Asianet Suvarna News Asianet Suvarna News

Udupi: ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

ಬಿಜೆಪಿಯವರು ಕರಾವಳಿ ಜಿಲ್ಲೆಗಳನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹುನ್ನಾರ  ಮಾಡಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

We Are Not Making the Coast a Laboratory of Hindutva Says CM Basavaraj Bommai At Udupi gvd
Author
First Published Jan 27, 2023, 8:20 PM IST

ಉಡುಪಿ (ಜ.27): ಬಿಜೆಪಿಯವರು ಕರಾವಳಿ ಜಿಲ್ಲೆಗಳನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹುನ್ನಾರ  ಮಾಡಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಉಡುಪಿಯ ಕಾರ್ಕಳದಲ್ಲಿ ಪರಶುರಾಮ ತೀಂ ಪಾರ್ಕ್ ಉದ್ಘಾಟನೆಗೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ, ಮಾಧ್ಯಮದವರೊಂದಿಗೆ ಹೆಲಿಪ್ಯಾಡ್‌ನಲ್ಲಿ ಮಾತನಾಡಿದರು. 

ನಾವು ಕರಾವಳಿಯನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹೊರಟಿಲ್ಲ..ಕಾಂಗ್ರೆಸ್ ತುಚ್ಚೀಕರಣ ರಾಜಕೀಯ ಮಾಡುತ್ತಿದೆ.ಒಂದು ವರ್ಗವನ್ನು ತಲೆಯ ಮೇಲೆ ಕೂರಿಸಿಕೊಂಡು ಕುಣಿಸ್ತಾ ಇದ್ದಾರೆ. ಹಾಗಾಗಿ ಅವರಿಗೆ ಈ ರೀತಿ ಅನಿಸುತ್ತಿದೆ ಅಷ್ಟೇ. ಬಡವರು ದೀನ ದಲಿತರು ಹಿಂದುಳಿದ ವರ್ಗದವರು  ಹಲವಾರು ವರ್ಷ ಇವರನ್ನು ಬೆಂಬಲಿಸಿದವರು ಕೈಬಿಟ್ಟಿದ್ದಾರೆ. ತುಚ್ಚಿ ಕರಣ ರಾಜಕೀಯ ಮಾಡಲು ನಾವು ಬಿಡಲ್ಲ ಎಂದಿದ್ದಾರೆ. 

ಬಜೆಟ್ ನಲ್ಲಿ ಕರಾವಳಿಗೆ ಆದ್ಯತೆ ನೀಡುತ್ತೇವೆ.ಆರ್ಥಿಕ ವಲಯದಲ್ಲಿ ಕರಾವಳಿಗೆ ಪ್ರಮುಖ ಸ್ಥಾನವಿದೆ. ಕರಾವಳಿಯ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಮೂಲ ಉದ್ಯೋಗಕ್ಕೆ ಬೆಂಬಲ ಕೊಡುವ ಕೆಲಸ ಮಾಡುತ್ತೇವೆ. ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸುತ್ತೇವೆ. ಕಾದು ನೋಡಿ ಕರಾವಳಿಯಲ್ಲಿ ಬಜೆಟ್‌ನಲ್ಲಿ ಸೂಕ್ತ ಅನುದಾನ‌ ನೀಡ್ತೇವೆ ಎಂದು ಭರವಸೆ ನೀಡಿದರು. 

ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು: ಸಿದ್ದುಗೆ ಟಾಂಗ್‌ ಕೊಟ್ಟ ಸಿ.ಟಿ.ರವಿ

ಪ್ರಧಾನಿ‌ ಮೋದಿ ನಿರಂತರ ಬೇಟಿಯಿಂದ ಬಿಜೆಪಿಗೆ ಲಾಭವಿಲ್ಲ. ಸಿದ್ದರಾಮಯ್ಯ ಹೇಳಿಕೆಗೆ ಖಾರವಾಗಿ ಉತ್ತರಿಸಿದ ಬೊಮ್ಮಾಯಿ, ಮೋದಿಯವರು ಬಂದಾಗ ಜನಸಾಗರ ನೋಡಿ ಸಿದ್ದರಾಮಯ್ಯ ಭಯಪಟ್ಟಿದ್ದಾರೆ. ಗುಲ್ಬರ್ಗ ಬೆಂಗಳೂರು ಮೈಸೂರು ಮಂಗಳೂರು ಮೋದಿ ಸಭೆ ನೋಡಿ ಗಾಬರಿ ಪಟ್ಟಿದ್ದಾರೆ. ಸಿದ್ದರಾಮಯ್ಯ ತಮ್ಮ ಭಯ ಅಡಗಿಸಲು ಈ ರೀತಿ ಹೇಳಿಕೆ ನೀಡುತ್ತಾರೆ ಎಂದರು.

Follow Us:
Download App:
  • android
  • ios