ಬೆಂಗಳೂರು (ಮೇ.09): ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ  ನಡೆದ ಕೋರ್ ಕಮಿಟಿ ಸಭೆಯಲ್ಲಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ನೇರವಾಗಿ  ಸಿಎಂ ಎದುರೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಶನಿವಾರ ಬಿಜೆಪಿ ಮುಖಂಡರ ವರ್ಚ್ಯುಯಲ್ ಸಭೆ ನಡೆದಿದ್ದು ಈ ವೇಳೆ ಈಶ್ವರಪ್ಪ ಸರ್ಕಾರ ಬಗ್ಗೆ ಅಸಮಾಧಾನ ಹೊರಹಾಕಿದರು. ಪಕ್ಷದ ಸಂಘಟನೆ ಉತ್ತಮವಾಗಿದೆ. ಆದರೆ  ಅದಕ್ಕೆ ತಕ್ಕಂತೆ ಸರ್ಕಾರದ ಕಾರ್ಯವೈಖರಿ ಅಷ್ಟು ಸರಿ ದಾರಿಯಲ್ಲಿ ಸಾಗ್ತಾ ಇಲ್ಲ ಎಂದು ಹೇಳಿದರು. 

ನಾಳೆಯಿಂದ ಸೆಮಿ ಲಾಕ್ಡೌನ್‌, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ .

ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಹೆಚ್ಚಾಗುತ್ತಲೇ ಇದೆ. ಸಾವುಗಳು ಏರುತ್ತಿದೆ. ಆದರೆ ರಾಜ್ಯ ಸರ್ಕಾರದಿಂದ ಕೋವಿಡ್  ನಿರ್ವಹಣೆ ಸರಿಯಾದ ದಿಕ್ಕಿನಿಂದ ಹೋಗ್ತಾ ಇಲ್ಲ ಎಂದು ಸರ್ಕಾರದ ಕೋವಿಡ್ ಕಾರ್ಯವೈಖರಿ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದರು.

ವರ್ಚ್ಯುವಲ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಈಶ್ವರಪ್ಪ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

'ಶಿವಮೊಗ್ಗದಲ್ಲಿ ಎಲ್ಲವೂ ಸುವ್ಯವಸ್ಥಿತ : ರೋಗಿಗಳಿಗೆ ಯಾವ ಕೊರತೆಯೂ ಇಲ್ಲಿಲ್ಲ' .. 

 ಜವಬ್ದಾರಿ ಹಂಚಿದ ಸಿಎಂ : ಇನ್ನು ಬಿಜೆಪಿ ಮುಖಂಡರ ಸಭೆ ವೇಳೆಯೇ ಸಿಎಂ ಯಡಿ ಯೂರಪ್ಪ  ರೆಮಿಡಿಸಿವರ್, ಆಕ್ಸಿಜನ್ ವ್ಯವಸ್ಥೆ ಮಾಡುವಂತೆ  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ,ಸದಾನಂದ ಗೌಡಗೆ  ಜವಬ್ದಾರಿ ಹಂಚಿಕೆ ಮಾಡಿದರು.

ಸೂಕ್ತ ರೀತಿಯಲ್ಲಿ ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಸೂಚನೆ ನೀಡಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಎಲ್ಲಾ ಮೆಡಿಕಲ್ ಫೆಸಿಲಿಟಿ ನೀವೆ ನೋಡ್ಕೊಬೇಕು ಎಂದು ಸಭೆ ವೇಳೆ ಕಟ್ಟುನಿಟ್ಟಾಗಿ ತಿಳಿಸಿದರು. 
 
ಉಪಚುನಾವಣೆ  ಫಲಿತಾಂಶ ಚರ್ಚೆ : ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ ಸೋಲು ಗೆಲುವು ವಿಚಾರವಾಗಿಯೂ ಚರ್ಚೆ ಮಾಡಿದ ಮುಖಂಡರು ಮಸ್ಕಿ ಸೋಲಿಗೆ ಪ್ರತಾಪ್ ಗೌಡ ಪಾಟೀಲ್ ನಡೆ ಕಾರಣ. ಅವರ ಬಗ್ಗೆ ಕ್ಷೇತ್ರದ ಜನರಿಗೆ ಒಳ್ಳೆ ಅಭಿಪ್ರಾಯವಿಲ್ಲವೆಂದು ಹೇಳಿದರು.  

ಕ್ಷೇತ್ರದಲ್ಲಿ ಸಂಘಟನೆ ಉತ್ತಮವಾಗಿದ್ದರೂ ಅಭ್ಯರ್ಥಿಯ ಮೇಲೆ ಕ್ಷೇತ್ರದ ಜನಕ್ಕೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ.  ಬಿಜೆಪಿ ಕಾರ್ಯಕರ್ತರ ಜೊತೆ ಉತ್ತಮ ಒಡನಾಟ ಬೆಳೆಸಿಕೊಳ್ಳುವ ಪ್ರಯತ್ನ ಮಾಡಲೇ ಅವರಿಂದಾಗಿಲ್ಲ. ಅಭ್ಯರ್ಥಿಗೆ ಅಲ್ಲಿನ ಸೋಲಿನ ಕಾರಣ ಎಂದು ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು.  

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸದಾನಂದ ಗೌಡ,ಪ್ರಹ್ಲಾದ ಜೋಶಿ, ಅರುಣ್ ಕುಮಾರ್, ಸಿ.ಟಿ ರವಿ, ಡಿಸಿಎಂ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಆರ್ ಆಶೋಕ್, ಶ್ರೀರಾಮುಲು, ನಿರ್ಮಲ್ ಕುಮಾರ್ ಸುರಾನಾ ಭಾಗಿಯಾಗಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona