ನನ್ನ ಬಳಿ 2 ಹೆಲಿಕಾಪ್ಟರ್ ಇವೆ, 13 ವರ್ಷದ ಬಳಿಕ ಕಾಪ್ಟರ್ ಶಪಥದ ರೋಚಕ ಕತೆ ಬಿಚ್ಚಿಟ್ಟ ಜನಾರ್ಧನ ರೆಡ್ಡಿ!

ಜನಾರ್ಧನ ರೆಡ್ಡಿ ಬಳಿ ಒಂದಲ್ಲ ಎರಡು ಹೆಲಿಕಾಪ್ಟರ್ ಇದೆ. ಇದನ್ನು ಸ್ವತಃ ರೆಡ್ಡಿ ಬಹಿರಂಗ ಪಡಿಸಿದ್ದಾರೆ. ಸದ್ಯ ಗೆಳೆಯನ ಹೆಲಿಕಾಪ್ಟರ್ ಬಳಸಿ ಪ್ರಯಾಣ ಮಾಡುತ್ತಿದ್ದೇನೆ. 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣದ ರೋಚಕ ಕತೆ ಬಿಚ್ಚಿಟ್ಟ ಜನಾರ್ಧನ ರೆಡ್ಡಿ!
 

KRPP leader janardhan reddy reveals helicopter journey after 13 years ahead of Karnataka Election ckm

ಬೆಂಗಳೂರು(ಮಾ.26): ಜನಾರ್ಧನ ರೆಡ್ಡಿ..ರಾಜಕೀಯ, ವ್ಯವಾಹರ ಎರಡೂ ಕ್ಷೇತ್ರದಲ್ಲಿ ಬಲಿಷ್ಠ ಹೆಸರು. ಬಿಜೆಪಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಜನಾರ್ಧನ ರೆಡ್ಡಿ ಬಂಧನ, ಬಿಡುಗಡೆ ಬಳಿಕ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಲ್ಯಾಣ ರಾಜ್ಯ  ಪ್ರಗತಿ ಪಕ್ಷ ಸ್ಥಾಪಿಸಿರು ಜನಾರ್ಧನ ರೆಡ್ಡಿ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದಾರೆ. ಇದರ ನಡುವೆ ಜನಾರ್ಧನ ರೆಡ್ಡಿ ಹೆಲಿಕಾಪ್ಟರ್ ಭಾರಿ ಸದ್ದು ಮಾಡುತ್ತಿದೆ. ಮಾ.25 ರಂದು ರೆಡ್ಡಿ ಸಿಗಂಧೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದರು. ಇದರಲ್ಲೇನು ವಿಶೇಷ ಅಂತೀರಾ? ರೆಡ್ಡಿ ಬರೋಬ್ಬರಿ 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ ಮಾಡಿದ್ದರು. ರೆಡ್ಡಿ ಬಳಿ ಒಂದಲ್ಲ ಎರಡು ಹೆಲಿಕಾಪ್ಟರ್ ಇವೆ. ಈ ಕುರಿತು ಸ್ವತಃ ಜನಾರ್ಧನ ರೆಡ್ಡಿ ಕಾಪ್ಟರ್ ಕತೆ ಬಿಚ್ಚಿಟ್ಟಿದ್ದಾರೆ.

ಜನಾರ್ಧನ ರೆಡ್ಡಿ 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿದೆ. ಹೀಗಾಗಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನಾರ್ಧನ ರೆಡ್ಡಿ, ನನ್ನ ಬಳಿ ಈಗಲೂ 2 ಹೆಲಿಕಾಪ್ಟರ್ ಇವೆ. ಸದ್ಯ ನಾನು ಅದನ್ನು ಬಳಸುತ್ತಿಲ್ಲ. ಕಾಪ್ಟರ್ ಸಂಸ್ಥೆಗೆ ನಿರ್ವಹಣೆಗಾಗಿ ನೀಡಿದ್ದೇನೆ. ಸದ್ಯ ನಾನು ಬಳಸುತ್ತಿರುವುದು ಗೆಳೆಯನ ಹೆಲಿಕಾಪ್ಟರ್. ನಾನು ಆರಂಭಿಕ ದಿನದಲ್ಲಿ ಹೆಲಿಕಾಪ್ಟರ್ ಬಳಸುವಾಗ ದೊಡ್ಡ ವಿಚಾರವಾಗಿತ್ತು. ಆದರೆ ಈಗ ಹೆಲಿಕಾಪ್ಟರ್ ಮಕ್ಕಳ ಆಟಿಕೆಯಾಗಿದೆ ಎಂದು ಕೊಪ್ಪಳದ ಗಂಗಾವತಿಯಲ್ಲಿ ಹೇಳಿದ್ದಾರೆ. ನಾನು ಹೊಸದಾಗಿ ಯಾವುದೇ ಹೆಲಿಕಾಪ್ಟರ್ ಖರೀದಿಸಿಲ್ಲ ಎಂದಿದ್ದಾರೆ.

13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ, ರುಕ್ಮಿಣಿ ನೆನಪಿಸಿಕೊಂಡ ಜನಾರ್ಧನ ರೆಡ್ಡಿ!

ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವವರೆಗೂ ಹೆಲಿಕಾಪ್ಟರ್ ಏರಬಾರದು ಎಂದು ಶಪಥ ಮಾಡಿದ್ದೆ. ಆದರೆ 30 ಕ್ಷೇತ್ರಗಳನ್ನು ಓಡಾಡಲು, ಜನರಿಗೆ ಹೆಚ್ಚಿನ ಸಮಯ ನೀಡಲು ಹೆಲಿಕಾಪ್ಟರ್ ಅಗತ್ಯವಾಗಿದೆ. ಹೀಗಾಗಿ ಗೆಳೆಯನ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡುತ್ತಿದ್ದೇನೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. 

ಹಿಂದೆ ಜನರಿಗೆ ಹೆಚ್ಚು ಸಮಯ ನೀಡಲು ಹೆಲಿಕಾಪ್ಟರ್ ಬಳಸಿದ್ದೇನೆ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಲು 12 ಗಂಟೆ ಸಮಯ ಬೇಕು. ಬಹುತೇಕ ಸಮಯ ಪ್ರಯಾಣದಲ್ಲಿ ಕಳೆದು ಹೋಗುತ್ತಿತ್ತು. ಜನರ ಭೇಟಿಯಾಗಲು, ಅವರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹೆಲಿಕಾಪ್ಟರ್ ಬಳಸುತ್ತಿದೆ. ಇದೀಗ ರಾಜ್ಯಾದ್ಯಂತ 30 ಕ್ಷೇತ್ರಗಳನ್ನು ಭೇಟಿಯಾಗಲು ಅನಿವಾರ್ಯವಾಗಿ ಹೆಲಿಕಾಪ್ಟರ್ ಬಳಸುತ್ತಿದ್ದೇನೆ ಎಂದಿದ್ದಾರೆ.

ಕೆಲ ರಾಜಕೀಯ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ನನಗೆ ಅಧಿಕಾರ ಸಿಕ್ಕಲೆ ಹೆಲಿಕಾಪ್ಟರ್ ಅಗತ್ಯವಾಗಿ ಬೇಕಾಗುತ್ತದೆ. ಗಂಗಾವತಿ ಜನರಿಗೆ ಹೆಚ್ಚಿನ ಸಮಯ ನೀಡಲು ಹೆಲಿಕಾಪ್ಟರ್ ಅತ್ಯವಶ್ಯಕ ಎಂದು ರೆಡ್ಡಿ ಹೇಳಿದ್ದಾರೆ.  

ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

13 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಬಂಧನವಾಗಿತ್ತು. ಈ ವೇಳೆ ರೆಡ್ಡಿ ಹೆಲಿಕಾಪ್ಟರ್, ಐಷಾರಾಮಿ ಕಾರು, ಚುನಾವಣಾ ಪ್ರಚಾರದ ಐಷಾರಾಮಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಜನಾರ್ಧನ ರೆಡ್ಡಿ ಶಪಥ ಮಾಡಿದ್ದರು. ಮತ್ತೆ ಅಧಿಕಾರಕ್ಕೆ ಏರುವವರೆಗೆ ಹೆಲಿಕಾಪ್ಟರ್ ಬಳಸುವುದಿಲ್ಲ ಎಂದು ಶಪಥ ಮಾಡಿದ್ದರು. ಇದೀಗ ರೆಡ್ಡಿ ತಮ್ಮ ಸಾಮ್ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ.

Latest Videos
Follow Us:
Download App:
  • android
  • ios