Asianet Suvarna News Asianet Suvarna News

ಮೋದಿ ಅವರೇ ನಿಮ್ಮ ಸಮಯ ಮುಗಿದಿದೆ, ಮುಂದಿನ ಪ್ರಧಾನಿ ರಾಹುಲ್‌ ಗಾಂಧಿ: ಸಲೀಂ ಅಹ್ಮದ್

ಹೆಸರು ಬದಲಾಯಿಸಿದರೆ ಜನ ಬದಲಾವಣೆ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಸಮಯ ಮುಗಿದಿದೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದು, ರಾಹುಲ್‌ ಗಾಂಧಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು. 

KPCC Working President Saleem Ahmed Slams On PM Narendra Modi gvd
Author
First Published Sep 8, 2023, 5:37 PM IST

ಹಾವೇರಿ (ಸೆ.08): ಹೆಸರು ಬದಲಾಯಿಸಿದರೆ ಜನ ಬದಲಾವಣೆ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಸಮಯ ಮುಗಿದಿದೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದು, ರಾಹುಲ್‌ ಗಾಂಧಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಗುರುವಾರ ನಡೆದ ಭಾರತ ಜೋಡೋ ಯಾತ್ರೆಯ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದ ವಿಧಾನಸಭೆ ಚುನಾವಣಾ ಫಲಿತಾಂಶ ಕೇಂದ್ರ ಸರ್ಕಾರಕ್ಕೆ ತಟ್ಟಿದೆ. ಹೀಗಾಗಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೇರೆ-ಬೇರೆ ವಿಚಾರ ಮುಂದಿಟ್ಟು ಜನರ ಗಮನ ಸೆಳೆಯಲು ವಿಷಯಾಂತರ ಮಾಡುತ್ತಿದೆ. ಕೇಂದ್ರ ಸರ್ಕಾರ ದೆಹಲಿಯ ನೆಹರು ಮ್ಯೂಜಿಯಂ ಹೆಸರು ಬದಲಾವಣೆ ಮಾಡಿ ಸಣ್ಣತನದ ರಾಜಕಾರಣ ಮಾಡಿದೆ ಎಂದು ಆರೋಪಿಸಿದರು. ಮೋದಿ ಅವರಿಗೆ ದೇಶದ ಜನತೆ ಎರಡು ಅವಧಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಅವರು ದೇಶದ ಅಭಿವೃದ್ಧಿ ಮಾಡಿಲ್ಲ, ಜನರ ಖಾತೆಗೆ ೧೫ ಲಕ್ಷ ರು. ಹಾಕಿಲ್ಲ, ಯುವಕರಿಗೆ ಉದ್ಯೋಗ ಕೊಟ್ಟಿಲ್ಲ, ಬೆಲೆ ಏರಿಕೆ ಮಾಡಿದ್ದಾರೆ. ಈಗಲಾದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿ ಎಂದು ಆಗ್ರಹಿಸಿದ ಅವರು, ನಾವು ಕೊಟ್ಟಿದ್ದ ೫ ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಈಡೇರಿಸಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.

ಸ್ಟಾಲಿನ್‌ ಅಪ್ಪ, ತಾತನ ಕಡೆಯಿಂದಲೂ ಸನಾತನ ಧರ್ಮ ಆಗಿಲ್ಲ, ಇವನ್ಯಾವನು ಬಚ್ಚಾ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಶ್ರೀಮಂತರ ರಕ್ಷಣೆ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಅವರು ಬಡವರ ಪರ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದರೆ, ರಾಹುಲ್ ಗಾಂಧಿಯವರು ಭಾರತ ಜೋಡೋ ಪಾದಯಾತ್ರೆ ನಡೆಸಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಕುರಿತು ಹೋರಾಟ ಮಾಡುತ್ತಿದ್ದಾರೆ. ರಾಹುಲ್‌ಗಾಂಧಿ ಅವರ ಭಾರತ ಜೋಡೋ ಇಡೀ ದೇಶದಲ್ಲಿ ಸಂಚಲನ ಮೂಡಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿಗಬೇಕು ಎಂಬ ಚಿಂತನೆ ಅವರದ್ದಾಗಿದೆ ಎಂದರು.

ಯಾವುದೇ ಅಧಿಕಾರದ ಆಸೆ ಇಲ್ಲದೇ ದೇಶ ಕಟ್ಟುವ ಕೆಲಸ ಮಾಡಿದರು. ಶಾಂತಿ ನೆಲೆಸಬೇಕು ಎಂಬ ಸಂದೇಶವನ್ನು ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಅವರು ನೀಡಿದರು. ಈ ಬಗ್ಗೆ ಪ್ರಪಂಚದಲ್ಲೇ ಚರ್ಚೆ ಆಯಿತು. ರಾಜ್ಯದ ಯಾವ್ಯಾವ ಭಾಗದಲ್ಲಿ ರಾಹುಲ್‌ಗಾಂಧಿ ಪಾದಯಾತ್ರೆ ಮಾಡಿದರೋ ಆಯಾ ಭಾಗದಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಚುನಾವಣೆಗಾಗಿ ಅವರು ಹೋರಾಟ ಮಾಡಲಿಲ್ಲ, ರಾಹುಲ್‌ಗಾಂಧಿ ಅಪರೂಪದ ರಾಜಕಾರಣಿ. ಅವರಿಗೆ ಸಮಾಜದ ಎಲ್ಲ ವರ್ಗದ ಜನರ ಬಗ್ಗೆ ಪ್ರೀತಿ, ವಿಶ್ವಾಸವಿದೆ. ಅವರ ಹೋರಾಟಕ್ಕೆ ನಾವು ದೊಡ್ಡ ಶಕ್ತಿ ನೀಡಬೇಕಿದೆ. ಹಾವೇರಿ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ಕಾಂಗ್ರೆಸ್ಸಲ್ಲಿ ಲಿಂಗಾಯತರು 2ನೇ ದರ್ಜೆಯವರು: ಗೋವಿಂದ ಕಾರಜೋಳ

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಯಾಸೀರಖಾನ್ ಪಠಾಣ್, ಎಸ್.ಎಫ್.ಎನ್. ಗಾಜಿಗೌಡ್ರ, ಡಿ. ಬಸವರಾಜ, ಪ್ರೇಮಾ ಪಾಟೀಲ, ಎಂ.ಎಂ. ಮೈದೂರ, ಪ್ರಭು ಬಿಷ್ಟನಗೌಡ್ರ, ಈರಪ್ಪ ಲಮಾಣಿ, ಶಿವಕುಮಾರ ತಾವರಗಿ ಇತರರು ಇದ್ದರು. ಇದಕ್ಕೂ ಮೊದಲು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೈಲಾರ ಮಹದೇವಪ್ಪವೃತ್ತದ ವರೆಗೆ ಭಾರತ ಜೋಡೋ ಯಾತ್ರೆಯ ವಿಜಯೋತ್ಸವ ಮೆರವಣಿಗೆ ಮಾಡಿದರು.

Follow Us:
Download App:
  • android
  • ios