Asianet Suvarna News Asianet Suvarna News

18 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಹಬ್ಬಕ್ಕೆ ಬಟ್ಟೆಗಳನ್ನು ನೀಡುತ್ತೇನೆ: ಶಾಸಕ ಪ್ರದೀಪ್ ಈಶ್ವರ್

ಪ್ರತಿಯೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಜನಪ್ರತಿನಿಧಿಯ ಕರ್ತವ್ಯ. ನನ್ನ ಆಡಳಿತಾವಧಿಯಲ್ಲಿ ಚಿಕ್ಕಬಳ್ಳಾಪುರದ ಜನತೆಯ ಸಮಸ್ಯೆಗಳ ಆಲಿಸಿ ಪರಿಹಾರ ನೀಡಲು ಸಂಪೂರ್ಣ ಡಿಜಿಟಲಿಕರಣ ಮಾಡಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. 

Will give clothes to 18 thousand students for Ganesha festival Says MLA Pradeep Eshwar gvd
Author
First Published Sep 7, 2023, 3:12 PM IST

ಚಿಕ್ಕಬಳ್ಳಾಪುರ (ಸೆ.07): ಪ್ರತಿಯೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಜನಪ್ರತಿನಿಧಿಯ ಕರ್ತವ್ಯ. ನನ್ನ ಆಡಳಿತಾವಧಿಯಲ್ಲಿ ಚಿಕ್ಕಬಳ್ಳಾಪುರದ ಜನತೆಯ ಸಮಸ್ಯೆಗಳ ಆಲಿಸಿ ಪರಿಹಾರ ನೀಡಲು ಸಂಪೂರ್ಣ ಡಿಜಿಟಲಿಕರಣ ಮಾಡಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಅಂಗವಾಗಿ ನಗರದ ಒಂದನೇ ವಾರ್ಡ್‌ನಲ್ಲಿ ಮನೆ-ಮನೆಗೆ ತೆರಳಿ ಜನತೆಯ ಸಮಸ್ಯೆ ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನು ನಿರಂತರ ಐದು ವರ್ಷಗಳು ನಡೆಸಿ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವಿದ್ಯಾರ್ಥಿ ವೇತನ ಮತ್ತು ಬಟ್ಟೆ ವಿತರಣೆ: ಚುನಾವಣಾ ಪೂರ್ವ ತಿಳಿಸಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ. ತಮ್ಮ ಸ್ವಂತ ಹಣದಿಂದ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ 6500 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಿದ್ದು,1ರಿಂದ 10 ನೇ ತರಗತಿಯವರೆಗೆ ಸರ್ಕಾರಿ ಶಾಲೆಯ 18 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಚರ್ತುಥಿ ಹಬ್ಬಕ್ಕೆ ಒಂದು ಜೊತೆ ಬಟ್ಟೆಗಳನ್ನು ನೀಡುತ್ತಿದ್ದೇನೆ ಎಂದರು.

ಕಾಂಗ್ರೆಸ್ ಕಾಲ್ಗುಣದಿಂದಲೇ ರಾಜ್ಯಕ್ಕೆ ಬರಗಾಲ: ಸಿ.ಟಿ.ರವಿ ಆಕ್ರೋಶ

ತಮ್ಮ ತಾಯಿಯವರ ಜನ್ಮದಿವಾದ ಸೆಪ್ಟಂಬರ್ 12ರಂದು ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಐದು ಆಂಬ್ಯುಲೆನ್ಸ್‌ಗಳ ಕೊಡುಗೆ ನೀಡುತ್ತಿದ್ದು, ಇವುಗಳಲ್ಲಿ ಎರಡನ್ನು ನಗರಕ್ಕೆ ಮೀಸಲಿಡಲಾಗುವುದು. ಒಂದರಲ್ಲಿ ವೆಂಟಿಲೇಟರ್ ಮತ್ತೊಂದರಲ್ಲಿ ಆಕ್ಸಿಜನ್ ವ್ಯೆವಸ್ಥೆಯವನ್ನು ಮಾಡಲಾಗಿದೆ. ಈ ಆಂಬ್ಯುಲೆನ್ಸ್‌ಗಳ ಸೇವೆ ಕ್ಷೇತ್ರದ ಜನತೆಗೆ ಮಾತ್ರ ಲಭ್ಯವಿದೆ. ಉಚಿತವಾಗಿದ್ದು ಇವುಗಳ ಖರ್ಚು-ವೆಚ್ಚಗಳನ್ನು ತಾವೇ ಸ್ವತಃ ಭರಿಸುವುದಾಗಿ ತಿಳಿಸಿದರು.

ಸಮಸ್ಯೆಗಳ ಶೀಘ್ರ ಪರಿಹಾರ: ಪ್ರಸ್ತುತ ಒಂದನೇ ವಾರ್ಡ್‌ನಲ್ಲಿ ಎಲ್ಲ ವರ್ಗದ ಜನತೆಯೂ ವಾಸವಿದ್ದು, ಅವರಿಗೂ ಸಾಕಷ್ಟು ಸಮಸ್ಯೆಗಳಿವೆ.ಮೂಲಭೂತಸಮಸ್ಯೆಗಳು ಸಾಕಷ್ಟಿವೆ. ರಸ್ತೆ, ನೀರು ಹಾಗೂ ಶುಚಿತ್ವದ ಸಮಸ್ಯೆಶೀಘ್ರದಲ್ಲೇ ಬಗೆಹರಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇನೆಂದರು. ಇಲ್ಲಿಯ ರಸ್ತೆ, ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪಗಳು ಮನೆ, ನಿವೇಶನಗಳ ಇ-ಖಾತೆಗಳ ಸಮಸ್ಯೆಸೇರಿದಂತೆ ಹಲವಾರು ಸಮಸ್ಯೆಗಳನ್ನು ಜನತೆ ತಿಳಿಸಿದ್ದು ಶೀಘ್ರ ಪರಿಹಾರ ಮಾಡುತ್ತೇನೆ.

ಭ್ರಷ್ಟಾಚಾರಕ್ಕೆ ಕಡಿವಾಣ: ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ. ಜನರ ಸಂಕಷ್ಟ ಕೇಳುವ ಮತ್ತು ಪರಿಹಾರ ಕೊಡಬೇಕೆನ್ನುವ ಮನೋಭಾವದಿಂದ ಡಿಜಿಟಲಿಕರಣ ಮಾಡಿದ್ದೇನೆ.ಭ್ರಷ್ಟಾಚಾರವನ್ನು ನಾನು ಸಹಿಸುವುದಿಲ್ಲ ಕಾನೂನು ಚೌಕಟ್ಟಿನಲ್ಲಿದ್ದರೆ ಯಾವುದೇ ಖಾತೆ ನಿಲ್ಲಿಸಲ್ಲ .ಕಾನೂನು ಚೌಕಟ್ಟು ಬಿಟ್ಟು ನಾನು ಏನು ಮಾಡಲ್ಲ ಎಂದರು. ಕ್ಷೇತ್ರವನ್ನು ಕ್ಲೀನ್ ಮತ್ತು ಗ್ರೀನ್ ಮಾಡುವುದಾಗಿ ತಿಳಿಸಿದರು.

ಕಾವೇರಿ ನೀರು ವಿಚಾರದಲ್ಲಿ ಡಿಕೆಶಿಗೆ ಕರ್ನಾಟಕ ಜನರ ಕಷ್ಟ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್

ಇದೇ ಸಂದರ್ಭದಲ್ಲಿ ಕ್ಷೇತ್ರದ ಜನತೆ ನೇರವಾಗಿ ತಮಗೆ ದೂರು ನೀಡಲು ಮಾಡಿರುವ ತಂತ್ರಾಶದ ಪೋಸ್ಟರ್‌ಗಳನ್ನು ಮನೆ-ಮನೆಯ ಗೋಡೆಗಳಿಗೆ ಸ್ವತಃ ತಾವೇ ಅಂಟಿಸಿದರು. ಈ ವೇಳೆ ನಗರಸಭೆಯ ಪೌರಾಯುಕ್ತ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜನೀಯರ್ ಉಮಾ ಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಬೆಸ್ಕಾಂ ಸಿಬ್ಬಂಧಿ, ಮುಖಂಡರಾದ ಪಿ.ಎಂ.ರಘು,ಶಶಿ,ಡ್ಯಾನ್ಸ್ ಶ್ರೀನಿವಾಸ್,ಪೈಲೆಟ್ ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಸರ್ವೀಸ್ ಸ್ಟೇಷನ್ ನಾರಾಯಣಸ್ವಾಮಿ,ಕೋಲಾಟ್ಲು ರಾಮಚಂದ್ರ ಶಿವು ಮತ್ತಿತರರು ಇದ್ದರು.

Follow Us:
Download App:
  • android
  • ios