ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ: ಕೊನೆಗೂ ಪ್ರತಿಭಟನೆ ಹಿಂಪಡೆದ ಬಿಜೆಪಿ ಸದಸ್ಯರು

ಟಿ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಪರಿಷತ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 

Venugopal murder case BJP members finally withdraw their protest gvd

ವಿಧಾನಪರಿಷತ್ (ಜು.12): ಟಿ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಪರಿಷತ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ಪರಿಷತ್‌ನಲ್ಲಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಈಗ ನಮ್ಮ ಪೋಲಿಸರು ತನಿಖೆ ನಡೆಸ್ತಾರೆ. 

ತನಿಖೆಯ ಬಳಿಕ ನಿಮಗೆ ಸಮಾಧಾನ ಆಗದಿದ್ದರೆ, ಮುಂದೆ ಚರ್ಚೆ ಮಾಡೊಣ. ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಅವಶ್ಯಕತೆ ಇಲ್ಲ. ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸುಮ್ಮನೆ ಭಾಷಣ ಮಾಡೊದು ಬೇಡ ಎಂದರು. ಸಚಿವ ಕೃಷ್ಣ ಭೈರೇಗೌಡ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀನಿವಾಸ ಪೂಜಾರಿ, ಇದು ದಪ್ಪ ಚರ್ಮದ ಸರ್ಕಾರ ನಾವು ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಹೀಗಾಗಿ ಪ್ರತಿಭಟನೆ ವಾಪಸ್ ಪಡೆದು ಕಲಾಪದಲ್ಲಿ ಪಾಲ್ಗೊಳ್ಳುತ್ತೇವೆ ಎಂದಾಗ ಮಧ್ಯೆಪ್ರವೇಶಿಸಿದ ಕೃಷ್ಣ ಬೈರೆಗೌಡ ಅವರ ಭಾವನಿೆಗಳಿಗೆ ಸ್ಪಂದಿಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ. 

ವನ್ಯಜೀವಿ ಮಾನವ ಸಂಘರ್ಷ: ಕಂಟ್ರೋಲ್‌ ರೂಂ ಸ್ಥಾಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ತಪ್ಪಿತಸ್ಥರನ್ನ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡೋಣ. ತನಿಖೆಯಿಂದ ಎಲ್ಲಾ ಸತ್ಯ ಹೊರಬಲಿದೆ. ಈಗ ಪ್ರತಿಭಟನೆಯಿಂದ ಸದನ ಹಾಳು ಮಾಡೋದು ಬೇಡ ಎಂದು ತಿಳಿಸಿದರು.  ಇನ್ನು ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲ್ಲ ಎಂದು ಗೃಹ ಸಚಿವರು ಹೇಳಿರುವ ಬಗ್ಗೆ ಸಚಿವ ಬೋಸರಾಜು ಹೇಳಿದರು. 

ಬಿಜೆಪಿಯಿಂದ 2 ಸತ್ಯಶೋಧನೆ ತಂಡ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನ ಮುನಿ ಹತ್ಯೆ ಮತ್ತು ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳ ಪರಿಶೀಲನೆಗಾಗಿ ಬಿಜೆಪಿ ನಾಯಕರ ಎರಡು ತಂಡಗಳು ಮಂಗಳವಾರ ಭೇಟಿ ನೀಡಲಿವೆ. ಜೈನ ಮುನಿ ಹತ್ಯೆಗೆ ಪಕ್ಷ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದ ತಂಡ ರಚಿಸಲಾಗಿದೆ. 

ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

ಇದರಲ್ಲಿ ಪಕ್ಷದ ಮುಖಂಡರಾದ ಅಶ್ವತ್ಥನಾರಾಯಣ್‌, ಮಹೇಶ ಟೆಂಗಿನಕಾಯಿ, ಅಭಯ್‌ ಪಾಟೀಲ್‌, ಈರಣ್ಣ ಕಡಾಡಿ, ಮಂಗಳಾ ಸುರೇಶ್‌ ಅಂಗಡಿ, ಮಹಾಂತೇಶ್‌ ಕವಟಗಿಮಠ, ಅನಿಲ್‌ ಬೆನಕೆ, ಡಾ.ರಾಜೇಶ್‌ ನೇರ್ಲಿ, ಸಂಜಯ್‌ ಪಾಟೀಲ್‌ ಹಾಗೂ ಎಂ.ಬಿ.ಜಿರಲಿ ಅವರಿದ್ದಾರೆ. ಹಿಂದೂ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ತಂಡ ರಚಿಸಲಾಗಿದೆ. ಮುಖಂಡರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪ್ರತಾಪ್‌ ಸಿಂಹ, ಶ್ರೀವತ್ಸ, ಎನ್‌.ಮಹೇಶ್‌, ಪ್ರೀತಂ ಗೌಡ, ಅಪ್ಪಣ್ಣ, ಪ್ರೊ.ಮಲ್ಲಿಕಾರ್ಜುನ, ವೈ.ವಿ.ರವಿಶಂಕರ್‌ ಮತ್ತು ಮಂಗಳಾ ಸೋಮಶೇಖರ್‌ ಅವರು ತಂಡದಲ್ಲಿದ್ದಾರೆ.

Latest Videos
Follow Us:
Download App:
  • android
  • ios