Asianet Suvarna News Asianet Suvarna News

ಮಿಣಿ ಮಿಣಿ ಪೌಡರ್‌ಗೆ ಸಿಡಿಮಿಡಿ: ಕೋರ್ಟ್ ಮೆಟ್ಟಿಲೇರಿದ ದೇವೇಗೌಡರ ಕುಡಿ!

'ನಿಖಿಲ್ ಎಲ್ಲಿದ್ದೀಯಪ್ಪಾ' ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಟ್ರೋಲ್ ವ್ಯಂಗ್ಯಕ್ಕೂ ಕಾರಣವಾದಂತೆ ಮಂಗಳೂರಿನಲ್ಲಿ ಆದಿತ್ಯರಾವ್ ಇಟ್ಟಿದ್ದು ಮಿಣಿ ಮಿಣಿ ಪೌಡರ್ ಎಂಬ ಹೇಳಿಕೆಯೂ ಅಷ್ಟೇ ಟ್ರೋಲ್ ಮತ್ತು ವ್ಯಂಗ್ಯಕ್ಕೆ ಕಾರಣವಾಗಿದೆ. ಇದೀಗ ಇದೇ ವಿಚಾರವಾಗಿ ಕುಮಾರಸ್ವಾಮಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

Kumaraswamy files application in high court mini mini powder Troll In social Media
Author
Bengaluru, First Published Feb 1, 2020, 6:27 PM IST

ಬೆಂಗಳೂರು, (ಫೆ.01): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸದಾ ಒಂದಿಲ್ಲೊಂದು ಟ್ರೋಲ್‌ಗೆ ಆಹಾರವಾಗುತ್ತಿದ್ದಾರೆ. ಲೋಕಸಭಾ ಚುನಾವಣೆ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ' ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಆಗಿತ್ತು. 

ಇದರ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ ಬಾಯಲ್ಲಿ ಬಂದ 'ಮಿಣಿ ಮಿಣಿ ಪೌಡರ್' ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾರದ್ದೇ ವಾಟ್ಸಪ್ ನೋಡಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ಇತ್ತೀಚೆಗೆ ಮಿಣಿ ಮಿಣಿಯದ್ದೇ ಮಾತು.

ಪಾಕಿ ಬಿಜೆಪಿಗರಿಗೆ ಗ್ರಾಮೀಣ ಸೊಗಡು ಗೊತ್ತಿಲ್ಲಣ್ಣ: ‘ಮಿಣಿ ಮಿಣಿ’ ಅರ್ಥ ಹೇಳಿದ ಕುಮಾರಣ್ಣ!

ತಮ್ಮ ಮಿಣಿ ಮಿಣಿ ಹೇಳಿಕೆಗೆ ವ್ಯಕ್ತವಾಗುತ್ತಿರುವ ವ್ಯಂಗ್ಯಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದು, ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಮಿಣಿ‌ ಮಿಣಿ ಪೌಡರ್ ಉಲ್ಲೇಖಿಸದಂತೆ  ಕುಮಾರಸ್ವಾಮಿ ಅವರು ಇಂದು (ಶನಿವಾರ) ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

‘ಮಿಣಿ ಮಿಣಿ ಪೌಡರ್‌’ ವೈರಲ್‌ ಮಾಡಿದ್ದಕ್ಕೆ ಕುಮಾರಸ್ವಾಮಿ ಗರಂ!

ಮಿಣಿ ಮಿಣಿ ಪೌಡರ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ನಿರ್ಬಂಧ ಹೇರುವಂತೆ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಅರ್ಜಿಯನ್ನು ಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿದ್ದು,  ಕುಮಾರಸ್ವಾಮಿ ಪರ ವಕೀಲ ಇಸ್ಮಾಯಿಲ್ ಜಬೀ ಉಲ್ಲಾ ಎನ್ನುವರು ವಾದ ಮಂಡಿಸಲಿದ್ದಾರೆ.

'ಮಿಣಿ ಮಿಣಿ ಕುಮಾರಸ್ವಾಮಿ ಸ್ವಯಂ ಪ್ರಸಿದ್ಧಿ'

ಮಿಣಿ-ಮಿಣಿ ಟ್ರೋಲ್ ಆಗಿದ್ಯಾಕೆ?
ಮೊನ್ನೆ ಅಷ್ಟೇ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿತ್ತು. ಇದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು. ಇದಕ್ಕೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ ಅದ್ಯಾವದೋ ಬಾಂಬ್ ಅಂತೆ. ಅದನ್ನು ಎಲ್ಲೆಲ್ಲೋ ತೆಗೆದುಕೊಂಡು ಹೋಗಿ ವೈರ್ ಎಳೆದು ರಿಮೋಟ್‌ನಿಂದ ಬ್ಲಾಸ್ಟ್ ಮಾಡಿದ್ದಾರೆ. ಅದರಲ್ಲಿ  ಪಟಾಕಿಗಳಲ್ಲಿ ಬಳಸುವ ಮಿಣಿ ಮಿಣಿ ಪೌಡರ್ ಇತ್ತು ಎಂದು ಹೇಳಿಕೆ ಕೊಟ್ಟಿದ್ದರು.

ಇದು ಭಾರೀ ಚರ್ಚೆಗೆ ಗ್ರಾಸವಾಗಿದಲ್ಲದೇ ಮಿಣಿ-ಮಿಣಿ ಪೌಡರ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಆಗಲು ಶುರುವಾಯ್ತು.

Follow Us:
Download App:
  • android
  • ios