Asianet Suvarna News Asianet Suvarna News

ಸ್ಟಾಲಿನ್‌ ಅಪ್ಪ, ತಾತನ ಕಡೆಯಿಂದಲೂ ಸನಾತನ ಧರ್ಮ ಆಗಿಲ್ಲ, ಇವನ್ಯಾವನು ಬಚ್ಚಾ: ಕೆ.ಎಸ್‌.ಈಶ್ವರಪ್ಪ

ಸ್ಟಾಲಿನ್‌ ಒಬ್ಬ ಅಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಧರ್ಮದ ಬಗ್ಗೆ ಮಾತನಾಡಿದವರು, ಧರ್ಮವನ್ನು ಮುಟ್ಟಿದವರು ಯಾರಾದರೂ ಉದ್ದಾರ ಆಗಿದ್ದಾರಾ? ಉದಯನಿಧಿಗೂ ಸನಾತನ ಧರ್ಮಕ್ಕೂ ಏನೂ ಸಂಬಂಧವಿಲ್ಲ.

Ex Minister KS Eshwarappa Slams On Udhayanidhi Stalin Over Sanatana Dharma gvd
Author
First Published Sep 8, 2023, 4:46 PM IST

ವಿಜಯಪುರ (ಸೆ.08): ಸ್ಟಾಲಿನ್‌ ಒಬ್ಬ ಅಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಧರ್ಮದ ಬಗ್ಗೆ ಮಾತನಾಡಿದವರು, ಧರ್ಮವನ್ನು ಮುಟ್ಟಿದವರು ಯಾರಾದರೂ ಉದ್ದಾರ ಆಗಿದ್ದಾರಾ? ಉದಯನಿಧಿಗೂ ಸನಾತನ ಧರ್ಮಕ್ಕೂ ಏನೂ ಸಂಬಂಧವಿಲ್ಲ. ಯಾವನ್ರಿ ಅವನು ಸ್ಟಾಲಿನ್‌ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಕ್ರೋಶ ಹೊರ ಹಾಕಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಹೇಳುತ್ತಾನೆ. ಇದು ಅವರಪ್ಪ, ತಾತನ ಕಡೆಯಿಂದಲೂ ಆಗಿಲ್ಲ. ಇವನ್ಯಾವನು ಬಚ್ಚಾ. ಅವನಿಗೆ ತಾಕತ್ತಿದ್ದರೆ ಮುಸ್ಲಿಂ ಮೂಲದ ಬಗ್ಗೆ ಕಾಮೆಂಟ್‌ ಮಾಡಿ ಬದುಕಲಿ ನೋಡೋಣ. 

ಹಿಂದೂಗಳು ಶಾಂತಿಪ್ರಿಯರು. ಸನಾತನ ಧರ್ಮದ ಬಗ್ಗೆ ಅನೇಕರು ಪಾಸಿಟಿವ್‌ ಕೊಟ್ಟಿದ್ದಾರೆ. ಏಕೆಂದರೆ ಧರ್ಮದ ವಿಚಾರಕ್ಕೆ ಬಂದರೆ ಭಸ್ಮ ಆಗುತ್ತೇವೆ ಎಂಬುವುದು ಗೊತ್ತು ಎಂದರು. ಸಚಿವ ಜಿ.ಪರಮೇಶ್ವರ ಅವರಿಗೆ ಇನ್ನೂರು ವರ್ಷಗಳ ತಮ್ಮ ಮುತ್ತಜ್ಜನ ಬಗ್ಗೆಯೇ ಗೊತ್ತಿಲ್ಲ. ಇನ್ನು ಸಾವಿರಾರು ವರ್ಷಗಳ ಹಿಂದೂ ಧರ್ಮದ ಬಗ್ಗೆ ಕೇಳುತ್ತಾರೆ. ಇವರಿಗೆ ಏನೆನ್ನಬೇಕು ಎಂದ ಅವರು, ನಾನು ಹಿಂದು ಅಲ್ಲ. ತಂದೆ- ತಾಯಿಗೆ ಹುಟ್ಟಿದ್ದೇನೆ ಎಂದು ಹೇಳಿರುವ ಚಿತ್ರನಟ ಪ್ರಕಾಶ ರಾಜ್‌ ಒಬ್ಬ ಅಯೋಗ್ಯ, ಹುಚ್ಚ. ಅಪ್ಪ- ಅಮ್ಮನಿಗೆ ಹುಟ್ಟಿದ್ದೇನೆ ಎನ್ನುವುದಕ್ಕೆ ಇವನಿಗೇನು ಗ್ಯಾರಂಟಿ ಇದೆ ಎಂದು ಪ್ರಶ್ನಿಸಿದ ಅವರು, ನನಗೆ ಚಿತ್ರನಟ ಪ್ರಕಾಶ ರಾಜ್‌ ಅವರ ಅಮ್ಮನ ಬಗ್ಗೆ ಗೌರವವಿದೆ. ಆದರೆ ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಮಾತ್ರ ಅಪ್ಪ ಯಾರೆಂದು ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ಸಲ್ಲಿ ಲಿಂಗಾಯತರು 2ನೇ ದರ್ಜೆಯವರು: ಗೋವಿಂದ ಕಾರಜೋಳ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಮಾಡುತ್ತಿರುವುದೆಲ್ಲ, ಇರುವುದೆಲ್ಲ ಹಲಕಟ್‌ ಗಿರಿ. ಶಾಂತಿ ಕೆಡಿಸುವುದೇ ಅವರ ಕೆಲಸ. ಮುಸ್ಲಿಮರಿಗೆ ನೋವು ಮಾಡಬೇಕು ಎಂದು ಹೇಳುವುದಿಲ್ಲ. ಕುರಾನ್‌, ಮುಸ್ಲಿಮರು ಎಲ್ಲಿ? ಯಾವಾಗ? ಹುಟ್ಟಿದ್ದರು ಎಂಬ ಪ್ರಶ್ನೆ ಕೇಳಲಿ ನೋಡೋಣ. ಅವರನ್ನು ಕೆಣಕಿ ನೋಡಲಿ ಗೊತ್ತಾಗುತ್ತದೆ. ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು. ಕೇಂದ್ರದ ನಾಯಕರು ವಿರೋಧ ಪಕ್ಷದ ನಾಯಕನ ನೇಮಕ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರದಲ್ಲಿಯೇ ಹೈಕಮಾಂಡ್‌ ಪ್ರತಿ ಪಕ್ಷದ ನಾಯಕನನ್ನು ನೇಮಕ ಮಾಡಲಿದ್ದಾರೆ. ನಮ್ಮಲ್ಲಿ 66 ಶಾಸಕರೂ ವಿರೋಧ ಪಕ್ಷದ ನಾಯಕರಿದ್ದಾರೆ. ಎಲ್ಲರೂ ಸಮರ್ಥವಾಗಿ ಉತ್ತರ ನೀಡುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

ಬಿಜೆಪಿ ಪಕ್ಷ ಲಿಂಗಾಯತರನ್ನು ಎಂದೂ ಕಡೆಗಣನೆ ಮಾಡಿಲ್ಲ. ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಯಾವುದೇ ಜಾತಿಯನ್ನು ತುಳಿಯಲು ಹೋಗಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಮಾಡಿರುವ ಆರೋಪ ಶುದ್ಧ ಸುಳ್ಳು. ಬಿಜೆಪಿಯಲ್ಲಿ ಯಾವುದೇ ಜಾತಿ ವ್ಯವಸ್ಥೆ ಇಲ್ಲ. ಎಲ್ಲರೂ ಹಿಂದೂ ಧರ್ಮದವರಾಗಿದ್ದಾರೆ ಎಂದು ತಿಳಿಸಿದರು.

ಜಗದೀಶ ಶೆಟ್ಟರ್‌ ಅವರು ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದರು. ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿದ್ದಾರೆ. ಜಗದೀಶ ಶೆಟ್ಟರ್‌ ಅವರು ಬಿಜೆಪಿ ತಮ್ಮ ತಾಯಿ ಎನ್ನುತ್ತಿದ್ದರು. ಆದರೆ ಈಗ ಜಗದೀಶ ಶೆಟ್ಟರ್‌ ಅಂತವರು ತಾಯಿಯನ್ನು ಒದ್ದು ಹೊರಗೆ ಹೋಗಿದ್ದಾರೆ ಎಂದರು. ಬಿಜೆಪಿ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಅವರು ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಬಗ್ಗೆ ಮಾತನಾಡಬೇಕಿತ್ತು. ಈಗ ಪ್ರದೀಶ ಶೆಟ್ಟರ್‌ ಅವರ ಒಂದು ಕಾಲ ಬಿಜೆಪಿಯಿಂದ ಹೊರಗಿದೆ. ಹಾಗಾಗಿ ಪ್ರದೀಪ ಶೆಟ್ಟರ್‌ ಅವರು ಮಾತನಾಡುತ್ತಿದ್ದಾರೆ ಎಂದು ನುಡಿದರು.

ರೈತರ ನೆರವಿಗೆ ಧಾವಿಸಲಿ ಸರ್ಕಾರ: ರಾಜ್ಯದಲ್ಲಿ ಮಳೆಯ ತೀವ್ರ ಅಭಾವದಿಂದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ತುರ್ತಾಗಿ ಧಾವಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಬರ ಘೋಷಣೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಕಳೆದ ಎರಡು ತಿಂಗಳಿಂದ ಮೀನಮೇಷ ಎಣಿಸುತ್ತಿದೆ. ಬರಪೀಡಿತ ತಾಲೂಕುಗಳ ಅಂಕಿಅಂಶಗಳು ಸರ್ಕಾರದ ಬಳಿ ಇವೆ. ಕೂಡಲೇ ಪಟ್ಟಿಮಾಡಿ ಅವುಗಳನ್ನು ಬರಪೀಡಿತ ಪ್ರದೇಶಗಳು ಎಂದು ತಕ್ಷಣ ಸಾರುವ ಮೂಲಕ ರೈತರ ಸಂಕಷ್ಟನಿವಾರಣೆಗೆ ಧಾವಿಸಬೇಕು ಎಂದರು.

ರಾಜ್ಯದಲ್ಲಿ ಇದುವರೆಗೆ 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಅಂಕಿ- ಸಂಖ್ಯೆಗಳಾಗಿವೆ. ರೈತರ ಆತ್ಮಹತ್ಯೆಗಳು ವೈಯಕ್ತಿಕ ಕಾರಣಗಳಿಂದ ಆಗುತ್ತವೆ ಎಂದು ಕಾಂಗ್ರೆಸ ಸರ್ಕಾರದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಇದು ನ್ಯಾಯವಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರೀ ಗ್ಯಾರಂಟಿಗಳ ಅನುಷ್ಠಾನದ ಕಡೆಗೆ ಹೆಚ್ಚು ಗಮನ ಹರಿಸಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದರೂ ಇತ್ತ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಿ: ಕಿಮ್ಮನೆ ರತ್ನಾಕರ್

ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳ ಕಡೆಗೆ ಗಮನ ಹರಿಸದೇ ಇನ್ನೂ ಹನಿಮೂನ್‌ ಮೂಡ್‌ನಲ್ಲಿ ಇದ್ದಾರೆ. ಯಾವುದೇ ಸಚಿವರು ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಆಪಾದಿಸಿದ ಅವರು, ರಾಜ್ಯದಲ್ಲಿ ಕೇವಲ ಒಂದೂವರೆ ಕೋಟಿ ಜನರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ಕೊಡಲು ಸಾಧ್ಯ. ಇನ್ನುಳಿದ ಐದೂವರೆ ಕೋಟಿ ಜನರ ಗತಿ ಏನು? ಅದರ ಮೇಲೆ ಕೆಲವರು ಕೋರ್ಚ್‌ಗೆ ಹೋಗಿದ್ದಾರೆ. ಗ್ಯಾರಂಟಿ ಕಾರ್ಡ್‌ ಜೊತೆಗೆ ಈ ಸರ್ಕಾರವನ್ನೇ ಕೋರ್ಚ್‌ ವಜಾ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.

Follow Us:
Download App:
  • android
  • ios