ರಾಜ್ಯ ವಿಧಾನಸಭೆಗೆ ಚುನಾವಣೆ ಮುಗಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿಯವರು ಗೋಕಾಕ ಪಟ್ಟಣದ ಹೊರ ವಲಯದ ಮಾರ್ಕಂಡೇಯ ನದಿ ಪಕ್ಕದಲ್ಲಿರುವ ಯೋಗಿ ಕೊಳ್ಳದ ಬಳಿ ಉಪಹಾರ ಸವಿದು ರಿಲ್ಯಾಕ್ಸ್ ಮೂಡ್‍ನಲ್ಲಿ ಸಮಯ ಕಳೆದರು. 

‌ಬೆಳಗಾವಿ (ಮೇ.11): ರಾಜ್ಯ ವಿಧಾನಸಭೆಗೆ ಚುನಾವಣೆ ಮುಗಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿಯವರು ಗೋಕಾಕ ಪಟ್ಟಣದ ಹೊರ ವಲಯದ ಮಾರ್ಕಂಡೇಯ ನದಿ ಪಕ್ಕದಲ್ಲಿರುವ ಯೋಗಿ ಕೊಳ್ಳದ ಬಳಿ ಉಪಹಾರ ಸವಿದು ರಿಲ್ಯಾಕ್ಸ್ ಮೂಡ್‍ನಲ್ಲಿ ಸಮಯ ಕಳೆದರು. ಸದಾ ಸರಳತೆಗೆ ಹೆಸರುವಾಸಿಯಾಗಿರುವ ಸತೀಶ್‌ ಜಾರಕಿಹೊಳಿ ಅವರನ್ನು ಯೋಗಿ ಕೊಳ್ಳದ ಬಳಿ ನೋಡಿದ ಯುವಕರು ಖುಷಿ ವ್ಯಕ್ತಪಡಿಸಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.

ಸುದೀಪ್‌ ಮೂರು ತಾಸಿನ ನಾಯಕ: ಚಿತ್ರನಟ ಸುದೀಪ್‌ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಸಿದ್ದ ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಟೀಕಿಸಿದ್ದಾರೆ. ನಟ ಸುದೀಪ್‌ ಮೂರು ತಾಸಿನ ನಾಯಕರು ಮಾತ್ರ ಎಂದು ಸತೀಶ್‌ ಜಾರಕಿ ಹೊಳಿ ವ್ಯಂಗ್ಯ ಮಾಡಿದ್ದಾರೆ. ನೆಹರು ಪಾರ್ಕ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಂ.ಗಣೇಶ್‌ಪ್ರಸಾದ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ದುಡ್ಡುಕೊಟ್ಟು ಟಿಕೆಟ್‌ ತಗೊಂಡು ಸುದೀಪ್‌ ಅವರನ್ನು ನೋಡ್ತಿದ್ರೀ ಆದರೀಗ ಪುಕ್ಕಟೆಯಾಗಿ ಬಂದಿದ್ರು ಎಂದರು. ಜನರ ಜೊತೆ ನಿರಂತರ ಸಂಪರ್ಕ ಹಾಗೂ ಸೇವೆಯನ್ನು ಮಳೆ, ಗಾಳಿ, ಚಳಿ ಎನ್ನದೆ ಮಾಡುತ್ತಿದ್ದೇವೆ. 

ಮೀಸಲಾತಿ ಹಂಚಿಕೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ನಟ ಬಂದು ಕಣ್ಣೀರು ಹಾಕಿದ್ರೆ ಜನರಿಗೆ ಪರಿಹಾರ ಸಿಗಲ್ಲ ಎಂದರು. ಮಹದೇವಪ್ರಸಾದ್‌ ಹಾಗೂ ಗೀತಾಮಹದೇವಪ್ರಸಾದ್‌ ಗೆಲ್ಲಿಸಿದ್ರಿ. ಶಾಸಕ, ಸಚಿವರನ್ನಾಗಿ ಮಾಡಿದ್ರಿ. ಈಗ ಗಣೇಶ್‌ಪ್ರಸಾದ್‌ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಬರಬೇಕು, ಗಣೇಶ್‌ಪ್ರಸಾದ್‌ ಆಯ್ಕೆಯಾಗಬೇಕು. ಆ ಕೆಲಸವನ್ನು ಕಾರ್ಯಕರ್ತರು ಮಾಡುವ ಮೂಲಕ ಕಾಂಗ್ರೆಸ್‌ಗೆ ಶಕ್ತಿ ತುಂಬಿ ಎಂದರು.

ಬಿಜೆಪಿಯವರದು ಬರೀ ಭರವಸೆಗಳ ಬಂಡಲ್‌ ಪಕ್ಷ: ಜನರ ಮತ ಪಡೆಯಲು ಬಿಜೆಪಿ ಬಂಡಲ್‌ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದನ್ನು ಜಾರಿ ಮಾಡಲು ಅವರಿಗೆ ಇಚ್ಛಾಶಕ್ತಿಯೂ ಇಲ್ಲ, ಜಾರಿ ಮಾಡಲು ಅವರಿಗೆ ಆಗೋದು ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆ ಈಗಲೇ ಜಾರಿ ಮಾಡಿ ಚುನಾವಣೆಗೆ ಹೋಗಬಹುದಾಗಿತ್ತು. ಆದರೆ, ಬಿಜೆಪಿಯವರದು ಬರಿ ಭರವಸೆಗಳ ಬಂಡಲ್‌ ಪಕ್ಷ. 4 ವರ್ಷದಲ್ಲಿ 10 ಲಕ್ಷ ಮನೆ ಕಟ್ಟಿಕೊಡುತ್ತವೆ ಎಂದು ಬಿಜೆಪಿಯವರು ಹೇಳಿದರು. 

ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಸಚಿವ ಸುಧಾಕರ್‌

ಇನ್ನೂವರೆಗೆ ಯಾವುದೇ ಮನೆ ಕಟ್ಟಿಲ್ಲ. ಮನೆ ಕಟ್ಟುವುದು ದೂರಿನ ಮಾತು, ನಾವು ಅಧಿಕಾರದಲ್ಲಿದ್ದಾಗ ಕಟ್ಟಿದ ಮನೆಗಳಿಗೆ ಇವರ ಸರ್ಕಾರ ಇನ್ನೂ ಬಿಲ್‌ ಕೊಟ್ಟಿಲ್ಲ ಎಂದು ದೂರಿದರು. ನಮ್ಮದು ನುಡಿದಂತೆ ನಡೆದ ಪಕ್ಷವಾಗಿದ್ದು, ಕಾಂಗ್ರೆಸ್‌ ಪಕ್ಷ ಈಗಾಗಲೇ 5 ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಜಾರಿ ಮಾಡಲು ಸುಮಾರು 50 ಸಾವಿರ ಕೋಟಿ ವೆಚ್ಚವಾಗಬಹುದು. ಈ ಪ್ರಣಾಳಿಕೆ ಜಾರಿಗೆ ಹಣ ಎಲ್ಲಿಂದ ತರಬೇಕು ಎಂಬುವುದು ನಮ್ಮ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ತರಹ ಬಂಡಲ್‌ ಪ್ರಣಾಳಿಕೆ ನಮ್ಮದಲ್ಲ. ನಮ್ಮ ಪಕ್ಷದಿಂದ ಜಾರಿ ಮಾಡಿದ ಪ್ರಣಾಳಿಕೆಗಳೆಲ್ಲವು 100ಕ್ಕೆ 100ರಷ್ಟು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದರು.