Asianet Suvarna News Asianet Suvarna News

ಕಾವೇರಿ ನೀರನ್ನು ನೀಡದಂತೆ ಡಿಕೆಶಿ ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ: ದೇವೇಗೌಡ ಆರೋಪ

ತಮಿಳುನಾಡಿಗೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿರುವ ವಿಚಾರವಾಗಿ ಎಲ್ಲಿಯೂ ಮಾಹಿತಿ ನೀಡದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಆರೋಪಿಸಿದ್ದಾರೆ.

Ex PM HD Devegowda Slams On DK Shivakumar At Hassan gvd
Author
First Published Sep 4, 2023, 9:43 PM IST

ಹಾಸನ (ಸೆ.04): ತಮಿಳುನಾಡಿಗೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿರುವ ವಿಚಾರವಾಗಿ ಎಲ್ಲಿಯೂ ಮಾಹಿತಿ ನೀಡದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಆರೋಪಿಸಿದ್ದಾರೆ.

ತಮ್ಮ ಹುಟ್ಟೂರು ಹರದನಹಳ್ಳಿಯ ದೇವೇಶ್ವರ ಹಾಗೂ ಬೈಲಹಳ್ಳಿಯ ಲಕ್ಷ್ಮಿ ಜನಾರ್ಧನಸ್ವಾಮಿ ದೇಗುಲಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನೀರಾವರಿ ಸಚಿವರು ಯಾರಿಗೂ, ಯಾವುದೇ ಮಾಹಿತಿಯನ್ನು ನೀಡದಂತೆ ಅಧಿ​ಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಅ​ಧಿಕಾರಿಗಳಿಗೆ ಕರೆ ಮಾಡಿ ಡ್ಯಾಂನಲ್ಲಿರುವ ನೀರಿನ ಸಂಗ್ರಹ, ಹೊರಹರಿವು, ಒಳಹರಿವಿನ ಬಗ್ಗೆ ವಿಚಾರಿಸಿದರೆ ಅಧಿ​ಕಾರಿಗಳು ಮಾಹಿತಿ ನೀಡುತ್ತಿಲ್ಲ. ಏಕೆ ಎಂದು ಕೇಳಿದರೆ ನಮಗೆ ಸಚಿವರಿಂದ ಸೂಚನೆ ಇದೆ. ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಸ್ಪರ್ಧೆ: ದೇವೇಗೌಡ

‘ಕಾವೇರಿ ನೀರಿನ ವಿಷಯದಲ್ಲಿ ನಿಮ್ಮ ಮುಂದೆ ಏನು ಹೇಳಲಿಕ್ಕೂ ಈಗ ನನಗೆ ಶಕ್ತಿಯಿಲ್ಲ. ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕುಮಾರಸ್ವಾಮಿಯವರು ಈ ಬಗ್ಗೆ ಮಾತನಾಡಿದ್ದಾರೆ. ಸಭೆಯ ಸಾರಾಂಶವನ್ನು ನನಗೆ ತಿಳಿಸಿದ್ದಾರೆ. ಒಂದು ಕಡೆ ಸುಪ್ರೀಂಕೋರ್ಚ್‌ನಲ್ಲಿ ತೀರ್ಮಾನ ಕೊಡಲಿಲ್ಲ. ಇನ್ನೊಂದು ಕಡೆ ಪ್ರಾಧಿ​ಕಾರವು ತೀರ್ಮಾನ ಮಾಡಿಲ್ಲ. ಈ ಹಂತದಲ್ಲಿ ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ನಾನು ಮಾತನಾಡುವ ಟೈಂ ಇನ್ನೂ ಬರಬೇಕು. ಟೈಂ ಬಂದಾಗ ನಾನು ಮಾತನಾಡುತ್ತೇನೆ. ಪ್ರಧಾನಿ ಬಳಿ ನಾನೇ ಹೋಗಬೇಕು ಎನ್ನುವ ಸನ್ನಿವೇಶ ಬಂದಾಗ ನಾನೇ ಹೋಗ್ತಿನಿ’ ಎಂದರು.

ಕಾವೇರಿ ವಿಷಯದಲ್ಲಿ ನಾವು ತ.ನಾಡಿಂದ ಪಾಠ ಕಲೀಬೇಕು: ಕಾವೇರಿ ವಿಚಾ​ರ​ದಲ್ಲಿ ನಾವು ಒಗ್ಗ​ಟ್ಟಾಗಿ ಹೋರಾಡಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾಂಗ್ರೆಸ್‌, ಬಿಜೆಪಿ, ನಾವು ಒಂದಾಗಿ ರಾಜ್ಯದ ಹಿತ ಕಾಯ​ಬೇ​ಕಿ​ದೆ. ಕಾವೇರಿ ವಿಚಾ​ರ​ದಲ್ಲಿ ತಮಿ​ಳು​ನಾ​ಡಿ​ನಲ್ಲಿ ಪ್ರಾದೇ​ಶಿಕ ಪಕ್ಷ​ಗಳು ಒಂದಾಗಿ ಕೆಲಸ ಮಾಡು​ತ್ತವೆ. ಅವ​ರಿಂದ ನಾವು ಪಾಠ ಕಲಿ​ಯ​ಬೇ​ಕಿದೆ ಎಂದು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಹೇಳಿ​ದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿಗೆ ಸಂಬಂಧಿಸಿ ಮಂತ್ರಿಗಳು ಒಂದೊಂದು ಬಾರಿ ಒಂದೊಂದು ಹೇಳಿಕೆಗಳನ್ನು ಕೊಡುತ್ತಾ​ರೆ. ಮಂತ್ರಿಗಳೇ ಹೀಗೆ ಹೇಳಿದರೆ ಏನು ಹೇಳೋದು? ಇದು ಬಹಳ ಕಷ್ಟ. ನೀರಾವರಿ ಸಚಿ​ವರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾತನಾಡುತ್ತಾರೆ, ಅದರ ದುಷ್ಪರಿಣಾಮ, ಸತ್ಪರಿಣಾಮ ಏನು ಎಂಬು​ದನ್ನು ಯೋಚನೆ ಮಾಡಬೇಕು. ನನ್ನ ಬಳಿ ಇಬ್ಬರು ಅ​ಧಿಕಾರಿಗಳನ್ನು ಕಳುಹಿಸಿದ್ದರು. ಈ ರೀತಿ ಹೋಗೋಣ ಎಂದು ಹೇಳಿ ಕಳುಹಿ​ಸಿ​ದ್ದೇ​ನೆ. ನನ್ನ ಆರೋಗ್ಯ ಸರಿಯಿಲ್ಲ, ಆದ​ರೂ ಸಹಕಾರ ಕೊಡುತ್ತೇನೆ. ನೀರಾವರಿ ಮಂತ್ರಿ ನಡವಳಿಕೆ ಬಗ್ಗೆ ​ನಾನು ಪ್ರತಿ​ಕ್ರಿಯೆ ನೀಡಲ್ಲ ಎಂದ​ರು.

ಕಾವೇರಿ ವಿಚಾರಕ್ಕೆ ನಿಮ್ಮ ಜೊತೆ ಜೈಲಿಗೆ ಬರಲು ಸಿದ್ಧ: ಶಾಸಕ ಜಿ.ಟಿ.ದೇವೇಗೌಡ

ಕಾವೇರಿ ನೀರಿಗಾಗಿ ದೇವೇಗೌಡರ ಹೋರಾಟ ಏನೆಂಬುದು ಇಡೀ ನಾಡಿನ ಜನತೆಗೆ ಗೊತ್ತಿಲ್ಲವೇ? ಕಾವೇರಿ ನದಿ ನೀರು ಪ್ರಾಧಿ​ಕಾರಕ್ಕೆ ಜವಾಬ್ದಾರಿ ಇದೆ. ಯಾವ ರಾಜ್ಯದಲ್ಲಿ ಎಷ್ಟುನೀರಿದೆ, ಬೆಳೆ ಏನಿದೆ, ಎಷ್ಟುನೀರು ಕುಡಿಯಲು ಬೇಕಿದೆ ಎಂಬುದನ್ನು ತಿಳಿಯಲು ತಂಡ ಕಳುಹಿಸಿ ಮಾಹಿತಿ ಸಂಗ್ರಹಿ​ಸ​ಬೇ​ಕು. ರಾಜ್ಯದ ಹಕ್ಕು ಉಳಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ಮೂರೂ ಪಕ್ಷ​ಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಭಾವನೆ ಎಂದರು.

Follow Us:
Download App:
  • android
  • ios