ಕೆಆರ್‌ಪಿಪಿ ಚಿಹ್ನೆ- ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ಧನರೆಡ್ಡಿ: ಎಲ್ಲರಿಗೂ 2 ಬಿಎಚ್‌ಕೆ ಮನೆ ಸೌಲಭ್ಯ
ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ಧನ ರೆಡ್ಡಿ ಇಂದು ಬೆಂಗಳೂರಿನಲ್ಲಿ ಪಕ್ಷದ ಅಧಿಕೃತ 'ಫುಟ್ಬಾಲ್' ಚಿಹ್ನೆ ಹಾಗೂ 'ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿದರು.
ಬೆಂಗಳೂರು (ಮಾ.27): ಕಳೆದ 3 ತಿಂಗಳ ಹಿಂದೆ ಸ್ಥಾಪಿಸಲಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಅಧ್ಯಕ್ಷ ಜನಾರ್ಧನ ರೆಡ್ಡಿ ಇಂದು ಬೆಂಗಳೂರಿನಲ್ಲಿ ಪಕ್ಷದ ಅಧಿಕೃತ 'ಫುಟ್ಬಾಲ್' ಚಿಹ್ನೆ ಹಾಗೂ 'ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿದರು.
ಈ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಿಹನೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, 2022ರ ಡಿಸೆಂಬರ್ 25 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಲಾಗಿತ್ತು. ಪಕ್ಷಕ್ಕೆ ಎಲ್ಲಾ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾತ್ರಿ 2 ಗಂಟೆಯಾದರೂ ನಮಗೆ ಗ್ರಾಮೀಣ ಪ್ರದೇಶಗಳಲ್ಲಿ ಜನ ಕಾಯುತ್ತಿದ್ದಾರೆ. 12 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಘೋಷಣೆ ಆಗಿದೆ. ಕೆಲವೇ ದಿನಗಳಲ್ಲಿ ಇನ್ನೂ 19 ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಲಿದೆ. ಇಂದು ಪಕ್ಷದ ಚಿಹ್ನೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ನನ್ನ ಬಳಿ 2 ಹೆಲಿಕಾಪ್ಟರ್ ಇವೆ, 13 ವರ್ಷದ ಬಳಿಕ ಕಾಪ್ಟರ್ ಶಪಥದ ರೋಚಕ ಕತೆ ಬಿಚ್ಚಿಟ್ಟ ಜನಾರ್ಧನ ರೆಡ್ಡಿ!
ಎಲ್ಲರನ್ನೂ ಫುಟ್‌ಬಾಲ್‌ನಂತೆ ಆಡಿಸುತ್ತೇನೆ: ನಾನು ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ ಅನುಭವ ಇದೆ. ಅದೇ ಅನುಭವದ ಮೇಲೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡ್ತಾ ಇದ್ದೇನೆ. ನಮ್ಮ ಪಕ್ಷಕ್ಕೆ ನಿರೀಕ್ಷೆ ಮೀರಿ ಬೆಂಬಲ ಸಿಗ್ತಾ ಇದೆ. ಜನರ ಪ್ರೀತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ರಾಜಕೀಯದಲ್ಲಿ ಸ್ನೇಹಿತರು, ಶತ್ರುಗಳು ಎಲ್ಲರೂ ಸೇರಿಕೊಂಡು ನನ್ನನ್ನ ಫುಟ್ ಬಾಲ್ ತರ ಆಡಿದ್ದಾರೆ. ಈಗ ನನಗೆ ಫುಟ್‌ಬಾಲ್ ಸಿಕ್ಕಿದ್ದು, ಎಲ್ಲರನ್ನು ಸೇರಿಸಿ ಫುಟ್ ಬಾಲ್ ಆಡಬಹುದು ಎಂದು ಈ ಚಿಹ್ನೆಯನ್ನ ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಯಾರಿಗೆ ಯಾವ ರೀತಿ ಕನಸು ಬೀಳುತ್ತದೆಯೋ ಗೊತ್ತಿಲ್ಲ. ನಾನು ಯಾರ ಜೊತೆಗೆ ಮಾತನಾಡಿಲ್ಲ. ಆ ಸಮಯ ಈಗ ಮೀರಿ ಹೋಗಿದೆ. ಹಿರಿಯರಿಗೆಲ್ಲ ಅಂದೇ ಮಾತನಾಡಿ ಆಗಿದೆ. ಯಾವುದೇ ರೀತಿಯ ಮಾತುಕತೆ ಈಗ ನಡೆದಿಲ್ಲ ಎಂದು ಮಾಹಿತಿ ನೀಡಿದರು.
ಸರ್ವರಿಗೂ ಸಮ ಬಾಳು - ಸರ್ವರಿಗೂ ಸಮ ಪಾಲು ಘೋಷಣೆಯಡಿ ಪ್ರಣಾಳಿಕೆ ಬಿಡುಗಡೆ:
- ಪ್ರತಿ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ
- ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
- 5 ಎಕರೆಗಿಂತ ಕಡಿಮೆ ಇದ್ರೆ ರೈತರಿಗೆ ಬಂಡವಾಳದ 15 ಸಾವಿರ ರೂ ನರೆವು
- ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು
- ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
- ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
- ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
- ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1000 ವೇತನ ಹೆಚ್ಚಳ
- ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ
ಗಣಿಧಣಿಗೆ ಹೊಸ ಟೆನ್ಷನ್: 'ಸ್ನೇಹ ಹಸ್ತ' ಚಿಹ್ನೆ ನೀಡಲು ಚು.ಆಯೋಗ ನಕಾರ
ಸ್ನೇಹಹಸ್ತ ಚಿಹ್ನೆ ತಿರಸ್ಕರಿಸಿದ್ದ ಚುನಾವಣಾ ಆಯೋಗ: ಗಣಿಧಣಿಗೆ ಜನಾರ್ದನ ರೆಡ್ಡಿಗೆ ಹೊಸ ಪಕ್ಷ ಚಿಹ್ನೆ ಟೆನ್ಷನ್ ಶುರು ಆಗಿದ್ದು, ಸ್ನೇಹ ಹಸ್ತದ ಚಿಹ್ನೆ ಪಡೆಯಲು ಜನಾರ್ದನ ರೆಡ್ಡಿ ಹೋರಾಟ ಮಾಡುತ್ತಿದ್ದಾರೆ. ಪರಸ್ಪರ ಎರಡು ಕೈ ಜೋಡಿಸಿರುವ ಚಿಹ್ನೆ ಪಡೆಯಲು ರೆಡ್ಡಿ ಕಸರತ್ತು ಮಾಡುತ್ತಿದ್ದು, ಬೇಡಿಕೆಗೆ ಚುನಾವಣಾ ಆಯೋಗ ಹಿಂದೇಟು ಹಾಕಿದೆ. ಇನ್ನು 1 ತಿಂಗಳಿಂದ 'ಕೈ ಜೋಡಿಸುವ' (ಸ್ನೇಹಹಸ್ತ) ಚಿಹ್ನೆಗಾಗಿ ರೆಡ್ಡಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಬೇರೆ ಬೇರೆ ಚಿಹ್ನೆಗಳನ್ನು ಆಯೋಗದ ಅಧಿಕಾರಿಗಳು ಸೂಚಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ 25 ಹೊಸ ಚಿಹ್ನೆಗಳನ್ನು ಸೂಚಿಸಿತ್ತು. ಅದರಲ್ಲಿ ಫುಟ್‌ಬಾಲ್ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.