ನಿರಂತರವಾಗಿ ಲಿಂಗಾಯತರಿಗೆ ಅನ್ಯಾಯ ಮಾಡಿಕೊಂಡು ಬಂದಿರುವುದೇ ಕಾಂಗ್ರೆಸ್‌ ಪಕ್ಷ. ಲಿಂಗಾಯತರನ್ನು ಎರಡನೇ ದರ್ಜೆ ನಾಗರಿಕರಂತೆ ಇಟ್ಟುಕೊಂಡಿರುವುದೂ ಇದೇ ಕಾಂಗ್ರೆಸ್. ಹಿರಿಯ ಮುಖಂಡ ಡಾ.ಶಾಮನೂರು ಶಿವಶಂಕರಪ್ಪ 20 ವರ್ಷ ಕಾಲ ಕಾಂಗ್ರೆಸ್ಸಿನ ಖಜಾಂಚಿಯಾಗಿದ್ದವರು.

ದಾವಣಗೆರೆ (ಸೆ.08): ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆಯೆಂದು ಕಾಂಗ್ರೆಸ್‌ನ ನಾಯಕರು ಹೇಳಿಕೊಂಡು ಓಡಾಡುತ್ತಿದ್ದು, ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಸೇರಿ ಅನೇಕ ಲಿಂಗಾಯತ ನಾಯಕರ ಹೊರ ಹಾಕಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕುಟುಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿರಂತರವಾಗಿ ಲಿಂಗಾಯತರಿಗೆ ಅನ್ಯಾಯ ಮಾಡಿಕೊಂಡು ಬಂದಿರುವುದೇ ಕಾಂಗ್ರೆಸ್‌ ಪಕ್ಷ. ಲಿಂಗಾಯತರನ್ನು ಎರಡನೇ ದರ್ಜೆ ನಾಗರಿಕರಂತೆ ಇಟ್ಟುಕೊಂಡಿರುವುದೂ ಇದೇ ಕಾಂಗ್ರೆಸ್. ಹಿರಿಯ ಮುಖಂಡ ಡಾ.ಶಾಮನೂರು ಶಿವಶಂಕರಪ್ಪ 20 ವರ್ಷ ಕಾಲ ಕಾಂಗ್ರೆಸ್ಸಿನ ಖಜಾಂಚಿಯಾಗಿದ್ದವರು. ಅಂತಹ ಶಿವಶಂಕರಪ್ಪನವರಿಗೆ ಯಾವ ಸ್ಥಾನ ನೀಡಿದ್ದಾರೆ? ಲಿಂಗಾಯತರನ್ನು ಕಡೆಗಣಿಸುತ್ತಿರುವುದು ಬಿಜೆಪಿ ಅಲ್ಲ. ಅದು ಕಾಂಗ್ರೆಸ್ ಪಕ್ಷ ಎಂದು ಕಾರಜೋಳ ಆಡಳಿತ ಪಕ್ಷದ ವಿರುದ್ಧ ಚಾಟಿ ಬೀಸಿದರು.

ನೋಟಿಸ್‌ ಕೊಡುವ ಹಂತಕ್ಕೆ ಬಂತು ಕಾಂಗ್ರೆಸ್‌ ಒಳಜಗಳ: ಎಚ್‌.ಸಿ.ಯೋಗೇಶ್‌ ವಿರುದ್ಧ ದೂರು

ಕಾಂಗ್ರೆಸ್ ಕಚೇರಿಯಲ್ಲಿ ದೀಪಕ್ಕೂ ದಿಕ್ಕಿಲ್ಲದ ಸ್ಥಿತಿ ಬರುತ್ತೆ: ದೇಶದ ಸನಾತನ ಧರ್ಮದ ಮೇಲೆ ದಾಳಿ ನಡೆಸಲಾಗುತ್ತಿದೆ. ಸೆಕ್ಯುಲರ್ ಧರ್ಮವೆಂದರೆ ಅದು ಹಿಂದು ಧರ್ಮ. ಕಾಂಗ್ರೆಸ್‌ನ ನಾಯಕರು ಹುಳಿ ಹಿಂಡಿ, ಓಟು ಬ್ಯಾಂಕ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿದೇಶಗಳಿಂದ ಬಂದ ಧರ್ಮಗಳನ್ನು ಜೊತೆಗೆ ಕರೆದೊಯ್ಯುತ್ತಿರುವ ಧರ್ಮವೆಂದರೆ ಹಿಂದು ಧರ್ಮ. ಅಂತಹ ಹಿಂದು ಧರ್ಮ, ಜಾತಿ ಜಾತಿಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾವನಾತ್ಮಕ ಸಮಸ್ಯೆಗಳ ಸೃಷ್ಟಿಸಿಕೊಂಡು, ಕಾಂಗ್ರೆಸ್‌ನವರು ಆಡಳಿತ ನಡೆಸುತ್ತಾರೆ. ಹಿಂದು ಧರ್ಮವನ್ನು ಇಟ್ಟುಕೊಂಡು, ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಾರೆ. ಇಂತಹದ್ದನ್ನೆಲ್ಲಾ ಜನರೂ ಗಮನಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯ ದೀಪಕ್ಕೂ ದಿಕ್ಕು ಇಲ್ಲದ ಪರಿಸ್ಥಿತಿ ಬಂದೊದಗಲಿದೆ ಎಂದು ಗೋವಿಂದ ಕಾರಜೋಳ ಸೂಚ್ಯವಾಗಿ ಎಚ್ಚರಿಸಿದರು.

ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಿ: ಕಿಮ್ಮನೆ ರತ್ನಾಕರ್

ಉದಯನಿಧಿಗೆ ಸರಿಯಾಗಿ ಮೀಸೆಯೇ ಬಂದಿಲ್ಲ: ಮುಖದ ಮೇಲೆ ಸರಿಯಾಗಿ ಮೀಸೆಯೂ ಬರದಿದ್ದವನನ್ನು ಮುಖ್ಯಮಂತ್ರಿ ಮಗನೆಂಬ ಕಾರಣಕ್ಕೆ ಸಚಿವರಾಗಿ ಮಾಡಿದ್ದರೆ, ಅಂತಹವನು ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದರು.