ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯುವ ಪ್ರಯತ್ನ ಒಪ್ಪಿಕೊಂಡ: ಡಿಕೆಶಿ
ಜೆಡಿಎಸ್ ನಿಂದ 15 ಜನ ಸೋಲು ಕಂಡವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ, ಏನು ಬೇಕಾದರೂ ಆಗಬಹುದು ಎಂದಿರುವ ಡಿಕೆಶಿ ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯುವ ಪ್ರಯತ್ನವನ್ನು ಒಪ್ಪಿಕೊಂಡಿದ್ದಾರೆ.
ಬೆಂಗಳೂರು (ಡಿ.9): ವಲಸಿಗರು ಹಾಗೂ ಅನ್ಯ ಪಕ್ಷದವರನ್ನು ಪಕ್ಷಕ್ಕೆ ಸೆಳೆಯುವ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇರ್ ವಿ ಬಿ ಸರ್ಫೈಸ್ಸ್ ಇರುತ್ತದೆ. ಬೇಕಾದಷ್ಟು ಸರ್ಫೈಸ್ಸ್ ಇರುತ್ತದೆ, ಕೆಲವೊಂದು ಕ್ಷೇತ್ರಗಳಲ್ಲೂ ಇರುತ್ತದೆ. ಬರೀ ವಲಸಿಗರ ಬಗ್ಗೆ ಯಾಕೆ ಯೋಚನೆ ಮಾಡ್ತಾ ಇದ್ದೀರಾ. ಬಣಕಾರ್ ,ಪಾಟೀಲ್, ಮುಧುಬಂಗಾರಪ್ಪ, ಶರತ್ ಬಚ್ಚೇಗೌಡ ವಲಸಿಗರಾ? ಮಸ್ಕಿ ಅಭ್ಯರ್ಥಿ ವಲಸಿಗರಾ? ಮಸ್ಕಿಯಲ್ಲಿ ಹೋದ ತಕ್ಷಣ ಇನ್ನೊಬ್ಬರು ಬಂದರು. ಹೊಸ ಕೋಟೆಯಲ್ಲಿ ಹೋದರು, ಇನ್ನೊಬ್ಬರು ಬಂದ್ರು. ಒಬ್ಬರು ಖಾಲಿ ಆಗುತ್ತಿತ್ತಂದೆ ಇನ್ನೊಬ್ಬರು ರೆಡಿ ಆಗ್ತಾ ಇರ್ತಾರೆ. ಹೆಬ್ಬಾರ್ ಕ್ಷೇತ್ರದಲ್ಲಿ ವಿ.ಎಸ್ ಪಾಟೀಲ್ ಅರ್ಜಿ ಹಾಕಿದ್ದಾರೆ. ಅರ್ಜಿ ನನಗೆ ಕೊಟ್ಟು ಹೋಗಿದ್ದಾರೆ. ಹಾನಗಲ್ ನಲ್ಲಿ ಬಣಕಾರ್ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. ಅವರನ್ನು ಪಾರ್ಟಿ ಸೇರಿಸಿಕೊಂಡಿದ್ದೇವೆ. ಜೆಡಿಎಸ್ ನಿಂದ 15 ಜನ ಸೋಲು ಕಂಡವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ, ಏನು ಬೇಕಾದರೂ ಆಗಬಹುದು ಎಂದಿರುವ ಡಿಕೆಶಿ ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯುವ ಪ್ರಯತ್ನವನ್ನು ಒಪ್ಪಿಕೊಂಡಿದ್ದಾರೆ.
ಡಿಕೆಶಿ ವಿರುದ್ಧ ಹೇಳಿಕೆ: ಕಾವು ಹೇಮನಾಥ ಶೆಟ್ಟಿ ವಜಾ
ಮಂಗಳೂರು:‘ದುಡ್ಡಿದ್ದರೆ ಡಿಕೆಶಿಯನ್ನು ಖರೀದಿ ಮಾಡಬಹುದು ನಮ್ಮನ್ನಲ್ಲ’ ಎನ್ನುವ ಮೂಲಕ ಕಾಂಗ್ರೆಸ್ ಟಿಕೆಟ್ ಡಿಕೆ ಶಿವಕುಮಾರ್ ದುಡ್ಡಿಗೆ ಮಾರಾಟ ಮಾಡುತ್ತಾರೆ ಎನ್ನುವ ರೀತಿ ಹೇಳಿಕೆ ನೀಡಿದ ಪುತ್ತೂರಿನ ಕಾಂಗ್ರೆಸ್ ನಾಯಕ, ಕೊಡಗಿನ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟಿದೆಯೆ? ಎಂದು ಅನುಮಾನ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕೆಪಿಸಿಸಿ ಸಂಯೋಜಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾವು ಹೇಮಾನಾಥ ಶೆಟ್ಟಿಸಭೆಯೊಂದರಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ನಾನಾ ರೀತಿಯ ಚರ್ಚೆಗಳು ಪ್ರಾರಂಭವಾಗಿತ್ತು.
ಡಿಕೆಶಿ ಪುಡಿ ರೌಡಿ, ನಲಪಾಡ್ ಮರಿ ರೌಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಕೋಡಿಂಬಾಡಿ ಅಶೋಕ್ ರೈ ಯವರು ’ದುಡ್ಡಿದೆಯೆಂದು ಡಿಕೆಶಿಯವರಿಂದ ಹಿಡಿದು ಎಲ್ಲರನ್ನೂ ಖರೀದಿ ಮಾಡಿಕೊಂಡು ಬಂದು ನಮ್ಮನ್ನೆಲ್ಲಾ ಖರೀದಿ ಮಾಡಲು ಸಾಧ್ಯವಿಲ್ಲ’ ಎಂದು ಹೇಮಾನಾಥ ಶೆಟ್ಟಿಯವರು ಸಭೆಯಲ್ಲಿ ಆಕ್ರೋಶ ಭರಿತರಾಗಿ ಮಾತನಾಡಿದ್ದಾರೆ. ಈ ಹೇಳಿಕೆ ಈಗ ವಿವಾದದ ಕಿಡಿ ಹತ್ತಿಸಿದೆ.
ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಡಿ: ಡಿಕೆಶಿ ಖಡಕ್ ವಾರ್ನಿಂಗ್
ಈ ವಿಡಿಯೋ ಹೇಳಿಕೆಯನ್ನು ಅಧಾರವಾಗಿಟ್ಟುಕೊಂಡು ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರೊಬ್ಬರು ಕೆಪಿಸಿಸಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಕೆಪಿಸಿಸಿ ಕೊಡಗಿನ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ವಜಾಗೊಳಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆದೇಶ ಹೊರಡಿಸಿದ್ದಾರೆ.