ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಕೊಡುಗೆ ಏನು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಕಳೆದ ಒಂಬತ್ತು ವರ್ಷಗಳಲ್ಲಿ ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ ದಾಖಲೆ ಬಿಡುಗಡೆಗೊಳಿಸಿ, ಚರ್ಚಿಸಲು ಆಗಮಿಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ಪೊಲೀಸರು ತಡೆದರು.

KPCC spokesperson M Lakshman Slams On MP Pratap Simha gvd

ಮೈಸೂರು (ಸೆ.07): ಕಳೆದ ಒಂಬತ್ತು ವರ್ಷಗಳಲ್ಲಿ ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ ದಾಖಲೆ ಬಿಡುಗಡೆಗೊಳಿಸಿ, ಚರ್ಚಿಸಲು ಆಗಮಿಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ಪೊಲೀಸರು ತಡೆದರು. ಎಂ. ಲಕ್ಷ್ಮಣ್, ನಗರ ಕಾಂಗ್ರೆಸ್ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ಅವರ ನಿಯೋಗವು ನಗರದ ಜಲದರ್ಶಿನಿ ಆವರಣದಲ್ಲಿನ ಸಂಸದರ ಕಚೇರಿಗೆ ನುಗ್ಗಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ತಡೆದರು.

ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಅವರ ಕೊಡುಗೆ ಏನು ಎಂದು ಲಕ್ಷ್ಮಣ್ ಪ್ರಶ್ನಿಸಿದರು. ಈ ಸಂಬಂಧ ಮುಖಾಮುಖಿ ಚರ್ಚಿಸೋಣ ಎಂದು ಕಾಂಗ್ರೆಸ್ ತಂಡದೊಡನೆ ತೆರಳಲು ಮುಂದಾದ ಲಕ್ಷ್ಮಣ್ ಅವರನ್ನು ಅತಿಥಿಗೃಹದ ಮುಖ್ಯ ದ್ವಾರದಲ್ಲಿಯೇ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟವಾಯಿತು. ನಾವು ಕಾಂಗ್ರೆಸ್ ಸರ್ಕಾರದ ಅವಧಿಯ ದಾಖಲೆ ಕೊಡಲು ಬಂದಿದ್ದೇವೆ. ನಮ್ಮನ್ನು ಯಾಕೆ ಬಿಡುವುದಿಲ್ಲ ಎಂದು ಪ್ರಶ್ನಿಸಿದರು. ತೀವ್ರ ಒತ್ತಾಯಪಡಿಸಿದ ಬಳಿಕ ನಾಲ್ವರನ್ನು ಮಾತ್ರ ಒಳಗೆ ಬಿಟ್ಟರು. ಸಂಸದರು ಕಚೇರಿಯಲ್ಲಿ ಇಲ್ಲದಿರುವುದನ್ನು ತಿಳಿದು ಅವರು ಹಿಂದಿರುಗಿದ ಹಿನ್ನೆಲೆಯಲ್ಲಿ ಹೈ ಡ್ರಾಮ ಅಂತ್ಯಗೊಂಡಿತು.

18 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಹಬ್ಬಕ್ಕೆ ಬಟ್ಟೆಗಳನ್ನು ನೀಡುತ್ತೇನೆ: ಶಾಸಕ ಪ್ರದೀಪ್ ಈಶ್ವರ್

ಮೈಸೂರು ಅಭಿವೃದ್ಧಿ ಕುರಿತು ಚರ್ಚಿಸಲು 3 ದಿನಗಳ ಹಿಂದೆ ಪತ್ರ ಬರೆದು ಅರ್ಧ ಗಂಟೆ ಸಮಯಾವಕಾಶ ಕೇಳಿದ್ದೆ. ಚರ್ಚೆಗೆ ಬರುವಂತೆ ಸಂಸದರ ಕಚೇರಿಯಿಂದ ಪತ್ರವನ್ನೂ ಕೊಟ್ಟಿದ್ದರು. ಆದರೆ, ಪ್ರತಾಪಸಿಂಹ ಅವರು ಕಚೇರಿಯಲ್ಲಿ ಇಲ್ಲ. ಅವರು ಬರುವ ತನಕ ಕಾಯುತ್ತೇನೆ. ಈ ಚರ್ಚೆ ಇತ್ಯರ್ಥವಾಗಬೇಕು ಎಂದು ಅವರು ಹೇಳಿದರು. ಈ ವೇಳೆ ಮಾತನಾಡಿದ ಎಂ. ಲಕ್ಷ್ಮಣ್ ಅವರು, ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಪ್ರತಾಪ ಸಿಂಹ ಅವರು ಚರ್ಚೆಗೆ ಅಹ್ವಾನಿಸಿದ್ದರು. ಅವರ ಪರವಾಗಿ ಕಾಂಗ್ರೆಸ್ ನಿಯೋಗ ಚರ್ಚೆಗೆ ಬಂದಿದೆ. ಹೀಗೆ ನಾಲ್ಕನೇ ಬಾರಿ ಅಭಿವೃದ್ಧಿ ಕುರಿತು ಚರ್ಚೆಗೆ ಆಹ್ವಾನಿಸಲಾಗಿದೆ. ಆದರೆ ಸಂಸದರು ಮಾತ್ರ ನಾಪತ್ತೆ ಎಂದು ವ್ಯಂಗ್ಯವಾಡಿದರು.

ಮಾಧ್ಯಮದ ಮುಂದೆ ಪೌರುಷ ತೋರಿಸುವ ಪ್ರತಾಪ ಸಿಂಹ ಅವರು ಡೋಂಗಿ ರಾಜಕಾರಣಿ. ಪ್ರತಿನಿತ್ಯ ಹಿಟ್ಅಂಡ್ರನ್ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಮೈಸೂರು ನಗರಕ್ಕೆ 3,800 ಕೋಟಿ ಅನುದಾನ ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ 4 ವರ್ಷದಲ್ಲಿ 100 ಕೋಟಿ ಅನುದಾನ ಕೊಟ್ಟಿಲ್ಲ. ಈ ಬಗ್ಗೆ ಚರ್ಚಿಸಲು ದಾಖಲೆ ಸಮೇತ ಬಂದಿದ್ದೇನೆ ಎಂದು ಅವರು ಹೇಳಿದರು. ಕಳೆದ 9.5 ವರ್ಷದಿಂದ ಪ್ರತಾಪ ಸಿಂಹ ಅವರು ಸಂಸದರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ವಿಶ್ವಗುರು ಎನಿಸಿಕೊಂಡ ಮೋದಿ ಇದ್ದಾರೆ. ಚುನಾವಣೆ ವೇಳೆ ಮೈಸೂರನ್ನು ಪ್ಯಾರೀಸ್ ಮಾಡುವುದಾಗಿ ಹೇಳಿದ್ದರು. 

ಆದರೆ ಈವರೆಗೂ 1 ಪೈಸೆಯನ್ನೂ ನೀಡಿಲ್ಲ. ಪ್ರತಾಪ ಸಿಂಹ 50 ಕೋಟಿ ಅನುದಾನ ತಂದಿಲ್ಲ ಎಂದು ಅವರು ಟೀಕಿಸಿದರು. ಒಬ್ಬ ಕಾರ್ಪೋರೆಟರ್ ಮಾಡಿದ ಕೆಲಸವನ್ನು ತಾವೇ ಮಾಡಿದ್ದು ಎಂದು ಪ್ರತಾಪ ಸಿಂಹ ಹೇಳಿಕೊಳ್ಳುತ್ತಾರೆ. ನಗರ ಪಾಲಿಕೆ ವ್ಯಾಪ್ತಿಯ ಯೋಜನೆಯನ್ನು ತಂದಿದ್ದು ನಾನೇ ಎನ್ನುತ್ತಾರೆ. ವರ್ತುಲ ರಸ್ತೆ ಆಗಿದ್ದು ಎಡಿಬಿ ಸಾಲದಿಂದ, ವಿದ್ಯುತ್ ದೀಪ್ ಅಳವಡಿಕೆ ಕ್ರೆಡಿಟ್ ಅವರಿಗೆ ಸಿಗಬೇಕು. ನಿಮಗೆ ಯಾವ ರೀತಿ ಹೇಳಿದರೆ ಅರ್ಥವಾಗುತ್ತದೆ ಎಂದು ಅವರು ಕುಟುಕಿದರು. ಸಿದ್ದರಾಮಯ್ಯ ಅವರು ಮೈಸೂರಿಗೆ ಕೊಟ್ಟ ಕೊಡುಗೆಯನ್ನು ದಾಖಲೆ ಸಮೇತ ಹೇಳುತ್ತಿದ್ದೇನೆ. 

ಪಕ್ಕದಲ್ಲಿಯೇ ಮಹಾರಾಣಿ ಕಾಲೇಜು, ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಸೇರಿ 300 ಯೋಜನೆಗಳನ್ನು ಕೊಟ್ಟಿದ್ದಾರೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇಷ್ಟು ಅನುದಾನವನ್ನು ಯಾವ ಸರ್ಕಾರವೂ ನೀಡಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷರಾದ ಕೆ. ಮರಿಗೌಡ, ಬಿ.ಎಂ. ರಾಮು, ಮಹಿಳಾ ಕಾಂಗ್ರೆಸ್ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಮಂಥರ್ಗೌಡ, ಗಿರೀಶ್, ನಾಗೇಶ್, ಡೈರಿ ವೆಂಕಟೇಶ್, ಮೈಸೂರು ಬಸವಣ್ಣ, ರಮೇಶ್ ಮೊದಲಾದವರು ಇದ್ದರು.

ಭಗವದ್ಗೀತೆ ಒಂದು ವಿಶೇಷವಾದ ಶ್ರೇಷ್ಠ ಗ್ರಂಥ: ಸಚಿವ ಎಂ.ಸಿ.ಸುಧಾಕರ್

ಲೋಕಸಭಾ ಚುನಾವಣೆ ಹತ್ತಿರವಾದಾಗ ಸಂಸದ ಪ್ರತಾಪಸಿಂಹ ಅವರಿಗೆ ಗ್ರೇಟರ್ ಮೈಸೂರು ನೆನಪಾಗಿದೆ. ಅವರ ತ್ರಿಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೂ ಪ್ರಯತ್ನವನ್ನೇ ಮಾಡಲಿಲ್ಲ. ಸುಳ್ಳು ಹೇಳಿಕೊಂಡು ತಿರುಗುವುದೇ ಆಯಿತು. 2024ರಲ್ಲಿ ಮೈಸೂರು ಜನತೆ ನಿಮ್ಮನ್ನು ತಿರಸ್ಕರಿಸುವುದು ನೂರಕ್ಕೆ ನೂರು ಸತ್ಯ.
-ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ

Latest Videos
Follow Us:
Download App:
  • android
  • ios