ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಾರೆ: ಜಿ.ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಾರೆ. ನಾವೆಲ್ಲರೂ ಜೊತೆಗಿದ್ದೇವೆ, ಧೈರ್ಯವಾಗಿರು ಅಂತೀವಿ ಎಂದು ಕೊರಟಗೆರೆ ತಾಲೂಕಿನ ವಡ್ಡಗೆರೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ತುಮಕೂರು (ಡಿ.9): ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಾರೆ. ನಾವೆಲ್ಲರೂ ಜೊತೆಗಿದ್ದೇವೆ, ಧೈರ್ಯವಾಗಿರು ಅಂತೀವಿ ಎಂದು ಕೊರಟಗೆರೆ ತಾಲೂಕಿನ ವಡ್ಡಗೆರೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಯಾವುದೇ ವ್ಯಕ್ತಿ, ಪಕ್ಷ ಬರಬೇಕಾದ್ರೆ ನಮ್ಮ ಉದ್ದೇಶ ಏನು, ನಮ್ಮ ಕ್ಷೇತ್ರದ ಕೆಲಸ ಆಗಬೇಕು. ಆ ಕೆಲಸ ಸಾಮರ್ಥ್ಯ ಇರಬೇಕು. ಆ ಸಾಮರ್ಥ್ಯ ನನಗಿದೆ ಅಂತ ನಾನು ಅಂದುಕೊಂಡಿದ್ದೇನೆ. ಬೇರೆಯವರಿಗೆ ಇದೆಯೋ, ಇಲ್ಲವೋ ಅದು ಅವರಿಗೆ ಬಿಟ್ಟಿದ್ದು, ಈ ಬಗ್ಗೆ ಟೀಕೆ ಟಿಪ್ಪಣಿ ಮಾಡೊಕ್ಕೆ ಹೋಗಲ್ಲ. ನನಗೆ ಸಾಮರ್ಥ್ಯ ಇದೆ, ಈ ರಾಜ್ಯದಲ್ಲಿ ಒಬ್ಬ ಸಮರ್ಥ ನಾಯಕ ಅಂತ ಕಾಂಗ್ರೆಸ್ ಪಕ್ಷ ಗುರುತಿಸಿದೆ. ನನ್ನನ್ನು ಈ ರಾಜ್ಯದಲ್ಲಿ 8 ವರ್ಷ ಪಕ್ಷದ ಅಧ್ಯಕ್ಷನಾಗಿ ಇಟ್ಟಿದ್ದರು. ಯಾರ್ನೋ ಸುಮ್ಮ ಸುಮ್ಮನೆ ಇಟ್ಟಿರ್ತಾರಾ, ಕಾಂಗ್ರೆಸ್ ಪಕ್ಷದಲ್ಲಿ ಸುಮ್ಮ ಸುಮ್ಮನೇ ಅಧ್ಯಕ್ಷರನ್ನಾಗಿ ಕೂರಿಸುತ್ತಾರಾ. ಒಂದ್ ವರ್ಷ ಎರಡು ವರ್ಷ ಇರೋದೆ ಕಷ್ಟ, ಆದರೆ 8 ವರ್ಷ ಅಧ್ಯಕ್ಷರಾಗಿ ಇಟ್ಟಿದ್ದರು. ಆ ಸಾಮರ್ಥ್ಯ ನನಗಿದೆ ಅಂತ ಇಟ್ಟಿದ್ರಾ ಅಥವಾ ಸುಮ್ನೆ ಶಾಸ್ತ್ರಕ್ಕೆ ಇಟ್ಟಿದ್ರಾ? ಪರವಾಗಿಲ್ಲ, ಈತನಿಗೆ ಮ್ಯಾನೇಜ್ ಮಾಡುವ ಸಾಮರ್ಥ್ಯ ಇದೆ ಅಂತ ಅಧ್ಯಕ್ಷನನ್ನಾಗಿ ಮಾಡಿದ್ರು.
ಬೆಳಗ್ಗೆ ಎದ್ರೆ ನಮ್ಮ ಶಿವಕುಮಾರಣ್ಣ ಒದ್ದಾಡ್ತಾನೆ, ಹೇ ನಾವು ಜೊತೆಗಿದ್ದೇವೆ ಧೈರ್ಯವಾಗಿರಪ್ಪ ಅಂತ ಹೇಳ್ತೀವಿ. ಅಂತ ಸ್ಥಾನ ಅದು, ಪಕ್ಷವನ್ನು ಎರಡು ಬಾರಿ ಚುನಾವಣೆಗೆ ತೆಗೆದುಕೊಂಡು ಹೋಗುವ ಜವಬ್ದಾರಿ ಇದೆಯಲ್ಲಾ ಅದು ಸುಮ್ಮನೆ ಅಲ್ಲ. 224 ಜನರಿಗೆ ಟಿಕೆಟ್ ಕೊಡ್ಬೇಕು, ಗೆಲ್ಲಿಸಬೇಕು, ಸರ್ಕಾರ ಮಾಡ್ಬೇಕು. ಇದೇಲ್ಲಾ ಸಾಮಾನ್ಯ ಅಲ್ಲ, ಆದ್ದರಿಂದ ನಿಮ್ಮ ಆಶೀರ್ವಾದ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿವರೆಗೂ ನನಗೆ ಸಾಮರ್ಥ್ಯ ಇರುತ್ತೆ. ಇವತ್ತು ಎಲ್ಲಿಂದಲ್ಲೂ ಬರ್ತಾರೆ, ಹೇಗೇಗೋ ಬರ್ತಾರೆ, ಒಬ್ರು ಮೀಸೆ ಬಿಟ್ಕೊಂಡು ಬರ್ತಾರೆ. ಬಂದು ಡ್ರುರ್‌ರ್ ಶಬ್ಬಾಶ್ ಭಲೇ ಭಲೇ ಅಂತ್ ಹುಲಿವೇಶ ಹಾಕ್ತಾರೆ. ನಾನು ಹಾಗೇ ನೋಡ್ತಿನಿ, ಕೊರಟಗೆರೆಯಲ್ಲಿ 15 ವರ್ಷ, ಮಧುಗಿರಿಯಲ್ಲಿ 20 ವರ್ಷ ಹಿಂದೇ ಮುಂದೇ ನೋಡಿದ್ದೇನೆ. ನನ ಕಥೆ ಯಾಕ್ ಹೇಳೋಣ, ಒಂದು 1048 ಲಕ್ಷ ಕೆಲಸ ಮಾಡಿದ್ದು ಹೊರಟು ಹೋಯ್ತು. ಅದ್ಯಾವುದೋ ಅರ್ಧ ಅಡಿ ರಸ್ತೆ ಮಾಡದಿದ್ದಕ್ಕೆ ಡ್ರುರ್ ರ್ ಶಬ್ಬಾಶ್ ಅಂತಾರೆ. ಸುಮ್ಮೇ ಇರವ್ವ ಅದನ್ನು ಮಾಡ್ತೀನಿ ಅಂತ ಹೇಳಿದ್ದೇನೆ.
ಗೃಹ ಸಚಿವರ ಎದುರಲ್ಲೇ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ:
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಉದ್ಘಾಟನೆಗೆ ಬಂದಿದ್ದ ಗೃಹ ಸಚಿವ ಆರಗ ಜ್ಙಾನೇಂದ್ರ ಅವರ ಎದುರಲ್ಲೇ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಈ ಘಟನೆ ನಡೆದಿದ್ದು, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಡಿ: ಡಿಕೆಶಿ ಖಡಕ್ ವಾರ್ನಿಂಗ್
ಗೃಹ ಸಚಿವರ ಜೊತೆ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್. ಈ ವೇಳೆ ಕೇಸರಿ ಶಾಲು, ಬಿಜೆಪಿ ಶಾಲು ಧರಿಸಿದ್ದ ಬಿಜೆಪಿ ಕಾರ್ಯಕರ್ತರು. ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಲು ಧರಿಸಿದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ. ಈ ವೇಳೆ ಶಾಲು ತೆಗೆಯುವಂತೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲೇ ಎರಡೂ ಪಕ್ಷದ ಕಾರ್ಯಕರ್ತರು ಕಿತ್ತಾಡಿಕೊಂಡರು. ಗೃಹ ಸಚಿವರ ಎದುರಲ್ಲೇ ಪರಸ್ಪರ ಮಾತಿನ ಚಕಮಕಿ ನಡೆಸಿದರು.
ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯುವ ಪ್ರಯತ್ನ ಒಪ್ಪಿಕೊಂಡ: ಡಿಕೆಶಿ
ಈ ವೇಳೆ ಅನಿಲ್ ಕುಮಾರ್ ಗೆ ಜೈಕಾರ ಹಾಕಿದ ಬಿಜೆಪಿ ಕಾರ್ಯಕರ್ತರು. ಡಾ.ಜಿ.ಪರಮೇಶ್ವರ್ ಗೆ ಜೈಕಾರ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು. ಎರಡೂ ಕಾರ್ಯಕರ್ತರ ನಡುವೆ ಉಂಟಾದ ನೂಕಾಟ ತಳ್ಳಾಟ. ಬಳಿಕ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು. ಎರಡೂ ಪಕ್ಷದ ಕಾರ್ಯಕರ್ತರನ್ನ ಹೊರಗೆ ಕಳುಹಿಸಿ ವಸತಿ ಶಾಲೆ ಉದ್ಘಾಟನೆ.