ಹಾಸನ: ಪುತ್ರ ಸ್ವರೂಪ್ ಪರ ಮತ ಯಾಚಿಸಿ ಕಣ್ಣೀರಿಟ್ಟ ಲಲಿತಮ್ಮ ಪ್ರಕಾಶ್!
ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತು ಹಣದಿಂದ ಚುನಾವಣೆ ಮಾಡಲಿಲ್ಲ. ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ತಾಯಿ ಲಲಿತಮ್ಮ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಹಾಸನ (ಮೇ.08): ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತು ಹಣದಿಂದ ಚುನಾವಣೆ ಮಾಡಲಿಲ್ಲ. ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ತಾಯಿ ಲಲಿತಮ್ಮ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ. ನನ್ನ ಪತಿ ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ. ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಸ್ವರೂಪ್ ನಡೆಯುತ್ತಿದ್ದಾನೆ. ಕಳೆದ ಭಾರಿ ಚುನಾವಣೆಯಲ್ಲಿ ಪರಾಭವಗೊಂಡರು. ಈಗ ಚುನಾವಣೆ ಮಾಡಲು ಹಣ ಮಾಡಬೇಕು ಎಂದರು.
ನನ್ನ ಮಗನಿಗೆ ಹೇಳಿದೆ ನಿನ್ನ ಬಳಿ ಹಣವಿಲ್ಲ ಎಂದು, ಆದರೂ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದಾನೆ. ಹಾಸನದಲ್ಲಿ ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ಹಾಸನ ಜನತೆ ನನ್ನ ಮಗನಿಗೆ ಆಶೀರ್ವಾದ ಮಾಡಿ . ನನ್ನ ಮಗ ಗೆದ್ದರೆ ನನ್ನ ಪತಿ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪತಿ ಸಾವು ನೆನೆದು ಸ್ವರೂಪ್ ತಾಯಿ ಲಲಿತಮ್ಮ ಕಣ್ಣೀರಿಟ್ಟರು. ಇದೇ ವೇಳೇ ಪುತ್ರ ಸ್ವರೂಪ್‌ಗೆ ಮತ ನೀಡುವಂತೆ ಕೈಮುಗಿದು ಮನವಿ ಮಾಡಿಕೊಂಡರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಎಚ್ಡಿಕೆ, ರೇವಣ್ಣ ಪ್ರತಿಷ್ಠೆ ಕ್ಷೇತ್ರದಲ್ಲಿ ಕೈ, ಕಮಲ ಪೈಪೋಟಿ: ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ
ಪ್ರೀತಂಗೌಡಗೆ ಟಕ್ಕರ್ ಕೊಡಲು ಸ್ವರೂಪ್ ಸಜ್ಜು: ಕಳೆದ 5 ವರ್ಷಗಳಿಂದ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ಈ ಬಾರಿ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆನ್ನುವ ಹಠ ಜೆಡಿಎಸ್‌ನದು. ಇದು ದೇವೇಗೌಡರ ಕುಟುಂಬದ ಆಂತರಿಕ ಕಲಹಕ್ಕೂ ಕಾರಣವಾಯಿತು. ಭವಾನಿ ರೇವಣ್ಣನವರು ಇಲ್ಲಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಘೋಷಿಸಿದರು.
ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಣಿಸಲು ಸಾಮ್ರಾಟ್ ಅಶೋಕಾಸ್ತ್ರ ಪ್ರಯೋಗ
ಆದರೆ, ಮಾಜಿ ಸಿಎಂ ಕುಮಾರಸ್ವಾಮಿಯವರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವ ಹಠಕ್ಕೆ ಬಿದ್ದರು. ತೀವ್ರ ಹಣಾಹಣಿ ನಂತರ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್ ನೀಡಿದೆ. ಬಳಿಕ, ಎಲ್ಲಾ ಅಸಮಾಧಾನ ಬದಿಗಿಟ್ಟು, ಸ್ವರೂಪ್ ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಎಚ್.ಡಿ.ರೇವಣ್ಣ ಕುಟುಂಬದವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಪ್ರೀತಂ ಗೌಡರು ಕ್ಷೇತ್ರದ ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಬನವಾಸಿ ರಂಗಸ್ವಾಮಿ, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆಯೇ ನೇರ ಫೈಟ್.