Asianet Suvarna News Asianet Suvarna News

ಕರ್ನಾಟಕದಲ್ಲಿ ಅನ್ಯರ ಬೆಂಬಲದ ಸಮ್ಮಿಶ್ರ ಸರ್ಕಾರವಿದೆ: ಡಿಕೆಶಿ

ಕಾಂಗ್ರೆಸ್‌ ಪರ ರಾಜ್ಯದಲ್ಲಿ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದನ್ನ ಪಕ್ಷ ತನ್ನಪರ ಇನ್ನೂ ಹೆಚ್ಚು ಮಾಡಿಕೊಳ್ಳಲಿದೆ ಎಂದರಲ್ಲದೆ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಯಾರು ಬೇಕಾದರೂ ಕಾಂಗ್ರೆಸ್‌ ಪಕ್ಷಕ್ಕೆ ಬರಬಹುದು: ಡಿ.ಕೆ.ಶಿವಕುಮಾರ್‌

KPCC President DK Shivakumar Slams Karnataka BJP Government grg
Author
First Published Dec 2, 2022, 2:57 PM IST

ಕಲಬುರಗಿ(ಡಿ.02): ಪ್ರಜಾಪ್ರಭುತ್ವದ ಕುರಿತು ಕರ್ನಾಟಕ ರಾಜ್ಯದ ಜನರಿಗೆ ಇರುವ ಗೌರವವನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದ ಅವರು, ತಮ್ಮದು ಭ್ರಷ್ಟಆಡಳಿತ ಮತ್ತು ರಾಜ್ಯದಲ್ಲಿ ಸದ್ಯಕ್ಕೆ ಇರುವುದು ಭ್ರಷ್ಟ ಸರ್ಕಾರ ಎನ್ನುವುದನ್ನು ಬಿಜೆಪಿ ಸಾಬಿತು ಮಾಡಿದೆ. ಅಷ್ಟೇ ಏಕೆ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಭ್ರಮೆ ಬಿಜೆಪಿ ಮುಖಂಡರಲ್ಲಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಬೇರೆಯವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕಾಂಗ್ರೆಸ್‌ ಪರ ರಾಜ್ಯದಲ್ಲಿ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದನ್ನ ಪಕ್ಷ ತನ್ನಪರ ಇನ್ನೂ ಹೆಚ್ಚು ಮಾಡಿಕೊಳ್ಳಲಿದೆ ಎಂದರಲ್ಲದೆ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಯಾರು ಬೇಕಾದರೂ ಕಾಂಗ್ರೆಸ್‌ ಪಕ್ಷಕ್ಕೆ ಬರಬಹುದು ಎಂದು ಮುಕ್ತ ಆಹ್ವಾನ ನೀಡಿದ್ದೇನೆ. ಹಾಗಾಗಿ, ಪಕ್ಷಕ್ಕೆ ಯಾರೇ ಬರುವುದಿದ್ದರೂ ಬೇಷರತ್ತಾಗಿ ಬರಬಹುದು ಎಂದರು.

ಜೆಡಿಎಸ್‌ ಮೊದಲ ಪಟ್ಟಿ ಶಾಶ್ವತ ಅಲ್ಲ: ದೇವೇಗೌಡ

ಸಿದ್ದು-ಡಿಕೆಶಿ ಮಧ್ಯೆ ಗ್ಯಾಪ್‌ ಇಲ್ಲ:

ತಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಬಿರುಕಿಲ್ಲ. ಸುಖಾಸುಮ್ಮನೆ ತಮ್ಮಿಬ್ಬರ ಮಧ್ಯೆ ಗ್ಯಾಪ್‌ ಇದೆ ಎಂದು ಮಾಧ್ಯಮದವರೇ ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮಜಾಯಿಷಿ ನೀಡಿದರು. ನಮ್ಮ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸೃಷ್ಟಿಮಾಡಿ ವದಂತಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯ ಸದಾನಂದ ಗೌಡ, ಯತ್ನಾಳ್‌ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ? ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಮುಚ್ಚಿಕೊಳ್ಳಲಿ ಎಂದರು.
 

Follow Us:
Download App:
  • android
  • ios