Asianet Suvarna News Asianet Suvarna News

'ಶಿವಮೊಗ್ಗದಲ್ಲಿ ಎಲ್ಲವೂ ಸುವ್ಯವಸ್ಥಿತ : ರೋಗಿಗಳಿಗೆ ಯಾವ ಕೊರತೆಯೂ ಇಲ್ಲಿಲ್ಲ'

ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕೊರತೆ ಇಲ್ಲ. ಇಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟರ್ ಎಲ್ಲಾ ವ್ಯವಸ್ಥೆಯೂ ವ್ಯವಸ್ಥಿತವಾಗಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮಾಹಿತಿ ನೀಡಿದ್ದಾರೆ. ಬೇರೆ ಜಿಲ್ಲೆಗಳಿಂದಲೂ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರು ತಿಳಿಸಿದರು. 

No Shortages Of Covid Bed Oxygen in Shivamogga District Says KS Eshwarappa snr
Author
Bengaluru, First Published May 7, 2021, 4:24 PM IST

ಶಿವಮೊಗ್ಗ (ಮೇ.07):  ಶಿವಮೊಗ್ಗದಲ್ಲಿ ಕೋವಿಡ್ ಬೆಡ್, ಆಕ್ಸಿಜನ್, ವೆಂಟಿಲೇಟರ್ ಯಾವುದೇ ಸಮಸ್ಯೆಯೂ ಇಲ್ಲ ಎಂದು ಸಚಿವ ಕೆ.ಎಸ್  ಈಶ್ವರಪ್ಪ ಸ್ಪಷ್ಟಡಿಸಿದರು. 

ಶಿವಮೊಗ್ಗದಲ್ಲಿಂದು ಕೋವಿಡ್ ಬೆಡ್ ಇಲ್ಲ ಎಂದು ಬೋರ್ಡ್ ಹಾಕಿದ್ದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ನಿನ್ನೆ ಬೆಡ್ ಇಲ್ಲ ಎಂದು ಬೋರ್ಡ್ ಹಾಕಿದ್ದು ಹೌದು.  ಮೊನ್ನೆ 772 ಇದ್ದ ಸೋಂಕಿತರ ಸಂಖ್ಯೆ ನಿನ್ನೆ 444 ಕ್ಕೆ ಇಳಿದಿದೆ.  ಬೋರ್ಡ್ ಹಾಕಿದ್ದರೂ ಕೂಡ ನಿನ್ನೆಯಿಂದ ನೂರು ಜನ ಸೋಂಕಿತರಿಗೆ ಬೆಡ್ ಗಳನ್ನು ನೀಡಿದ್ದೇವೆ ಎಂದರು.

ಡಿಕೆಶಿ, ಜಮೀರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ : ಈಶ್ವರಪ್ಪ ಗರಂ .

ಶಿವಮೊಗ್ಗಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಸೋಂಕಿತರು ಬರುತ್ತಿದ್ದಾರೆ. ಹೀಗಾಗಿ ಇಲ್ಲಿನ ಬೆಡ್ ಗಳ ರಷ್ ಆಗುತ್ತಿದೆ. ಶಿವಮೊಗ್ಗದಲ್ಲಿ ಬೆಡ್, ಆಕ್ಸಿಜನ್ ಗಳ ಹಾಹಾಕಾರ ಇಲ್ಲ.  ನಿನ್ನೆ ಅನೇಕರು ಡಿಸ್ಚಾರ್ಜ್ ಆಗಿದ್ದರಿಂದಾಗಿ ಬೆಡ್ ಗಳ ಕೊರತೆ ಪೂರೈಸಲಾಗಿದೆ.  ಅದೇರೀತಿ ಆಕ್ಸಿಜನ್. ವೆಂಟಿಲೇಟರ್ ಇಲ್ಲ ಎಂದು ಕೆಲ ಮಾದ್ಯಮಗಳಲ್ಲಿ ಬಂದಿದೆ. ಆದರೆ, ಶಿವಮೊಗ್ಗದಲ್ಲಿ ಎಲ್ಲವೂ ಇದೆ. ಯಾವುದೇ ಕೊರತೆ ಇಲ್ಲ. ಮ್ಯಾನೇಜ್ ಮಾಡಿ ಬೆಡ್ ಗಳನ್ನು ನೀಡುತ್ತಿದ್ದೇವೆ ಎಂದು ಸಚಿವ ಈಶ್ವರಪ್ಪ ಹೇಳಿದರು. 

ಲಾಕ್‌ಡೌನ್ ಬಗ್ಗೆ ಶೀಘ್ರವೇ ಸಿಎಂ ಆದೇಶ ನೀಡ್ತಾರೆ : ಈಶ್ವರಪ್ಪ .

ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವಿರಕ್ಕೂ ಹೆಚ್ಚಿ ಆಕ್ಸಿಜನ್ ಬೆಡ್  ವ್ಯವಸ್ಥೆ ಇದೆ. ನಮ್ಮ ಜಿಲ್ಲೆಯವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.  ಬೇರೆ ಜಿಲ್ಲೆಯವರು ಆಯಾ ಜಿಲ್ಲೆಗಳಲ್ಲಿಯೇ, ಚಿಕಿತ್ಸೆ ಪಡೆದುಕೊಳ್ಳಲಿ. ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವುದರಿಂದ ಕೊರತೆ ಎದುರಾಗಬಹುದೆಂದು ಎಚ್ಚರಿಕೆ ವಹಿಸಲಾಗಿದೆ ಎಂದು ಈಶ್ವರಪ್ಪ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios