Asianet Suvarna News Asianet Suvarna News

ಕಾವೇರಿ ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಬಿಜೆಪಿ ಅಣ್ಣಾಮಲೈ ಮೂಲಕ ಪತ್ರ ಬರೆಸುತ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ. ನೀರು ಬಿಡುವ ಕೀಲಿ ದೆಹಲಿಯಲ್ಲಿದೆ. ಅಲ್ಲಿ ಕುಳಿತುಕೊಂಡು ಬಟನ್‌ ಒತ್ತಿದರೆ ಸಾಕು ನೀರು ಹೋಗುತ್ತದೆ. ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು. 
 

KPCC spokesperson M Lakshman Slams On Central Govt Over Cauvery Water Issue gvd
Author
First Published Sep 4, 2023, 11:41 PM IST

ಮೈಸೂರು (ಸೆ.04): ಬಿಜೆಪಿ ಅಣ್ಣಾಮಲೈ ಮೂಲಕ ಪತ್ರ ಬರೆಸುತ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ. ನೀರು ಬಿಡುವ ಕೀಲಿ ದೆಹಲಿಯಲ್ಲಿದೆ. ಅಲ್ಲಿ ಕುಳಿತುಕೊಂಡು ಬಟನ್‌ ಒತ್ತಿದರೆ ಸಾಕು ನೀರು ಹೋಗುತ್ತದೆ. ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು. ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಮಾನಿಟರಿಂಗ್‌ ಬೋರ್ಡ್‌ ಪ್ರಾಧಿಕಾರ ರಚಿಸಿದ್ದು ಪ್ರಧಾನಿ ಮೋದಿ. ಇದಕ್ಕೆ ಕೇಂದ್ರ ಸರ್ಕಾರದ ಚೀಫ್‌ ಎಂಜಿನಿಯರ್‌ ಮುಖ್ಯಸ್ಥರು. ಎಲ್ಲಾ ರಾಜ್ಯದ ಎಂಜಿನಿಯರ್‌ ಅಲ್ಲಿರುತ್ತಾರೆ. ಅಲ್ಲಿ ನಿರ್ಧಾರ ಮಾಡುವವರು ನೀವೇ, ನೀರು ಕೊಡಿ ಅಂತಾ ಹೇಳಿದವರು ನೀವೇ, ನೀರು ಇದ್ದರೆ ತಾನೇ ಕೊಡುವುದು? ಇಲ್ಲದಿರುವ ನೀರನ್ನು ಹೇಗೆ ಕೊಡೊದು ಎಂದು ಪ್ರಶ್ನಿಸಿದರು.

ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ. ಈಗ ಇಲ್ಲಿ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ. ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಕೃಷಿಗೂ ನೀರು ಬೇಕು. ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ ಈಗ ಅನುಕೂಲವಾಗುತಿತ್ತು. 25 ಸಂಸದರು ಮಾಡಬೇಕಿತ್ತು ಎಲ್ಲಿ ಹೋಗಿದ್ದಾರೆ ಎಂದು ಅವರು ಕಿಡಿಕಾರಿದರು. ಇಂಡಿಯಾ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ. ಅದಕ್ಕಾಗಿ ಒಂದೇ ದೇಶ ಒಂದೇ ಚುನಾವಣೆ ಅನ್ನುತ್ತಿದ್ದೀರಾ. ಇದೊಂದು ಕೇಂದ್ರದ ಕುತಂತ್ರ ಎಂದು ಅವರು ಆರೋಪಿಸಿದರು.

Mandya: ಕಾವೇರಿ ನೀರು ಹೋರಾಟಕ್ಕೆ ಧುಮುಕಿದ ಪುಟಾಣಿಗಳು!

ಸಂಸದರ ವಿರುದ್ಧ ವಾಗ್ದಾಳಿ: ಗ್ರೇಟರ್‌ ಮೈಸೂರು ಮಾಡುವ ವಿಚಾರದಲ್ಲಿ ಸಂಸದ ಪ್ರತಾಪ್‌ ಸಿಂಹ ಸುಳ್ಳು ಹೇಳುತ್ತಿದ್ದಾರೆ. ಗ್ರೇಟರ್‌ ಮೈಸೂರು ಮಾಡಲಿಕ್ಕೆ ಕೆಲವು ಮಾನದಂಡಗಳು ಇವೆ. ಗ್ರೇಟರ್‌ ಮೈಸೂರು ಮಾಡುವುದು ಕೇಂದ್ರ ಸರ್ಕಾರವೊ ಅಥವಾ ರಾಜ್ಯ ಸರ್ಕಾರವೊ. ಜನರಿಗೆ ಸತ್ಯ ಹೇಳಬೇಕು ಎಂದು ಆಗ್ರಹಿಸಿದರು. ಗ್ರೇಟರ್‌ ಮೈಸೂರು ಮಾಡಲಿಕ್ಕೆ 200 ಕಿ.ಮೀ ವಿಸ್ತೀರ್ಣ ಇರಬೇಕು. ಆದರೆ, ಮೈಸೂರು ನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ 128 ಕಿ.ಮೀ ಮಾತ್ರ ಇರೋದು. ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್‌ ಮೈಸೂರು ಬಗ್ಗೆ ಚಕಾರ ಎತ್ತಲಿಲ್ಲ. ಈಗ ಗ್ರೇಟರ್‌ ಮೈಸೂರು ನೆನಪಾಯಿತಾ? ಸಿದ್ದರಾಮಯ್ಯ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಸೆ.6ಕ್ಕೆ ಸಂಸದರ ಕಚೇರಿಗೆ ದಾಖಲೆಯೊಂದಿಗೆ ಹೋಗುತ್ತೇವೆ ಎಂದು ಅವರು ಹೇಳಿದರು.

ಕಾವೇರಿ ನೀರನ್ನು ನೀಡದಂತೆ ಡಿಕೆಶಿ ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ: ದೇವೇಗೌಡ ಆರೋಪ

ಸಿದ್ದರಾಮಯ್ಯ ವಿರುದ್ಧ ಶಾಸಕ ಜಿ.ಟಿ. ದೇವೇಗೌಡರು ವಾಗ್ದಾಳಿ ನಡೆಸಿರುವುದು ಸಂಸದ ಪ್ರತಾಪ್‌ ಸಿಂಹ ಬರೆದು ಕೊಟ್ಟಸ್ಕಿ್ರಪ್‌್ಟ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಕುಡಿಯುವ ನೀರಿನ ಯೋಜನೆ ಸೇರಿ ಎಲ್ಲಾ ಮಾಡಿರುವುದು ಸಿದ್ದರಾಮಯ್ಯ. ಜಿ.ಟಿ. ದೇವೇಗೌಡ ಜೊತೆಯೂ ಚರ್ಚೆಗೆ ಸಿದ್ಧ. ಬೇಕಾದರೆ ಸಂಸದ ಪ್ರತಾಪ್‌ ಸಿಂಹರನ್ನು ಕರೆದುಕೊಂಡು ಬನ್ನಿ ಎಂದು ಅವರು ಸವಾಲು ಹಾಕಿದರು. ಕುಮಾರಸ್ವಾಮಿ ಅವರ ಆರೋಗ್ಯ ಬೇಗ ಗುಣಮುಖವಾಗಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ನಮ್ಮ ನಾಯಕರು ಆರೋಗ್ಯ ವಿಚಾರಿಸಿದ್ದಾರೆ. ರಾಜಕೀಯ ಬೇರೆ, ಮಾನವೀಯತೆ ಬೇರೆ. ಒಂದು ತಿಂಗಳು ವಿಶ್ರಾಂತಿ ಪಡೆಯಿರಿ. ರಾಜಕಾರಣ ಮಾಡುವುದು ಇದ್ದೇ ಇರುತ್ತದೆ. ಸಂಪೂರ್ಣ ವಿಶ್ರಾಂತಿ ಪಡೆದು ಗುಣಮುಖರಾಗಿ ಬನ್ನಿ ಎಂದು ಅವರು ಸಲಹೆ ನೀಡಿದರು.

Follow Us:
Download App:
  • android
  • ios