ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?: ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

* ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋಗ್ತೇವೆ 
* ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅಂತ ಯತ್ನಾಳ ನಿನ್ನೆಯಷ್ಟೇ ಹೇಳಿದ್ದಾರೆ: ಜಾರಕಿಹೊಳಿ 
*  ರಮೇಶ್ ಎಲ್ಲಿ ಹೋದರೂ ಅಂತ ನಾವೇನೂ ಹೇಳೋದು?
 

KPCC Working President Satish Jarkiholi Talks Over Next CM of Karnataka grg

ಬೆಳಗಾವಿ(ಜು.01):  ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮೊದಲೇ ಗೊಂದಲ ಇತ್ತು. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಆದ ಗೊಂದಲ ಅಲ್ಲ‌. ಗೊಂದಲ ಮಾಡಿದ್ದು ರಾಷ್ಟ್ರ ನಾಯಕರಿಂದ ಹೊರತು ರಾಜ್ಯ‌ ನಾಯಕರಿಂದ ಅಲ್ಲ. ಈ ಮೊದಲೇ ಸಮಸ್ಯೆ ಇತ್ತು ಇನ್ನೂ ಕೂಡ ಅದನ್ನ ಪರಿಹಾರ ಮಾಡಲು ಆಗಿಲ್ಲ. ಅಧ್ಯಕ್ಷರು ಸಂಧಾನ ಮಾಡಲು ಪ್ರಯತ್ನ ಮಾಡಿರಬಹುದು. ಅವರ ಗುಂಪು ಇವರ ಗುಂಪು ಅಂತ ಹೇಳಲು ಆಗಲ್ಲ. ಅವರ ಗೆಲವು ಇವರ ಸೋಲು ಅಂತಾ ಹೇಳುವ ಪ್ರಶ್ನೆಯೇ ಬರೋದಿಲ್ಲ. ಪಕ್ಷ ಬಂದಾಗ ನಾವೆಲ್ಲಾ ಒಂದೇ ಯಾವ ಗುಂಪುಗಾರಿಕೇನೂ ನಡೆಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ರಾಜ್ಯ ಕಾಂಗ್ರೆಸ್‌ನಲ್ಲಿ ಜಿಲ್ಲಾ ಪದಾಧಿಕಾರಿಗಳ ನೇಮಕ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಅಧ್ಯಕ್ಷರು, ಸಿಎಲ್‌ಪಿ ನಾಯಕರು ಇಬ್ಬರು ಸೇರಿ ಲಿಸ್ಟ್ ಕೊಡ್ತಾರೆ. ಹೈಕಮಾಂಡ್‌ಗೆ ಜಂಟಿಯಾಗಿ ಲಿಸ್ಟ್ ಕೊಡುತ್ತಾರೆ. ಯಾವುದೇ ಗುಂಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕುರ್ಚಿಗಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಮಧ್ಯೆ ಬಿಗ್‌ ಫೈಟ್‌..!

ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಹುದ್ದೆಗೆ ನಡೆದ ಫೈಟ್ 

ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಹುದ್ದೆಗೆ ನಡೆದಿರುವ ಫೈಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ, ಹೊಸದಾಗಿ ಆಯ್ಕೆ ಮಾಡುವಾಗ ಸ್ವಾಭಾವಿಕವಾಗಿ ಸಮಸ್ಯೆ ಉದ್ಭವ ಆಗುತ್ತದೆ. ಸಿದ್ದರಾಮಯ್ಯ ಆಗಲಿ ಡಿಕೆಶಿ ಅವರಾಗಲಿ ಇಂತವರನ್ನೇ ಪದಾಧಿಕಾರಿ ಮಾಡಿ ಅಂತ ಹೇಳಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಆಯ್ಕೆ ಮಾಡಿ ಅಂತ ಹೇಳಿದ್ದಾರೆ. ಎರಡು ಅವಧಿಗೆ ಆದವರನ್ನ ಬದಲಾವಣೆ ಮಾಡುತ್ತಿದ್ದೇವೆ. ಅಧ್ಯಕ್ಷರು ಹೇಳಿದ್ರೂ ಅಂತ ಪದಾಧಿಕಾರಿ ಆಯ್ಕೆ ಮಾಡಲು ಆಗಲ್ಲ. ಸಿಎಂ ಯಾರಾಗ್ತಾರೆ ಎಂಬ ವಿಚಾರ ಯಾಕೆ ಬಂತೂ ಗೊತ್ತಿಲ್ಲ ಅದರ ಬಗ್ಗೆ ನಮಗೆ ಇಂಟ್ರಸ್ಟ್ ಇಲ್ಲ. ಈಗ ಚರ್ಚೆ ಮಾಡುವುದು ಅನಾವಶ್ಯಕ, ಚುನಾವಣೆ ಬಂದಾಗ ನೋಡೋಣ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ. ನಂತರ ಹೈಕಮಾಂಡ್, ಶಾಸಕರು ಸಿಎಂ ಯಾರು ಅಂತಾ ತೀರ್ಮಾನ ಮಾಡ್ತಾರೆ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಅಭ್ಯರ್ಥಿ ಅನ್ನೋ ರೀತಿ ಏನಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. 

