅಪರಾಧ ಕೃತ್ಯಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸುತ್ತಿದೆ ಎಂದು ಆರೋಪಿಸಿದರು.

ಯಾರೇ ಆರೋಪಿಗಳಿದ್ದರೂ ತನಿಖೆಯಿಂದ ಗೊತ್ತಾಗುತ್ತದೆ: ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಇನ್ನೂ ಯಾರೇ ಆರೋಪಿಗಳು ಇದ್ದರೂ ಪೊಲೀಸರ ತನಿಖೆಯಿಂದ ಗೊತ್ತಾಗುತ್ತದೆ ಎಂದು ಸಚಿವ ಡಿ.ಸುಧಾಕರ ಹೇಳಿದರು. ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಆಚಾರ್ಯ 108 ಕಾಮಕುಮಾರ ಮಹಾರಾಜರ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿ ಭಕ್ತರಿಗೆ ಸಾಂತ್ವನ ಹೇಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯೊಬ್ಬರನ್ನು ಹೀಗೆ ಭೀಕರವಾಗಿ ಹತ್ಯೆ ಮಾಡಿದ್ದು ಆಘಾತವನ್ನುಂಟು ಮಾಡಿದೆ. ಕೇವಲ 15 ವರ್ಷಗಳ ಅವಧಿಯಲ್ಲಿ ಆಶ್ರಮವನ್ನು ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆಂದರೆ ಅವರಲ್ಲಿ ಸಮಾಜದ ಬಗ್ಗೆ ಎಷ್ಟೊಂದು ಕಳಕಳಿ ಇತ್ತು ಎಂಬುವುದು ಗೊತ್ತಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಇ ಪದವೀಧರರಾಗಿದ್ದ ಕಾಮಕುಮಾರ ಮಹಾರಾಜರು ಇಲ್ಲೊಂದು ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು ಇಲ್ಲವೇ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ಟ್ರಸ್ಟ್‌ ಅಧ್ಯಕ್ಷ ಭೀಮಗೊಂಡ ಉಗಾರೆ ಅವರು ಸಚಿವರಲ್ಲಿ ಕೇಳಿಕೊಂಡಾಗ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರ ಹಾಗೂ ಸ್ಥಳೀಯರ ಸಭೆಯನ್ನು ಕರೆದು ಸರ್ಕಾರದಿಂದ ಏನೆಲ್ಲ ಮಾಡಬಹುದು ಎಂಬ ಕುರಿತು ಚರ್ಚೆ ಮಾಡಿ ಅನುಷ್ಠಾನ ತರಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

ತಾಲೂಕಿನ ಹಿರೇಕೋಡಿ ಆಶ್ರಮದಲ್ಲಿ ಜೈನಮುನಿಗಳು ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುವುದನ್ನು ವೀಕ್ಷಿಸಿದರು. ಅತೀ ಕಡಿಮೆ ಅವಧಿಯಲ್ಲಿ ಆಶ್ರಮವನ್ನು ಅಭಿವೃದ್ಧಿ ಮಾಡಿದ್ದು, ಈ ಆಶ್ರಮ ಕೇವಲ ಜೈನ ಧರ್ಮೀಯರಿಗೆ ಮಾತ್ರವಲ್ಲ ಇನ್ನುಳಿದ ಧರ್ಮೀಯರಿಗೂ ಆರಾಧ್ಯ ಕೇಂದ್ರವಾಗಿದೆ ಎಂಬುವುದನ್ನು ಭಕ್ತರು ಹಾಗೂ ಟ್ರಸ್ಟಿಗಳಿಂದ ಮಾಹಿತಿ ಪಡೆದುಕೊಂಡರು.

Latest Videos
Follow Us:
Download App:
  • android
  • ios