ರಾಜ್ಯದಲ್ಲಿ ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಲುವಾಗಿ ಕುಮಾರಸ್ವಾಮಿಗೆ ಸಿಎಂ ಪಟ್ಟಕೊಟ್ಟೆವು. ಆಗ, ಕಾಂಗ್ರೆಸ್‌ ಯಾವುದೇ ಷರತ್ತಿಲ್ಲದೆ ಅವರಿಗೆ ಬೆಂಬಲ ನೀಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. 

ಮಂಡ್ಯ (ಜ.28): ರಾಜ್ಯದಲ್ಲಿ ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಲುವಾಗಿ ಕುಮಾರಸ್ವಾಮಿಗೆ ಸಿಎಂ ಪಟ್ಟಕೊಟ್ಟೆವು. ಆಗ, ಕಾಂಗ್ರೆಸ್‌ ಯಾವುದೇ ಷರತ್ತಿಲ್ಲದೆ ಅವರಿಗೆ ಬೆಂಬಲ ನೀಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದ ಮಂಡ್ಯ ವಿವಿ ಆವರಣದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ನಡೆಸುವ ಸಮಯದಲ್ಲಿ ಕುಮಾರಸ್ವಾಮಿಗೆ ಯಾವುದೇ ತೊಂದರೆಯನ್ನೂ ಕೊಡಲಿಲ್ಲ, ಮೋಸವನ್ನೂ ಮಾಡಲಿಲ್ಲ. 

ಅವರ ಮಗನನ್ನು ಮಂಡ್ಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಯಾಗಿ ನಿಲ್ಲಿಸಲು ಸಹಕರಿಸಿದೆವು. ಅವರಿಂದ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲವೆಂದರೆ ನಾವೇನು ಮಾಡೋಣ. ದೇವೇಗೌಡರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಕಾಂಗ್ರೆಸ್‌, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೂ ನಾವೇನೇ. ಸರ್ಕಾರ ಉರುಳುವ ಸಮಯದಲ್ಲಿ ವಿದೇಶಕ್ಕೆ ಹೋಗುವಂತೆ ನಾವು ಅವರಿಗೆ ಹೇಳಿದ್ದೆವಾ ಎಂದು ಪ್ರಶ್ನಿಸಿದರು.

ಯುವಕರೇ ಸಂಸ್ಕೃತಿಯ ರಕ್ಷಕರು: ನಟ ಸುಚೇಂದ್ರ ಪ್ರಸಾದ್

ಕೇಸ್‌ಗಳಿಗೆಲ್ಲಾ ಹೆದರೋಲ್ಲ: ರೈತರ ಹಿತ ಕಾಪಾಡಲು ಮೇಕೆದಾಟು ಪಾದಯಾತ್ರೆ ಕೈಗೊಂಡೆವು. ಆ ಸಮಯದಲ್ಲಿ ನನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಕೊರೋನಾ ನೆಪ ಮುಂದಿಟ್ಟುಕೊಂಡು ಕೇಸ್‌ ಹಾಕಿದರು. ಬಿಜೆಪಿ ವಿರುದ್ಧ ಧ್ವನಿ ಎತ್ತಿದವರಿಗೆ ಇಡಿ, ಸಿಬಿಐನಿಂದ ದಾಳಿ ಮಾಡಿಸಿದರು. ವಿಚಾರಣೆ ಹೆಸರಿನಲ್ಲಿ ನೋಟಿಸ್‌ ಕೊಟ್ಟು ಬೆದರಿಸಿದರು. ಆದರೆ, ಈ ಬೆದರಿಕೆಗಳಿಗೆಲ್ಲಾ ನಾವು ಹೆದರುವವರಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಬೆಂಗಳೂರು-ಮೈಸೂರು ಹೈವೆ ಯೋಜನೆ ಕಾಂಗ್ರೆಸ್‌ದು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಮೊದಲು ಅಡಿಗಲ್ಲು ಹಾಕಿದ್ದು ನಾವು. ಆಸ್ಕರ್‌ ಫರ್ನಾಂಡೀಸ್‌ ಅವರು ಹೆದ್ದಾರಿ ಸಚಿವರಾಗಿದ್ದ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ನಾನು ಹೋಗಿ 14 ಸಾವಿರ ಕೋಟಿ ರು.ಗೆ ಯೋಜನೆಗೆ ಮಂಜೂರಾತಿ ಪಡೆದುಕೊಂಡು ಬಂದಿದ್ದೆವು. ಅದನ್ನು ಬಿಜೆಪಿಯವರು ಉದ್ಘಾಟನೆ ಮಾಡುವುದಕ್ಕೆ ರೆಡಿಯಾಗಿದ್ದಾರೆ ಎಂದು ಕುಟುಕಿದರು.

ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

ಡಿಕೆಶಿಗೆ ಕಬ್ಬು, ಬೆಲ್ಲ, ಪೈನಾಪಲ್‌ ಹಾರ: ‘ಪ್ರಜಾಧ್ವನಿ’ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಡಿ.ಕೆ.ಶಿವಕುಮಾರ್‌ಗೆ ಮಂಡ್ಯದ ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್‌ ಕಬ್ಬಿನ ಹಾರ, ಬೆಲ್ಲದ ಹಾರ ಮತ್ತು ಪೈನಾಪಲ್‌ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಹಾರದಲ್ಲಿದ್ದ ಪೈನಾಪಲ್‌ ಹಣ್ಣನ್ನು ಡಿ.ಕೆ.ಶಿವಕುಮಾರ್‌ ಕಿತ್ತು ತಿಂದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ$ಅವರನ್ನು ಕರೆದೊಯ್ಯಲಾಯಿತು.