ಬಿಜೆಪಿಯವರ ತಮ್ಮ ಸಮಸ್ಯೆಗಳನ್ನ ಮೊದಲು ಬಗೆಹರಿಸಿಕೊಳ್ಳಲಿ. ಅಧಿಕಾರದಲ್ಲಿದ್ದಾಗ ಜಗಳ ಆಡುತ್ತಿದ್ದು, ಅದರಿಂದ ಜನರ ಮೇಲೆ‌ ಪರಿಣಾಮ ಬೀರುತ್ತಿದೆ. ನಾವು ಅಧಿಕಾರದಿಂದ ಹೊರಗಿದ್ದೇವೆ ಜನರ ಮೇಲೆ ಪರಿಣಾಮ ಬೀರಲ್ಲ. ಸ್ವಲ್ಪ ಮಟ್ಟಿಗೆ ಪಕ್ಷದ ಮೇಲೆ ಪರಿಣಾಮ ಬೀರಬಹುದು‌ ಅಷ್ಟೇ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ‌

ರಾಜ್ಯ ಕಾಂಗ್ರೆಸ್‌ನಲ್ಲಿ ನೂತನ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ನೇಮಕ ವಿಚಾರದ ಬಗ್ಗೆ ಮಾತನಾಡಿದ ಅವರು, ತಮ್ಮ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾಗೆ ಪಕ್ಷದಲ್ಲಿ ಸ್ಥಾನಮಾನ ನಾವು ಕೊಡಲು ಬರುವುದಿಲ್ಲ. ಅದನ್ನ ಹೈಕಮಾಂಡ್‌ದವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಶಿಫಾರಸ್ಸು ಮಾಡುವ ಅವಶ್ಯಕತೆ ಇಲ್ಲ, ಅವರಿಗೆ ಇನ್ನೂ ಸಮಯ ಇದೆ. ಕೆಲಸ ಮಾಡಲಿ ಸದ್ಯ ಹುದ್ದೆಗಳನ್ನ ಕೊಡುವ ಅವಶ್ಯಕತೆ ಇಲ್ಲ. ಪ್ರಾಥಮಿಕ ಸದಸ್ಯ ಸ್ಥಾನ ಪಡೆದು ಈಗಷ್ಟೇ ಯೂತ್ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಇನ್ನೂ ಎರಡ್ಮೂರು ವರ್ಷದ ನಂತರ ಅವರಿಗೆ ಹುದ್ದೆ ಬಗ್ಗೆ ಚರ್ಚೆಯಾಗಲಿದೆ. ಮಕ್ಕಳಿಗೆ ಸ್ಥಾನ ಮಾನದ ಕುರಿತು ಇನ್ನೂ ಎರಡ್ಮೂರು ವರ್ಷ ಬೇಕು ಅಂತ ಸತೀಶ್ ಜಾರಕಿಹೊಳಿ‌ ತಿಳಿಸಿದ್ದಾರೆ. 

ರಾಜ್ಯ ರಾಜಕಾರಣದ ಮಹಾಸ್ಫೋಟಕ ಸುದ್ದಿ: ಸಾಹುಕಾರ್‌ ಬೇಡಿಕೆಗೆ ಅಸ್ತು ಎಂದಿದ್ಯಾ ಹೈಕಮಾಂಡ್‌?

ಸವದಿಗೆ ತಿರುಗೇಟು ನೀಡಿದ ಜಾರಕಿಹೊಳಿ‌

ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟೋ ಮುಂಚೆ ಕುಲಾಯಿ ಹೊಲಿಸುತ್ತಿದ್ದಾರೆ ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅಂತ  ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿನ್ನೆಯಷ್ಟೇ ಹೇಳಿದ್ದಾರೆ. ಸವದಿಯವರು ಮೊದಲು ಅದನ್ನ ಬಗೆ ಹರಿಸಿಕೊಳ್ಳಲಿ ಎಂದು ಹೇಳಿವ ಮೂಲಕ ಸವದಿಗೆ ಜಾರಕಿಹೊಳಿ‌ ತಿರುಗೇಟು ನೀಡಿದ್ದಾರೆ. 

ಶಾಸಕ‌ ರಮೇಶ್ ಜಾರಕಿಹೊಳಿ‌ ದೆಹಲಿ, ಮುಂಬೈ ಓಡಾಡ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ ಅವರು, ರಮೇಶ್ ಎಲ್ಲಿ ಹೋದರೂ ಅಂತ ನಾವೇನೂ ಹೇಳೋದು?. ಯಾಕೆ ಹೀಗೆ ಮಾಡ್ತಿದೀರಿ ಅಂತಾ ನೀವೇ ಅವರನ್ನ ಕೇಳಬೇಕು. ವಿಶೇಷವಾಗಿ ರಮೇಶ್ ಜಾರಕಿಹೊಳಿ‌ ಬಗ್ಗೆ ನಾವೇನೂ ಹೇಳೋಕೆ ಆಗಲ್ಲ. ರಮೇಶ್ ಏನೂ ಮಾಡ್ತಿದ್ದಾರೆ ಅಂತ ನಮಗೆ ಗೊತ್ತೂ ಇಲ್ಲ ಎಂದು ಹೇಳಿದ್ದಾರೆ. 

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನಿ ಅಂತಾ ರಮೇಶ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ನಾವೇನೂ ಹೇಳಲು ಆಗವುದಿಲ್ಲ. ಅದು ಅವರ ವೈಯಕ್ತಿಕ ಹಾಗೂ ಪಕ್ಷದ ವಿಚಾರವಾಗಿದೆ. ಅವರ ಮುಖಂಡರು ಇದ್ದಾರೆ, ಪಕ್ಷ ಇದೆ ಅದನ್ನ ಅವರು ನೋಡ್ಕೊಳ್ತಾರೆ ನಾವೇನೂ ಮಾಡೋದು ಅಂತ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios